ನವದೆಹಲಿ : ಹೈ ಕ್ವಾಲಿಟಿ ಫೋಟೊಗಳಿಗಾಗಿ ನೀವು Google ನ Google Photo ಸೇವೆಯನ್ನು ಬಳಸುತ್ತಿದ್ದರೆ ಇದು ನೀವು ಓದಲೇ ಬೇಕಾದ ಸುದ್ದಿ. ಜೂನ್ 1, 2021 ರ ನಂತರ, ಗೂಗಲ್ ಫೋಟೋ ಸೇವೆಯನ್ನು ಬಳಸಬೇಕಾದರೆ ಹಣ ಪಾವತಿಸಬೇಕಾಗುತ್ತದೆ. ಮುಂದಿನ ತಿಂಗಳಿನಿಂದ ಈ ಕ್ಲೌಡ್ ಸೇವೆಗಾಗಿ ಗೂಗಲ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ.  ಯನ್ನು ಸದ್ಯ ಬಳಕೆದಾರರು ಯಾಔಉದೇ ಹಣ ಪಾಔತಿ ಮಾಡದೆ, ಅಂದರೆ ಉಚಿತವಾಗಿ, ಗೂಗಲ್ ಫೋಟೋಸ್ ನಲ್ಲಿ ಎಷ್ಟು ಬೇಕಾದರೂ ಫೊಟಗಳನ್ನು ಸೇವ್ ಮಾಡಬಹುದಾಗಿದೆ. ಆದರೆ  ಮುಂದಿನ ತಿಂಗಳಿನಿಂದ ಇದು ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಜೂನ್ 1 ರಿಂದ ಗೂಗಲ್ ಫೋಟೋಗೆ ನಿಗದಿಯಾಗಲಿದೆ ಶುಲ್ಕ : 
Google ಪ್ರಕಾರ, ಮುಂದಿನ ತಿಂಗಳಿನಿಂದ, Google Photo ಬಳಕೆಯ ಮೇಲೆ ಹಣ ವಿಧಿಸಲಾಗುತ್ತದೆ. ಆದಾಗ್ಯೂ, ಜೂನ್ 1 ರಿಂದ ಮೊದಲ 15 ಜಿಬಿ ಸ್ಟೋರೇಜ್ ಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ ಎನ್ನುವುದನ್ನು ಕೂಡಾ ಗೂಗಲ್ (Google) ಸ್ಪಷ್ಟಪಡಿಸಿದೆ.  ಬಳಕೆದಾರರಿಗೆ 15GBಗಿಂತ ಹೆಚ್ಚುವರಿ ಡೇಟಾ ಅಗತ್ಯವಿದ್ದರೆ, ತಿಂಗಳಿಗೆ 1.99 ಡಾಲರ್  ಪಾವತಿಸಬೇಕಾಗುತ್ತದೆ. ಇದಕ್ಕೆ, ಕಂಪನಿ Google One ಎಂದು ಹೆಸರಿಟ್ಟಿದೆ. ಇದರ ವಾರ್ಷಿಕ ಚಂದಾದಾರಿಕೆ 19.99 ಡಾಲರ್ ಆಗಿರುತ್ತದೆ. ತಮ್ಮ ಹೊಸ ಫೋಟೋಗಳು ಮತ್ತು ವೀಡಿಯೊಗಳ ಸ್ಟೋರೇಜ್ ಗಾಗಿ ಬಳಕೆದಾರರು ಈ ಹಣವನ್ನು ಕಂಪನಿಗೆ ಪಾವತಿಸಬೇಕಾಗುತ್ತದೆ. ಮೊದಲೇ ಸೇವ್ ಆಗಿದ್ದ ಫೋಟೋಗಳನ್ನು ಮೊದಲಿನಂತೆ ಸುರಕ್ಷಿತವಾಗಿರುತ್ತವೆ. 


ಇದನ್ನೂ ಓದಿ :  Koo- ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು Koo ಚಿಂತನೆ


Google ಮೀಟ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದು : 
 Gmail  ಬಳಕೆದಾರರಿಗೆ ಲಭ್ಯವಿರುವ Google Meet ವೀಡಿಯೊ ಕರೆ ಸೇವೆಯನ್ನು ಈ ವರ್ಷದ ಜೂನ್ ವರೆಗೆ ಉಚಿತವಾಗಿಡಲು ಗೂಗಲ್ ನಿರ್ಧರಿಸಿದೆ. ಅಂದರೆ, ಈ ವೀಡಿಯೊ ಕರೆ ಸೇವೆಗಾಗಿ (Google Video Calling Service) ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ.  ಕಂಪನಿಯು ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ.


ಇದನ್ನೂ ಓದಿ :  Recharge Plans: ತಿಂಗಳಿಗೆ ಕೇವಲ ರೂ.125 ಖರ್ಚು ಮಾಡಿ, ವರ್ಷವಿಡೀ ರಿಚಾರ್ಜ್ ಮಾಡುವ ತಾಪತ್ರಯವನ್ನು ತಪ್ಪಿಸಿಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.