Jio Free Internet: ಜಿಯೋ ತನ್ನ ಗ್ರಾಹಕರಿಗೆ ಒಂದಕ್ಕಿಂತ ಒಂದು ಕೊಡುಗೆಗಳನ್ನು ಜಾರಿಗೆ ತರುತ್ತಿದ್ದು, ಅವು ಮಿತವ್ಯಯಕಾರಿಯಾಗಿದ್ದು ಮತ್ತು ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ರಿಲಯನ್ಸ್ ಮಾಲೀಕತ್ವದ ಜಿಯೋ, Jio ಫೈಬರ್ ಹೆಸರಿನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೊಂದಿದ್ದು, ಇದರಲ್ಲಿ ಅತ್ಯಂತ ವೇಗದ ಇಂಟರ್ನೆಟ್ ಅನ್ನು ನೀವು ಅನುಭವಿಸಬಹುದು. ಕಂಪನಿಯು ಬಳಕೆದಾರರಿಗೆ ತಮ್ಮ ವೈಫೈ ಅನ್ನು ಉಚಿತವಾಗಿ ಬಳಸಲು ಅನುಮತಿಸುತ್ತದೆ. ಅದು ಹೇಗೆ ಸಾಧ್ಯ ಮತ್ತು ಅದರಿಂದ ನೀವು ಬಯಸಿದಷ್ಟು ಇಂಟರ್ನೆಟ್ ಅನ್ನು ಹೇಗೆ ಚಲಾಯಿಸಬಹುದು ತಿಳಿದುಕೊಳ್ಳೋಣ ಬನ್ನಿ, ಇದಕ್ಕಾಗಿ ಕಂಪನಿಯು ನಿಮಗೆ ನೈಯಾ ಪೈಸೆ ಚಾರ್ಜ್ ಕೂಡ ಮಾಡುವುದಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-500 ರೂ.ಗಿಂತ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋದ ಧಮಾಕ ಪ್ಲಾನ್!


ಕೊಡುಗೆ ಏನು?
ಈ ಕೊಡುಗೆಯ ಬಗ್ಗೆ ಹೇಳುವುದಾದರೆ, ಕಂಪನಿಯು ಫೈಬರ್ ಅನ್ನು ಉಚಿತವಾಗಿ ಬಳಸಲು ಅವಕಾಶವನ್ನು ನೀಡುತ್ತಿದೆ, ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಕೂಡ ಮೂಡಿರಬಹುದು. ಏಕೆಂದರೆ, ಬಹುತೇಕ ಕಂಪನಿಗಳು ಇದಕ್ಕಾಗಿ ನಿಮ್ಮಿಂದ ನಿರ್ಧಿಷ್ಟ ಮೊತ್ತವನ್ನೇ ಪಡೆಯುತ್ತವೆ. ಹಾಗಾದರೆ, ಕೇಳಿ ಇದರ ಹಿಂದಿನ ಕಂಪನಿಯ ಉದ್ದೇಶವೇ ಭಿನ್ನವಾಗಿದೆ. ಹೀಗಾಗಿ ಕಂಪನಿ ತನ್ನ ಉಚಿತ ವೈಫೈ ಕನೆಕ್ಷನ್ ಅನ್ನು ನಿಮಗೆ ಉಪಯೋಗಿಸಲು ನೀಡುತ್ತಿದೆ ಹಾಗೂ ಇಂದು ನಾವು ಆ ಕೊಡುಗೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 


ಇದನ್ನೂ ಓದಿ-Cyber Fraud: ಪ್ರತಿಯೊಂದಕ್ಕೂ ಗೂಗಲ್ ಸರ್ಚ್ ಮಾಡ್ತೀರಾ, ಹುಷಾರ್!


ವಾಸ್ತವದಲ್ಲಿ, ಕಂಪನಿ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ವಂಚನೆ ಎಸಗಲು ಬಯಸುತ್ತಿಲ್ಲ  ಮತ್ತು ಅದಕ್ಕಾಗಿಯೇ ಫೈಬರ್ ಸಂಪರ್ಕವನ್ನು ತೆಗೆದುಕೊಳ್ಳುವ ಮೊದಲು, ಕಂಪನಿಯು ನಿಮಗೆ ಪ್ರಾಯೋಗಿಕ ಅವಧಿಯನ್ನು ನೀಡುತ್ತಿದೆ, ಇದರಲ್ಲಿ ನೀವು 1 ತಿಂಗಳವರೆಗೆ ಫೈಬರ್ ಸೇವೆಯ ಲಾಭವನ್ನು ಪಡೆಯಬಹುದು ಮತ್ತು ಒಂದು ತಿಂಗಳ ಬಳಿಕ ನಿಮಗೆ ಸೇವೆ ಇಷ್ಟವಾದರೆ, ನೀವು ಸೇವೆಯನ್ನು ಮುಂದುವರೆಸಬಹುದಾಗಿದೆ. ಆಗ ಆ ಸೇವೆಗೆ ಪ್ರತಿಯಾಗಿ ಗ್ರಾಹಕರಿಂದ ಕನಿಷ್ಠ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇದು ಯೋಜನೆಯ ವೆಚ್ಚ ಅಥವಾ ಸಂಪೂರ್ಣ ಸೆಟಪ್‌ನ ವೆಚ್ಚವನ್ನು ಒಳಗೊಂಡಿರುವುದಿಲ್ಲ. ಒಟ್ಟಾಗಿ ಹೇಳುವುದಾದರೆ, ಗ್ರಾಹಕರು 1 ತಿಂಗಳವರೆಗೆ ಹೆಚ್ಚಿನ ವೇಗದ ಅನಿಯಮಿತ ಇಂಟರ್ನೆಟ್ ಅನ್ನು ಆನಂದಿಸಬಹುದು ಮತ್ತು ಅದರ ನಂತರ ಅವರು ಯೋಜನೆಯನ್ನು ಅರ್ಥಮಾಡಿಕೊಂಡರೆ ಅವರು ಈ ಯೋಜನೆಯನ್ನು ಖರೀದಿಸಬಹುದು ಮತ್ತು ನಂತರ ಅವರು ಪೂರ್ಣ ಮತ್ತು ಅಂತಿಮ ಪಾವತಿಯನ್ನು ಮಾಡಬೇಕಾಗುತ್ತದೆ. ಅದೂ ಕೂಡ ಗ್ರಾಹಕರ ಕೈಗೆಟಕುವ ಮೊತ್ತವಾಗಿರಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.