Wi-Fi Password: ನಿಮ್ಮ ವೈ-ಫೈ ಪಾಸ್‌ವರ್ಡ್ ಮರೆತಿರುವಿರಾ? ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ
Wi-Fi Password: ವೈ-ಫೈ ಪಾಸ್‌ವರ್ಡ್ ಮರೆಯುವುದು ಸರ್ವೇ ಸಾಮಾನ್ಯ. ಆದರೆ, ಕೆಲವು ಸಿಂಪಲ್ ವಿಧಾನಗಳ ಮೂಲಕ ನೀವು ನಿಮ್ಮ ವೈ-ಫೈ ಪಾಸ್‌ವರ್ಡ್ ಅನ್ನು ಸುಲಭವಾಗಿ ಕಂಡು ಹಿಡಿಯಬಹುದು.
Wi-Fi Password: ನಿಮ್ಮ ಮನೆ ಅಥವಾ ಕಚೇರಿಯ ವೈ-ಫೈ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನೀವು ಕ್ಷಣಾರ್ಧದಲ್ಲಿ ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. Android ಮತ್ತು iPhone ನಲ್ಲಿ ಸೇವ್ ಮಾಡಲಾದ ವೈ-ಫೈ ಪಾಸ್‌ವರ್ಡ್‌ಗಳನ್ನು ಕಂಡು ಹಿಡಿಯಲು ಕೆಲವು ಸರಳ ಟ್ರಿಕ್ ಗಳು ತುಂಬಾ ಪ್ರಯೋಜನಕಾರಿ ಆಗಿದೆ.
ವಾಸ್ತವವಾಗಿ, ಯಾವುದೇ ಒಂದು ಸಾಧನದಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ಸೇವ್ ಮಾಡಿದ್ದರೆ, ಅದನ್ನು ಮತ್ತೆ ನಮೂದಿಸುವ ಅಗತ್ಯವಿಲ್ಲ. ನೀವು ಆ ವೈ-ಫೈ ವ್ಯಾಪ್ತಿಯೊಳಗೆ ಬಂದ ತಕ್ಷಣ, ನಿಮ್ಮ ಫೋನ್ ಅಥವಾ ಸಾಧನದಲ್ಲಿನ ವೈ-ಫೈ ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳುತ್ತದೆ. ಹಾಗಾಗಿ, ನಾವು ಪದೇ ಪದೇ ಪಾಸ್‌ವರ್ಡ್ ಉಪಯೋಗಿಸದೇ ಇರುವುದರಿಂದ ಹಲವು ಬಾರಿ ವೈ-ಫೈ ಪಾಸ್‌ವರ್ಡ್ ಮರೆತುಬಿಡುತ್ತೇವೆ.
ಸ್ನೇಹಿತರು/ಸಂಬಂಧಿಕರು ಮನೆಗೆ ಬಂದಾಗ ವೈ-ಫೈ ಪಾಸ್‌ವರ್ಡ್ ಅನ್ನು ಕೇಳಿದಾಗ ಅಯ್ಯೋ ವೈ-ಫೈ ಪಾಸ್‌ವರ್ಡ್ ಮರೆತೇ ಹೋಗಿದೆ ಎನ್ನುವುದು ಬಹುತೇಕ ಜನರ ಪ್ರತಿಕ್ರಿಯೆ ಆಗಿರುತ್ತದೆ. ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಬಹುದು. ಆದರೆ, ಈ ಬಗ್ಗೆ ಚಿಂತಿಸುವು ಅಗತ್ಯವಿಲ್ಲ. ಕೆಲವು ಟ್ರಿಕ್ ಬಳಸಿ ಕೆಲವೇ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿರುವ ವೈ-ಫೈ ಪಾಸ್‌ವರ್ಡ್ ಅನ್ನು ಬಹಳ ಸುಲಭವಾಗಿ ಪತ್ತೆ ಹಚ್ಚಬಹುದು. ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೀವು ಸೇವ್ ಮಾಡಿರುವ ಪಾಸ್‌ವರ್ಡ್‌ಗಳನ್ನು ಪತ್ತೆ ಹಚ್ಚುವ ವಿಧಾನ ಸ್ವಲ್ಪ ವಿಭಿನ್ನವಾಗಿದೆ.
ಇದನ್ನೂ ಓದಿ- Google Pay: ಜೂನ್‌ನಿಂದ ಈ ದೇಶದಲ್ಲಿ ಕಾರ್ಯನಿರ್ವಹಿಸಲ್ಲ Gpay
ಆಂಡ್ರಾಯ್ಡ್ ಫೋನ್‌ನಲ್ಲಿ ನಿಮ್ಮ ವೈ-ಫೈ ಪಾಸ್‌ವರ್ಡ್ ಪತ್ತೆ ಹಚ್ಚಲು ಈ ಹಂತಗಳನ್ನು ಅನುಸರಿಸಿ:
ಹಂತ 1: - ಆಂಡ್ರಾಯ್ಡ್ ಫೋನ್‌ನಲ್ಲಿ ಸೇವ್ ಮಾಡಲಾದ ವೈ-ಫೈ ಪಾಸ್‌ವರ್ಡ್ ಪತ್ತೆ ಹಚ್ಚುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ಮೊದಲು ನಿಮ್ಮ ವೈ-ಫೈ ಆಯ್ಕೆಗೆ ಹೋಗಬೇಕು.
ಹಂತ 2:- ಬಳಿಕ ನಿಮ್ಮ ವೈ-ಫೈ ನೆಟ್‌ವರ್ಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ನಿಮ್ಮ ಸಂಪರ್ಕಿತ ಸಾಧನದ ವೈ-ಫೈ ಪಕ್ಕದಲ್ಲಿ ಗೋಚರಿಸುವ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲಿ ಪಾಸ್‌ವರ್ಡ್ ಐ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಬಳಿಕ ನಿಗದಿತ ಜಾಗದಲ್ಲಿ ಸಾಧನದ ಪಿನ್ ನಮೂದಿಸಿ.
ಹಂತ 5: ನಂತರ ನಿಮ್ಮ ವೈ-ಫೈ ಪಾಸ್‌ವರ್ಡ್ ಗೋಚರಿಸುತ್ತದೆ.
ಇದನ್ನೂ ಓದಿ- YouTube Playlist: ಯೂಟ್ಯೂಬ್‌ನಲ್ಲಿ ನೆಚ್ಚಿನ ವಿಡಿಯೋಗಳ ಪ್ಲೇ ಲಿಸ್ಟ್ ರಚಿಸಲು ಇಲ್ಲಿದೆ ಸುಲಭ ಮಾರ್ಗ
ಐಫೋನ್‌ನಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ಹೇಗೆ ನೋಡುವುದು?
>> ನಿಮ್ಮ ಐಫೋನ್‌ನಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ವೀಕ್ಷಿಸಲು ಮೊದಲು ಐಫೋನ್‌ನ ವೈ-ಫೈ ವಿಭಾಗಕ್ಕೆ ಹೋಗಿ.
>> ನಂತರ ಸಂಪರ್ಕಿತ Wi-Fi ನೆಟ್ವರ್ಕ್ ಮೇಲೆ ಕ್ಲಿಕ್ ಮಾಡಿ.
>> ಇದರ ಮುಂದೆ ಕಾಣುವ i ಐಕಾನ್ ಮೇಲೆ ಕ್ಲಿಕ್ ಮಾಡಿ.
>> ಪಾಸ್‌ವರ್ಡ್ ಅನ್‌ಲಾಕ್ ಮಾಡಲು, ನೀವು ಫೇಸ್ ಐಡಿ ಮತ್ತು ಟಚ್ ಐಡಿಯನ್ನು ಬಳಸಬೇಕಾಗುತ್ತದೆ.
>> ನಂತರ ಇಲ್ಲಿ ನೀವು ಸೇವ್ ಮಾಡಲಾದ ಪಾಸ್‌ವರ್ಡ್ ಗೋಚರಿಸುತ್ತದೆ.
ಈ ರೀತಿಯಾಗಿ ನಿಮ್ಮ ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ ಸೇವ್ ಮಾಡಲಾಗಿರುವ ವೈ-ಫೈ ಪಾಸ್‌ವರ್ಡ್ ಅನ್ನು ಸುಲಭವಾಗಿ ಕಂಡು ಹಿಡಿಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.