ಬೆಂಗಳೂರು :  Flipkart Big Bachat Dhamaal Sale  ಇಂದಿನಿಂದ ಅಂದರೆ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಿದೆ. ಈ ಸೇಲ್ ಸೆಪ್ಟೆಂಬರ್ 3 ರವರೆಗೆ ನಡೆಯಲಿದೆ. ಸೇಲ್ ಸಮಯದಲ್ಲಿ, ವಿವಿಧ ವಿಭಾಗಗಳಲ್ಲಿ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗಿದೆ. 1 ವರ್ಷಕ್ಕಿಂತ ಹೆಚ್ಚು ಕಾಲ ಲಭ್ಯವಿರುವ ಉತ್ಪನ್ನಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕೆಲವು ಉತ್ಪನ್ನಗಳಲ್ಲಿ ಶೇಕಡಾ 80 ರಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ ಫ್ಯಾಶನ್, ಬ್ಯೂಟಿ-ಮೇಕಪ್, ಹೋಮ್-ಕಿಚನ್ ಟೂಲ್ಸ್, ಡೆಕೋರ್ ಮತ್ತು ಫರ್ನಿಶಿಂಗ್, ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು ಮತ್ತು ಪೀಠೋಪಕರಣಗಳು ಮತ್ತು ಟಿವಿ ಮತ್ತು ಉಪಕರಣಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ ನಲ್ಲಿ ಗ್ರಾಹಕರು 1000 ಕ್ಕೂ ಹೆಚ್ಚು ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಫ್ರೀ ಡೆಲಿವೆರಿ ಮತ್ತು ರಿಯಾಯಿತಿ ದರಗಳನ್ನು ಆನಂದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಹೆಚ್ಚುವರಿ ರಿಯಾಯಿತಿಗಳು ಸಹ ಲಭ್ಯವಿವೆ.


ಇದನ್ನೂ ಓದಿ : LPG Cylinder ಅನ್ನು ಇನ್ನೂ ಅಗ್ಗದ ದರದಲ್ಲಿ ಖರೀದಿಸಲು ಈ ಟ್ರಿಕ್ ಬಳಸಿ


500 ರೂಪಾಯಿಗಿಂತ ಕಡಿಮೆ ಬೆಲೆಗೆ ಹಲವು ವಸ್ತುಗಳು ಲಭ್ಯ : 
ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಶಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಸ್ಥಾಪಿಸಲಾದ ಮೈಕ್ರೋಸೈಟ್ ವಿವಿಧ ಬೆಲೆ ಶ್ರೇಣಿಗಳ ಪ್ರಕಾರ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಆಯ್ಕೆಯನ್ನು ಹೊಂದಿದೆ. 499,  699,  799 ಮತ್ತು  999 ಕ್ಕಿಂತ ಕಡಿಮೆ ಬೆಲೆಗಳಿಗೆ ಫಿಲ್ಟರ್‌ಗಳಿವೆ. ಈ ಬೆಲೆ ಶ್ರೇಣಿಯಲ್ಲಿ, ಗೃಹಾಲಂಕಾರದಿಂದ ಡ್ರೆಸ್ ಮತ್ತು ಪರಿಕರಗಳವರೆಗೆ ಅನೇಕ ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ. ಇದರ ಜೊತೆಗೆ, ಈ ಶ್ರೇಣಿಯಲ್ಲಿ ಬ್ಯಾಕ್‌ಪ್ಯಾಕ್ ಮತ್ತು ಶೂಗಳು ಸಹ ಲಭ್ಯವಿದೆ.


ಯಾವುದರ ಮೇಲೆ ಹೆಚ್ಚ್ಬು ರಿಯಾಯಿತಿ ? : 
ಗ್ರಾಹಕರು ವಿವಿಧ ವಿಭಾಗಗಳಲ್ಲಿ ಭಾರೀ ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ. ಗೃಹೋಪಯೋಗಿ ವಸ್ತುಗಳ ಮೇಲೆ ಶೇ.70, ವಾಷಿಂಗ್ ಮೆಷಿನ್ ಮೇಲೆ ಶೇ.60, ಪರ್ಸನಲ್ ಕೇರ್ ಉತ್ಪನ್ನಗಳ ಮೇಲೆ ಶೇ.60, ಬಟ್ಟೆ ಮೇಲೆ ಶೇ.60ರಿಂದ 70 ಮತ್ತು ದಿನಸಿ ವಸ್ತುಗಳ ಮೇಲೆ ಶೇ.70ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಕ್ರೀಡಾ ಫಿಟ್‌ನೆಸ್‌ನಲ್ಲಿ ಶೇಕಡಾ 80 ರಷ್ಟು ರಿಯಾಯಿತಿ ಲಭ್ಯವಿದೆ. ಸ್ಮಾರ್ಟ್ ಟಿವಿಗಳು, ಮಾನಿಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿಯನ್ನುನೀಡಲಾಗಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರು ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಸಹ ಪಡೆಯಬಹುದು. 


ಇದನ್ನೂ ಓದಿ :  ಇನ್ಮುಂದೆ ಟ್ವಿಟರ್‌ನಲ್ಲಿಯೂ ಆಡಿಯೋ & ವಿಡಿಯೋ ಕರೆ ಸೌಲಭ್ಯ: ಮಸ್ಕ್ ಘೋಷಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.