Airtel Postpaid Plans: ಭಾರತದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ್ ಕೊಡುಗೆಗಳ ಮೇಲೆ ಹೆಚ್ಚು ಗಮನಹರಿಸಿದ್ದು, ಬಂಪರ್ ಕೊಡುಗೆಗಳೊಂದಿಗೆ ಪಾಕೆಟ್ ಸ್ನೇಹಿ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ,  ಏರ್‌ಟೆಲ್ ಪ್ರವೇಶ ಮಟ್ಟದ ಪೋಸ್ಟ್ ಪೇಯ್ಡ್ ಯೋಜನೆಯಾದ 399 ರೂ. ಗಳ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಹೆಚ್ಚುವರಿ ಒಟಿಟಿ ಪ್ರಯೋಜನಗಳು ಲಭ್ಯವಿಲ್ಲ. ಇದೀಗ ಏರ್‌ಟೆಲ್‌ನಿಂದ ಬಿಡುಗಡೆಯಾಗಿರುವ ಪಾಕೆಟ್ ಸ್ನೇಹಿ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ OTT ಪ್ರಯೋಜನಗಳು ಲಭ್ಯವಿದ್ದು, Amazon Prime, Disney+ Hotstar ಸಂಪೂರ್ಣ ಉಚಿತವಾಗಿವೆ. 


ಇದನ್ನೂ ಓದಿ- Mobile ಕಳೆದು ಹೋಗಿದೆಯೇ? ಚಿಂತೆಬಿಡಿ, ಈ ಪೋರ್ಟಲ್‌ನಲ್ಲಿ ಟ್ರ್ಯಾಕ್ ಮಾಡಿ


499 ರೂ.ಗಳ ಏರ್‌ಟೆಲ್  ಪೋಸ್ಟ್‌ಪೇಯ್ಡ್ ಯೋಜನೆ:
ಏರ್‌ಟೆಲ್‌ನ 499 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75ಜಿಬಿ ಡೇಟಾ, ನಿತ್ಯ 100 ಉಚಿತ ಎಸ್‌ಎಮ್‌ಎಸ್, ಅನ್ಲಿಮಿಟೆಡ್ ಕರೆ ಸೌಲಭ್ಯಗಳು ಲಭ್ಯವಾಗಳಿವೆ. ಇದಲ್ಲದೆ, Amazon Prime ನ ಬಂಡಲಿಂಗ್ ಕೂಡ ಇದರಲ್ಲಿ ಲಭ್ಯವಾಗಲಿದೆ. ಆದಾಗ್ಯೂ, ಅಮೆಜಾನ್ ಪ್ರೈಮ್ ಒಂದು ವರ್ಷದ ಬದಲಿಗೆ ಕೇವಲ ಆರು ತಿಂಗಳವರೆಗೆ ಮಾತ್ರ ಲಭ್ಯವಿರುತ್ತದೆ ಎಂಬುದು ಗಮನಾರ್ಹವಾಗಿದೆ. 


499 ರೂ.ಗಳ ಏರ್‌ಟೆಲ್  ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ಮಾತ್ರವಲ್ಲದೆ, ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಬಂಡಲಿಂಗ್ ಕೂಡ ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಬಳಕೆದಾರರಿಗೆ ಹ್ಯಾಂಡ್‌ಸೆಟ್ ರಕ್ಷಣೆ, ಎಕ್ಸ್‌ಟ್ರೀಮ್ ಮೊಬೈಲ್ ಪ್ಯಾಕ್ ಮತ್ತು ವಿಂಕ್ ಮ್ಯೂಸಿಕ್ ಪ್ರೀಮಿಯಂನಂತಹ ಹೆಚ್ಚುವರಿ ಪ್ರಯೋಜನಗಳು ಕೂಡ ಲಭ್ಯವಾಗಲಿದೆ. 


ಇದನ್ನೂ ಓದಿ- ಈ ಖಾತೆಗಳನ್ನು ಡಿಲೀಟ್ ಮಾಡಲಿದೆ ಗೂಗಲ್ ! ನಿಮ್ಮ ಅಕೌಂಟ್ ಅದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ


ಗಮನಾರ್ಹವಾಗಿ ಈ  ಪೋಸ್ಟ್‌ಪೇಯ್ಡ್ ಯೋಜನೆಯನ್ನು ಕುಟುಂಬ ಯೋಜನೆಯಾಗಿ ಬಳಸಲು ಸಾಧ್ಯವಿಲ್ಲ. ಒಂದೊಮ್ಮೆ, ಈ ಯೋಜನೆಯೊಂದಿಗೆ ಹೆಚ್ಚುವರಿ ಆಡ್-ಆನ್ ಸಂಪರ್ಕಗಳನ್ನು ಬಳಸಲು ಬಯಸಿದರೆ, ಪ್ರತಿ ಆಡ್-ಆನ್ ಸಂಪರ್ಕಕ್ಕೆ 299ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ 30ಜಿಬಿ ಡೇಟಾ, ಅನ್ಲಿಮಿಟೆಡ್ ಕರೆ ಮತ್ತು ದೈನಂದಿನ 100 ಉಚಿತ ಎಸ್ಎಂಎಸ್ ಸೌಲಭ್ಯ ಲಭ್ಯವಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.