ನವದೆಹಲಿ: ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಒಂದಕ್ಕಿಂತ ಹೆಚ್ಚು ರೀಚಾರ್ಜ್ ಕೂಪನ್‌ಗಳನ್ನು ನೀಡುತ್ತಿವೆ. ಏರ್ಟೆಲ್, ಜಿಯೋ ಮತ್ತು ವಿ (Vi) ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸಿವೆ. ಆದರೆ ಇವುಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ 100 ರೂಪಾಯಿಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳು ಇದರಲ್ಲಿ ಲಭ್ಯವಿದೆ. ಅವುಗಳ ಬೆಲೆ ಕಡಿಮೆ ಇದ್ದರೂ ಗ್ರಾಹಕರು ಅವುಗಳಲ್ಲಿ ಅನೇಕ ಉತ್ತಮ ಕೊಡುಗೆಗಳನ್ನು ಪಡೆಯಬಹುದಾಗಿದೆ. ಬನ್ನಿ ಯಾವ ಕಂಪನಿ ಗ್ರಾಹಕರಿಗೆ ಬೆಸ್ಟ್ ರೀಚಾರ್ಜ್ ಕೂಪನ್ ನೀಡುತ್ತಿದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

Airtel ಗ್ರಾಹಕರಿಗೆ ಎರಡು ಉತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ:
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ತನ್ನ ಗ್ರಾಹಕರಿಗೆ ಎರಡು ಉತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಅವುಗಳು 100 ರೂ.ಗಿಂತ ಕಡಿಮೆ ಮೌಲ್ಯದ್ದಾಗಿದೆ. ಮೊದಲ ರೀಚಾರ್ಜ್ ಯೋಜನೆಯ ಬೆಲೆ 79 ರೂಪಾಯಿ. ಇದರ ಸಿಂಧುತ್ವವು 28 ದಿನಗಳು. ಇದರಲ್ಲಿ, ಗ್ರಾಹಕರು 200MB ಡೇಟಾವನ್ನು ಪಡೆಯುತ್ತಾರೆ. ಎರಡನೇ ಯೋಜನೆಯ ವೆಚ್ಚ 49 ರೂಪಾಯಿ. ಈ ಯೋಜನೆಯ ಸಿಂಧುತ್ವವೂ 28 ದಿನಗಳು. ಆದರೆ ಈ ಯೋಜನೆಯಲ್ಲಿ ಗ್ರಾಹಕರಿಗೆ 100MB ಡೇಟಾವನ್ನು ಮಾತ್ರ ನೀಡಲಾಗುತ್ತದೆ.


ಇದನ್ನೂ ಓದಿ - Extra Validity Offer - Jio ಗ್ರಾಹಕರಿಗೊಂದು ಸಂತಸದ ಸುದ್ದಿ, ಇದೀಗ 30 ದಿನ ಹೆಚ್ಚು ನಡೆಯಲಿದೆ ಈ ಪ್ಲಾನ್


Jio ಅಗ್ಗದ ರೀಚಾರ್ಜ್ ಯೋಜನೆಗಳು :
ಲಭ್ಯವಿರುವ ಮಾಹಿತಿಯ ಪ್ರಕಾರ, ರಿಲಯನ್ಸ್ ಜಿಯೋ (Jio) ಸಹ 100 ರೂ.ಗಿಂತ ಕಡಿಮೆ ದರದಲ್ಲಿ ಕೆಲವು ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಮೊದಲ ಯೋಜನೆ 51 ರೂಪಾಯಿ. ಇದರಲ್ಲಿ, ಗ್ರಾಹಕರಿಗೆ 6 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ ಕಂಪನಿಯು 21 ರೂಪಾಯಿ ಯೋಜನೆಯನ್ನು ಸಹ ನೀಡುತ್ತಿದೆ. ಈ ಅಗ್ಗದ ಯೋಜನೆಯಲ್ಲಿ ಬಳಕೆದಾರರು 2 ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಎರಡೂ ಯೋಜನೆಗಳು ಟಾಪ್-ಅಪ್. ಅಂದರೆ, ಜಿಯೋ ಗ್ರಾಹಕರು ಈಗಾಗಲೇ ಚಾಲನೆಯಲ್ಲಿರುವ ಯಾವುದೇ ಯೋಜನೆಯೊಂದಿಗೆ ಹೆಚ್ಚುವರಿ ಡೇಟಾ ಲಭ್ಯವಿರುತ್ತದೆ.


ಇದನ್ನೂ ಓದಿ- ನಿಮ್ಮ ಫೋನಿನಲ್ಲಿ ಇರಲಿ ಈ ಐದು Govt. App ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ


Vi ಯ ಅಗ್ಗದ ಯೋಜನೆ: 
Vi (Vodafone- Idea) ಸಹ ತನ್ನ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಕಂಪನಿಯು 48 ರೂಪಾಯಿ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ, ಬಳಕೆದಾರರು 3 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದರೊಂದಿಗೆ 200MB ಡೇಟಾ ಸಹ ಲಭ್ಯವಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಇದಲ್ಲದೆ ವಿ 98 ರೂಪಾಯಿ ರೀಚಾರ್ಜ್ ಯೋಜನೆಯನ್ನು ಸಹ ಪರಿಚಯಿಸಿದ್ದು ಇದರಲ್ಲಿ ಒಟ್ಟು 12 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.