Redmi Watch 3 Active ಟೀಸರ್ ಬಿಡುಗಡೆಗೊಳಿಸಿದ ಶಾವೋಮಿ, 3 ದಿನ ನೀರಿನಲ್ಲಿರಬಲ್ಲದು!

Tech Newss In Kannada: ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ Xiaomi ತನ್ನ ಇತ್ತೀಚಿನ ಸ್ಮಾರ್ಟ್‌ವಾಚ್‌ ಆಗಿರುವ 'ರೆಡ್ಮಿ ವಾಚ್ 3 ಆಕ್ಟಿವ್' ಟೀಸರ್ ಅನ್ನು ಬಿಡುಗಡೆ ಮಾಡಿದೆ, ಇದು ಮುಂದಿನ ತಿಂಗಳ ಆರಂಭದಲ್ಲಿ ಅದ್ಧೂರಿ ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ.  

Written by - Nitin Tabib | Last Updated : Jul 19, 2023, 11:24 PM IST
  • ಈ ಸ್ಮಾರ್ಟ್‌ವರ್ಟ್‌ನಲ್ಲಿ ಬಳಕೆದಾರರು ಸಾಕಷ್ಟು ಹೊಸ ಸಂಗತಿಗಳನ್ನು ಪಡೆಯಲಿದ್ದಾರೆ,
  • ಅವುಗಳಲ್ಲಿ ಇದು ನೀರಿನಲ್ಲಿ ಬಾಳುವ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ.
  • ವರದಿಗಳ ಪ್ರಕಾರ, 'ರೆಡ್‌ಮಿ ವಾಚ್ 3 ಆಕ್ಟಿವ್' ಅನೇಕ ದೊಡ್ಡ ಪರೀಕ್ಷೆಗಳನ್ನು ಎದುರಿಸುತ್ತಿದೆ
Redmi Watch 3 Active ಟೀಸರ್ ಬಿಡುಗಡೆಗೊಳಿಸಿದ ಶಾವೋಮಿ, 3 ದಿನ ನೀರಿನಲ್ಲಿರಬಲ್ಲದು! title=

Redmi Watch 3 Active Teaser: ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ Xiaomi ತನ್ನ ಇತ್ತೀಚಿನ ಸ್ಮಾರ್ಟ್ ವಾಚ್‌ ಆಗಿರುವ  'ರೆಡ್ಮಿ ವಾಚ್ 3 ಆಕ್ಟಿವ್' ಟೀಸರ್ ಅನ್ನು ಬಿಡುಗಡೆ ಮಾಡಿದೆ, ಇದು ಮುಂದಿನ ತಿಂಗಳ ಆರಂಭದಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ. ಸೋರಿಕೆಯಾದ ವರದಿಗಳ ಪ್ರಕಾರ, ಇತ್ತೀಚಿನ Redmi ಸ್ಮಾರ್ಟ್ ವಾಚ್ ಒಂದು ವೈಶಿಷ್ಟ್ಯ-ಭರಿತ ಉತ್ಪನ್ನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ, ಕಂಪನಿಯು ಬಳಕೆದಾರರಿಗೆ 'ಪರ್ಫೆಕ್ಟ್ ಔಟ್‌ಡೋರ್ ಕಂಪ್ಯಾನಿಯನ್' ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನಲಾಗಿದೆ.

ಮೂರು ದಿನಗಳ ಕಾಲ ನೀರಿನಲ್ಲಿರಬಹುದು
ಈ ಸ್ಮಾರ್ಟ್‌ವರ್ಟ್‌ನಲ್ಲಿ ಬಳಕೆದಾರರು ಸಾಕಷ್ಟು ಹೊಸ ಸಂಗತಿಗಳನ್ನು ಪಡೆಯಲಿದ್ದಾರೆ, ಅವುಗಳಲ್ಲಿ ಇದು ನೀರಿನಲ್ಲಿ ಬಾಳುವ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ. ವರದಿಗಳ ಪ್ರಕಾರ, 'ರೆಡ್‌ಮಿ ವಾಚ್ 3 ಆಕ್ಟಿವ್' ಅನೇಕ ದೊಡ್ಡ ಪರೀಕ್ಷೆಗಳನ್ನು ಎದುರಿಸುತ್ತಿದೆ, ಇದರಲ್ಲಿ ಮೂರು ದಿನಗಳವರೆಗೆ ನೀರಿನಲ್ಲಿ ಮುಳುಗಿಸುವುದು ಶಾಮಿಲಾಗಿದೆ. ಕಂಪನಿ ತನ್ನ  ಆಗಸ್ಟ್ 1 ರ ಅನಾವರಣ ಸಮಾರಂಭದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ, ಇದಕ್ಕಾಗಿ ಕಂಪನಿಯು ಈಗಾಗಲೇ ಆಹ್ವಾನಗಳನ್ನು ಕಳುಹಿಸಿದೆ.

ಇದನ್ನೂ ಓದಿ-ಎಚ್ಚರ! ನೀವೂ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ? ಈ ವರದಿ ತಪ್ಪದೆ ಓದಿ!

ಕಂಪನಿಯು ಅಪ್‌ಲೋಡ್ ಮಾಡಿದ ಹಿಂದಿನ ವೀಡಿಯೊದಲ್ಲಿ, Xiaomi ಅಭಿಮಾನಿಗಳು 'ಬಿಡುಗಡೆಯಾಗದ ಸ್ಮಾರ್ಟ್‌ವಾಚ್' ಅನ್ನು ನೋಡಿದ್ದಾರೆ. ಈ ವಿಡಿಯೋದಲ್ಲಿ Xiaomi ಅಧ್ಯಕ್ಷ ಮುರಳಿಕೃಷ್ಣನ್ ಬಿ ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (CMO) ಅನುಜ್ ಶರ್ಮಾ ಉಪಸ್ಥಿತರಿದ್ದರು 

ಇದನ್ನೂ ಓದಿ-ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏ‌ಟಿ‌ಎಮ್!

ಪ್ರಮುಖ ತಂತ್ರಜ್ಞಾನ ಬ್ರ್ಯಾಂಡ್ ತನ್ನ ಜನಪ್ರಿಯ Redmi ಸರಣಿಯ ಇತ್ತೀಚಿನ ಮಾದರಿಯಾದ Redmi 12 ಅನ್ನು ಆಗಸ್ಟ್ 1 ರಂದು ಬಿಡುಗಡೆ ಮಾಡಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News