Free Amazon Prime Membership : ಇತ್ತೀಚಿನ ದಿನಗಳಲ್ಲಿ ವೆಬ್ ಸೀರಿಸ್ ನೋಡುವ ಟ್ರೆಂಡ್ ಹೆಚ್ಚಾಗಿದೆ. ಅನೇಕ ಚಲನಚಿತ್ರಗಳು OTTನಲ್ಲಿ ಲೈವ್ ಆಗಿ ಬಿಡುಗಡೆಯಾಗುತ್ತವೆ. ಅವುಗಳಲ್ಲಿ Amazon Prime ಮತ್ತು Netflix, Hotstar ಅತ್ಯಂತ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಾಗಿವೆ. ಆದರೆ, ಎಲ್ಲರೂ ಈ ಮೂರು ಒಟಿ ಪ್ಲಾಟ್‌ಫಾರ್ಮ್‌ಗೆ ಚಂದಾದಾರಿಕೆಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ನೀವು ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.  


COMMERCIAL BREAK
SCROLL TO CONTINUE READING

ಉಚಿತ ಚಂದಾದಾರಿಕೆಯನ್ನು ಹೇಗೆ ಪಡೆಯುವುದು ? : 
* ಮೊದಲು Amazon ಖಾತೆಗೆ ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ.
* ಇದರ ನಂತರ, Start your 30-day trial ಕ್ಲಿಕ್ ಮಾಡಿ.
* ಇದಾದ ನಂತರ ಪೇಮೆಂಟ್ ಮೆಥಡ್ ಆಯ್ಕೆ ಬರುತ್ತದೆ. ಇದರಲ್ಲಿ ನೀವು ನಿಮ್ಮ ಕ್ರೆಡಿಟ್ / ಡೆಬಿಟ್ / ಎಟಿಎಂ ಕಾರ್ಡ್‌ನಿಂದ ಪಾವತಿಯನ್ನು ಆಯ್ಕೆ ಮಾಡಬಹುದು.
* ಇದರ ನಂತರ  30 ದಿನಗಳ ಪ್ರಾಯೋಗಿಕ ಸದಸ್ಯತ್ವವನ್ನು ಪಡೆಯುತ್ತೀರಿ.
* ಈ ಯೋಜನೆಯಲ್ಲಿ, 30 ದಿನಗಳಲ್ಲಿ ನಿಮ್ಮ ಖಾತೆಯಿಂದ 1499 ರೂ. ಕಡಿತಗೊಳಿಸಲಾಗುತ್ತದೆ.
* ನೀವು ಈ ಯೋಜನೆಯನ್ನು ಮುಂದುವರಿಸಲು ಬಯಸದಿದ್ದರೆ, ನೀವು ಅದನ್ನು 30 ದಿನಗಳ ಮುಂಚಿತವಾಗಿ ರದ್ದುಗೊಳಿಸಬಹುದು.


ಇದನ್ನೂ ಓದಿ : ವಾಟ್ಸಪ್‌ನಲ್ಲಿ ಈಗ ಇಷ್ಟು ಜನರೊಂದಿಗೆ ಒಟ್ಟಿಗೆ ವಿಡಿಯೋ ಕಾಲ್ ಮಾಡಬಹುದು


ಇದಲ್ಲದೆ, ಅನೇಕ ಮೊಬೈಲ್ ಫೋನ್ ಕಂಪನಿಗಳು ತಮ್ಮ ಗ್ರಾಹಕರಿಗೆ ರೀಚಾರ್ಜ್ ಯೋಜನೆಯಲ್ಲಿ ಅನೇಕ OTT ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತವೆ. 


ಜಿಯೋ ಪ್ಲಾನ್ : 
 ಜಿಯೋದ  699 ರೂಪಾಯಿ ಪ್ಲಾನ್ ನಲ್ಲಿ  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಪಡೆಯಬಹುದು. ಇದರಲ್ಲಿ ಅನಿಯಮಿತ ಕರೆ, ಒಟ್ಟು 100 GB ಡೇಟಾ ಮತ್ತು 100 SMS ಪ್ರಯೋಜನಗಳನ್ನು ಪಡೆಯಬಹುದು. 


ಇದನ್ನೂ ಓದಿ : Instagram Down: 24 ಗಂಟೆಗಳಲ್ಲಿ ಮೆಟಾಗೆ ಡಬಲ್ ಶಾಕ್, ವಾಟ್ಸ್ ಆಪ್ ಬಳಿಕ ಇದೀಗ ಇನ್ಸ್ಟಾಗ್ರಾಮ್ ಡೌನ್!


ಜಿಯೋ ಪೋಸ್ಟ್‌ಪೇಯ್ಡ್  599 ರೂ. ಯೋಜನೆ :
ಈ ಯೋಜನೆಯು 100 ಜಿಬಿ ಡೇಟಾವನ್ನು ನೀಡುತ್ತದೆ. ಅನಿಯಮಿತ ಕರೆ ಜೊತೆಗೆ, ಈ ಯೋಜನೆಯೊಂದಿಗೆ ಉಚಿತ Netflix ಮತ್ತು Amazon Prime ಚಂದಾದಾರಿಕೆ ಕೂಡಾ ಸಿಗುತ್ತದೆ. 


ಏರ್‌ಟೆಲ್  499 ರೂ. ಪೋಸ್ಟ್‌ಪೇಯ್ಡ್ ಪ್ಲಾನ್ : 
ಚಂದಾದಾರರಿಗೆ ಒಟ್ಟು 75GB ಡೇಟಾ, ದಿನಕ್ಕೆ 100 SMS ಮತ್ತು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ  6 ತಿಂಗಳವರೆಗೆ ಉಚಿತ Amazon Prime ಸದಸ್ಯತ್ವವನ್ನು ಪಡೆಯುತ್ತಾರೆ.


ಇದನ್ನೂ ಓದಿ : ಇನ್ನ್ಮುಂದೆ ಲೈಂಗಿಕ ಕ್ರಿಯೆಗೆ ಪುರುಷ-ಮಹಿಳೆಯರೇ ಬೇಡ, ಅದಕ್ಕೂ ಬಂತು ರೋಬೋಟ್!


ಏರ್‌ಟೆಲ್ 1199 ಪೋಸ್ಟ್‌ಪೇಯ್ಡ್ ಪ್ಲಾನ್ : 
ಈ ಯೋಜನೆಯಲ್ಲಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು. ಇದರೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.