Smartphone: ಭಾರತೀಯರು ದಿನಕ್ಕೆ ಎಷ್ಟು ಬಾರಿ ಫೋನ್ ತೆರೆಯುತ್ತಾರೆ? ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಆಘಾತಕಾರಿ ವರದಿ ಬಹಿರಂಗ

Smartphone:ಸ್ಮಾರ್ಟ್‌ಫೋನ್‌ ಬಳಕೆ ಕುರಿತಂತೆ ವರದಿಯೊಂದು ಬಹಿರಂಗವಾಗಿದೆ. ಈ ವರದಿಯಲ್ಲಿ ನಮ್ಮ ಭಾರತೀಯ ಸ್ಮಾರ್ಟ್‌ಫೋನ್‌ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ ಎಂದು ತಿಳಿದುಬಂದಿದೆ.   

Written by - Yashaswini V | Last Updated : Feb 14, 2024, 12:15 PM IST
  • ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ವರದಿಯ ಪ್ರಕಾರ, ಆಗಾಗ್ಗೆ ಫೋನ್ ಸ್ಪರ್ಶಿಸುವ ಅಭ್ಯಾಸ ಬಹುತೇಕ ಜನರಿಗೆ ಇದೆಯಾದರೂ, ಅವರಲ್ಲಿ ಸುಮಾರು 50% ಜನರಿಗೆ ತಾವು ಸ್ಮಾರ್ಟ್‌ಫೋನ್‌ ತೆರೆಯುವ ಉದ್ದೇವವೇ ತಿಳಿದಿರುವುದಿಲ್ಲವಂತೆ.
  • ಈ ವರದಿಯಲ್ಲಿ 50-55% ಜನರಿಗೆ ತಾವು ಫೋನ್ ಅನ್ನು ಏಕೆ ತೆರೆಯುತ್ತೇವೆ ಎಂಬುದೇ ಗೊತ್ತಿರುವುದಿಲ್ಲ.
  • ಆದರೆ 45-50% ರಷ್ಟು ಜನರು ಕೆಲವು ನಿರ್ದಿಷ್ಟ ಕೆಲಸಗಳಿಗಷ್ಟೇ ಫೋನ್ ತೆರೆಯುತ್ತಾರೆ ಎಂದು ಹೇಳಲಾಗಿದೆ.
Smartphone: ಭಾರತೀಯರು ದಿನಕ್ಕೆ ಎಷ್ಟು ಬಾರಿ ಫೋನ್ ತೆರೆಯುತ್ತಾರೆ? ಸ್ಮಾರ್ಟ್‌ಫೋನ್‌  ಬಳಕೆ ಬಗ್ಗೆ ಆಘಾತಕಾರಿ ವರದಿ ಬಹಿರಂಗ  title=

Smartphone: ಪ್ರಸ್ತುತ, ಸ್ಮಾರ್ಟ್‌ಫೋನ್‌ ನಮ್ಮ ನಿಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ. ಸ್ಮಾರ್ಟ್‌ಫೋನ್‌ ಇಲ್ಲದೆ ಜೀವನವೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಫೋನ್ ಎಲ್ಲರನ್ನೂ ಆವರಿಸಿದೆ. ಆದರೆ, ನಿತ್ಯ ನಾವು ಸ್ಮಾರ್ಟ್‌ಫೋನ್‌ ಅನ್ನು ಎಷ್ಟು ಬಳಸುತ್ತೇವೆ ಎಂದು ನಿಮಗೆ ತಿಳಿದಿದೆಯೇ? 

ವರದಿಯೊಂದರ ಪ್ರಕಾರ, ಸರಾಸರಿ ಭಾರತೀಯ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಸ್ಮಾರ್ಟ್‌ಫೋನ್‌ ಅನ್ನು ಸ್ಪರ್ಶಿಸುತ್ತಾರೆ. ಇವರಲ್ಲಿ ಸುಮಾರು ಅರ್ಧದಷ್ಟು ಜನರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ, ಆಗಾಗ್ಗೆ ಫೋನ್ ತೆರೆಯುವ ಅಭ್ಯಾಸ ಹೊಂದಿದ್ದಾರೆ ಎಂದು ತಿಳಿದುಬಂದಿದೆ. 

50% ಜನರಿಗೆ ತಾವು ಫೋನ್ ತೆರೆಯುವ ಉದ್ದೇಶವೇ ತಿಳಿದಿರುವುದಿಲ್ಲ: 
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ವರದಿಯ ಪ್ರಕಾರ, ಆಗಾಗ್ಗೆ ಫೋನ್ ಸ್ಪರ್ಶಿಸುವ ಅಭ್ಯಾಸ ಬಹುತೇಕ ಜನರಿಗೆ ಇದೆಯಾದರೂ, ಅವರಲ್ಲಿ ಸುಮಾರು 50% ಜನರಿಗೆ ತಾವು ಸ್ಮಾರ್ಟ್‌ಫೋನ್‌ ತೆರೆಯುವ ಉದ್ದೇವವೇ ತಿಳಿದಿರುವುದಿಲ್ಲವಂತೆ. ಈ ವರದಿಯಲ್ಲಿ 50-55% ಜನರಿಗೆ ತಾವು ಫೋನ್ ಅನ್ನು ಏಕೆ ತೆರೆಯುತ್ತೇವೆ ಎಂಬುದೇ ಗೊತ್ತಿರುವುದಿಲ್ಲ. ಆದರೆ 45-50% ರಷ್ಟು ಜನರು ಕೆಲವು ನಿರ್ದಿಷ್ಟ ಕೆಲಸಗಳಿಗಷ್ಟೇ ಫೋನ್ ತೆರೆಯುತ್ತಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ- ಫೋನ್‌ನ ಪರದೆಯ ಮೇಲೆ ಸಿಂಬಲ್ ಡ್ರಾ ಮಾಡಿದರೆ ತೆರೆಯುತ್ತೆ ಅಪ್ಲಿಕೇಶನ್! ಇಲ್ಲಿದೆ ಅದ್ಭುತ ಟ್ರಿಕ್!

ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಜನರ ಅಭಿಪ್ರಾಯ: 
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್  ಬಳಕೆ ಹೆಚ್ಚಾಗಿರುವುದರಿಂದ "ಸ್ಮಾರ್ಟ್‌ಫೋನ್ ಅನುಭವವನ್ನು ಮರುರೂಪಿಸುವುದು ಮತ್ತು ಸ್ಮಾರ್ಟ್ ಫೋನ್‌ಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ" ಎಂಬ ಶೀರ್ಷಿಕೆಯಡಿಯಲ್ಲಿ ಸಾವಿರಕ್ಕೂ ಹೆಚ್ಚು ಜನರಿಂದ  ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವರದಿಯು ಇಂದು ಜನರು ಹೇಗೆ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂಬುದರ ಕುರಿತು ಬೆಳಕು ಚೆಲ್ಲುತ್ತದೆ. ಈ ವರದಿಯು ಭಾರತದಾದ್ಯಂತ ಜನರು ಈ ಸ್ಮಾರ್ಟ್‌ಫೋನ್ ಅನ್ನು ಹೇಗೆ ಬಳಸುತ್ತಾರೆ, ಇದರ ಪ್ರಾಮುಖ್ಯತೆ ಕುರಿತಂತೆ ಜನರ ಅಭಿಪ್ರಾಯವೇನು ಎಂಬಿತ್ಯಾದಿ ಮಾಹಿತಿಗಳನ್ನು ಕುರಿತು ನೈಜ ಡೇಟಾವನ್ನು ಆಧರಿಸಿದೆ.

'ನಮ್ಮ ಸಂಶೋಧನೆಯಲ್ಲಿ, ಜನರು ತಮ್ಮ ಫೋನ್‌ಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿದಿಲ್ಲದ ಅರ್ಧದಷ್ಟು ಜನರು ಆಗಾಗ್ಗೆ ಸುಮ್ಮನೆ ಫೋನ್ ತೆರೆದುನೋಡುವ ಅಭ್ಯಾಸದಿಂದಾಗಿ ಹಾಗೆ ಮಾಡುತ್ತಾರೆ ಎಂದು ನಾವು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ, 'ಸರ್ಫೇಸ್' ಅನ್ನು ಸ್ಮಾರ್ಟ್ ರೀತಿಯಲ್ಲಿ ಬಳಸುವ ಮೂಲಕ, ಜನರಿಗೆ ಅವರ ಆಸಕ್ತಿಗೆ ಅನುಗುಣವಾಗಿ ಅವರಿಗೆ ಮುಖ್ಯವಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದು ಎಂದು ಸೆಂಟರ್ ಫಾರ್ ಕಸ್ಟಮರ್ ಇನ್‌ಸೈಟ್ಸ್ ಇಂಡಿಯಾದ ಪ್ರಮುಖರಾದ ಕನಿಕಾ ಸಂಘಿ ತಿಳಿಸಿದ್ದಾರೆ. 

ಇದನ್ನೂ ಓದಿ- ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಹೀಗೊಂದು ಸಲಹೆ ನೀಡಿದ ಸರ್ಕಾರ! 

ವರದಿಯಲ್ಲಿ ಬಹಿರಂಗವಾಗಿರುವ ಇತರ ಮಾಹಿತಿಗಳು ಕೆಳಕಂದಂತಿವೆ: 
ವಾಸ್ತವವಾಗಿ, ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಶಕಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ವಿಧಾನಗಳು ಸಾಕಷ್ಟು ಹೆಚ್ಚಾಗಿದೆ. ಮೊದಲು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂವಹನಕ್ಕಾಗಿ ಬಳಸಲ್ಪಡುತ್ತಿದ್ದ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಉದಾಹರಣೆಗೆ:
* ಮನರಂಜನೆ.
* ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು. 
* ಮಾಹಿತಿ ಹುಡುಕಾಟ. 
* ಗೇಮ್ಸ್. 
* ಡಿಜಿಟಲ್ ಪೇಮೆಂಟ್. 
* ನ್ಯೂಸ್. 
* ಅಧ್ಯಯನ ಸೇರಿದಂತೆ ಇನ್ನೂ ಹಲವು ಕೆಲಸಗಳಿಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗುತ್ತಿದೆ. 

ಒಟ್ಟಾರೆಯಾಗಿ ಹಲವು ಅನುಕೂಲಗಳೊಂದಿಗೆ ನಮ್ಮ ಜೀವನವನ್ನು ಸುಲಭಗೊಳಿಸಿರುವ ಸ್ಮಾರ್ಟ್‌ಫೋನ್, ಅದರ ಅತಿಯಾದ ಬಳಕೆಯಿಂದಾಗಿ ಸಂಬಂಧಗಳನ್ನು ದೂರ ಮಾಡುತ್ತಿದೆ. ಮಕ್ಕಳು ಕೂಡಿ ಆಡುವುದನ್ನು ಬಿಟ್ಟು ಆನ್‌ಲೈನ್‌ನಲ್ಲಿ ಗೇಮ್ ಆಡುತ್ತಾ ಸಾಮಾಜಿಕವಾಗಿ ಬೇರೆಯವರೊಂದಿಗೆ ಬೆರೆಯುವುದನ್ನೇ ಮರೆತಿದ್ದಾರೆ. ಸದಾ ಫೋನ್‌ನಲ್ಲಿಯೇ ಕಾಲ ಕಳೆಯುವ ಮಂದಿ ತಮ್ಮ ಮನೆಯೊಳಗೆ ಇರುವವರ ಮುಖ ನೋಡುವುದೇ ಅಪರೂಪವಾಗುತ್ತಿದೆ ಎಂಬುದು ವಿಪರ್ಯಾಸ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News