ನವದೆಹಲಿ: ಮೈಕ್ರೋಸಾಫ್ಟ್ ತನ್ನ TEAMS ವೇದಿಕೆಯ ಬಳಕೆದಾರರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. Microsoft TEAMS ಬಳಕೆದಾರರು ಈಗ 24 ಗಂಟೆಗಳ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಾಗಲಿದೆ. ಎರಡೂ ರೀತಿಯ ಕರೆಗಳಲ್ಲಿ 300 ಜನರು ಏಕಕಾಲದಲ್ಲಿ ಸೇರಲು ಸಾಧ್ಯವಾಗಲಿದೆ. ಸಾಧ್ಯವಾಗುತ್ತದೆ. ಇದರಿಂದ ಝೂಮ್ ಮತ್ತು ಗೂಗಲ್ ಮೀಟ್ ಪ್ಲಾಟ್‌ಫಾರ್ಮ್‌ಗಳಿಗಿಂತ ಮೈಕ್ರೋಸಾಫ್ಟ್ ಕೆಲ ಹೆಜ್ಜೆ ಮುಂದೆ ಹೋದಂತಾಗಿದೆ. ಈ ಕುರಿತು ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಮೈಕ್ರೋಸಾಫ್ಟ್, ಮುಂದಿನ ತಿಂಗಳಲ್ಲಿಯೂ ಕೂಡ ಬಳಕೆದಾರರು ಪರಸ್ಪರ ಸಂಪರ್ಕ ಸಾಧಿಸಲಿ ಎಂಬ ಉದ್ದೇಶದಿಂದ 24 ಗಂಟೆಗಳ ಕಾಲ ಉಚಿತ ಧ್ವನಿ ಮತ್ತು ವಿಡಿಯೋ ಕರೆ ಸೌಲಭ್ಯ ನೀಡುತ್ತಿದೆ. ಕಾಲ್ ಮೂಲಕ 300 ಬಳಕೆದಾರರು ಏಕಕಾಲಕ್ಕೆ ಸಂವಾದ ನಡೆಸಬಹುದಾಗಿದೆ.
ಇದನ್ನು ಓದಿ- 1000 ಜನರು ಏಕಕಾಲಕ್ಕೆ Video Calling ನಡೆಸಲು Microsoft ಬಿಡುಗಡೆಗೊಳಿಸಿದೆ ಈ ವೈಶಿಷ್ಟ್ಯ
ಬಳಕೆದಾರರು ವೈಯಕ್ತಿಕ ಬಲಕೆಗಾಗಿ ಈ ಸಾಫ್ಟ್ ವೇರ್ ಅನ್ನು ಇನ್ನಷ್ಟು ಹೆಚ್ಚು ಬಳಕೆ ಮಾಡಲು ಕಂಪನಿ ಅಂಡ್ರಾಯಿಡ್ ಹಾಗೂ ಐಓಎಸ್ ಎರಡು ಆವೃತ್ತಿಗಳಿಗಾಗಿ ತನ್ನ TEAMS ಅಪ್ಪ್ಲಿಕೆಶನ್ ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳನ್ನೂ ಜೋಡಿಸಿದೆ. Microsoft Teams ಮೇಲೆ ಇದೀಗ ಬಳಕೆದಾರರು 250 ಜನರ ಒಂದು ಗ್ರೂಪ್ ಚಾಟ್ ಕೂಡ ಕ್ರಿಯೇಟ್ ಮಾಡಬಹದು ಹಾಗೂ ವರ್ಚ್ಯುಅಲ್ ಸಂವಾದದ ವೇಳೆ 49 ಸದಸ್ಯರನ್ನು ನೋಡಬಹುದಾಗಿದೆ.
ಇದನ್ನು ಓದಿ- Zoom ಹಾಗೂ Google Duo ಗೆ ಭಾರಿ ಪೈಪೋಟಿ ನೀಡಲು ಮುಂದಾದ WhatsApp
Microsoft Teams ಹೇಗೆ ಬಳಸಬೇಕು?
ಮೈಕ್ರೋಸಾಫ್ಟ್ ಖಾತೆ ಅಥವಾ Teams App ಇಲ್ಲದೆ ನೀವು ಮೈಕ್ರೋಸಾಫ್ಟ್ Teams ಮೇಲೆ ವರ್ಚುವಲ್ ಕರೆಗಳಿಗೆ ಸೇರಬಹುದು. ತಂಡಗಳಲ್ಲಿ ಹೋಸ್ಟ್ ಲಿಂಕ್‌ಗಳ ಮೂಲಕ ಮೈಕ್ರೋಸಾಫ್ಟ್ ಜನರನ್ನು ಆಹ್ವಾನಿಸಬಹುದು. ಈ ಲಿಂಕ್ ಅನ್ನು ವೆಬ್ ಬ್ರೌಸರ್‌ನಿಂದ ನೇರವಾಗಿ ಪ್ರವೇಶಿಸಬಹುದು. ಈ ವೈಶಿಷ್ಟ್ಯವು ಜೂಮ್, ಗೂಗಲ್ ಮೀಟ್ ಮತ್ತು ಇತರ ರೀತಿಯ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳಂತೆಯೇ ಕಾರ್ಯನಿರ್ವಹಿಸುತ್ತದೆ.
ಇದನ್ನು ಓದಿ- Zoom ಆಪ್ ಗೆ ಟಕ್ಕರ್ ನೀಡಲು Skype ಬಿಡುಗಡೆಗೊಳಿಸಿದೆ ಈ ವೈಶಿಷ್ಟ್ಯ
ಇತ್ತೀಚೆಗಷ್ಟೇ Zoom ಕೂಡ ಈ ಘೋಷಣೆ ಮಾಡಿತ್ತು
ಕೆಲವು ದಿನಗಳ ಹಿಂದೆ, ಅಮೆರಿಕಾದಲ್ಲಿ ಆಚರಿಸಲಾಗುವ ಥ್ಯಾಂಕ್ಸ್ ಗಿವಿಂಗ್ ಉತ್ಸವದ ಸಂದರ್ಭದಲ್ಲಿ ವೀಡಿಯೊ ಕರೆಗಳ 40 ನಿಮಿಷಗಳ ಸಮಯ ಮಿತಿಯನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದಾಗಿ ಝೂಮ್ ಘೋಷಿಸಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಅನುಸರಿಸಿ ಅಮೆರಿಕನ್ ಕುಟುಂಬಗಳು ವರ್ಚ್ಯುಅಲ್ ರೀತಿಯಲ್ಲಿ ಗೆಟ್ ಟುಗೆದರ್ ಆಚರಿಸಲಿ ಎಂಬ ಉದ್ದೇಶದಿಂದ ಕಂಪನಿ ಈ ಹೆಜ್ಜೆ ಇಟ್ಟಿದೆ ಎಂದು ಹೇಳಿಕೊಂಡಿತ್ತು.