ಬೆಂಗಳೂರು : ಭಾರ್ತಿ ಏರ್ಟೆಲ್ ತನ್ನ ಬಳಕೆದಾರರಿಗೆ ಹೊಸ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಇದು ಪ್ರಿಪೇಯ್ಡ್ ಯೋಜನೆಗಳ ಪೋರ್ಟ್ಫೋಲಿಯೊವನ್ನು ಹೆಚ್ಚಿಸಿದೆ. ಹೊಸ ಪ್ಯಾಕ್‌ನ ಬೆಲೆ ಕೇವಲ  99 ರೂಪಾಯಿ. ಇದು ಹೆಚ್ಚುವರಿ ಡೇಟಾ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಡೇಟಾ ಪ್ಯಾಕ್ ಅನ್ನು ಈಗ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಲಾಗಿದ್ದು, ಪ್ರಿಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. 


COMMERCIAL BREAK
SCROLL TO CONTINUE READING

ಏರ್‌ಟೆಲ್  99 ರೂ.  ಡೇಟಾ ಪ್ಯಾಕ್ :
ಏರ್‌ಟೆಲ್ ಹೊಸ 99 ರೂ. ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ.  ಇದು ಡೇಟಾ ಪ್ರಯೋಜನಗಳನ್ನು ಮಾತ್ರ ಒಳಗೊಂಡಿದೆ. ಈ ಯೋಜನೆಯಲ್ಲಿ, 1 ದಿನಕ್ಕೆ ಅನಿಯಮಿತ ಡೇಟಾ ಸೌಲಭ್ಯ ಸಿಗಲಿದೆ. ಫೇರ್ ಯುಸೇಜ್ ಪಾಲಿಸಿ ಅಡಿಯಲ್ಲಿ ಇದು 30GBಗೆ ಸೀಮಿತವಾಗಿದೆ. ಅಲ್ಲದೆ, ಫೇರ್ ಯುಸೇಜ್ ಪಾಲಿಸಿ ನಂತರ  ಇಂಟರ್ನೆಟ್ ಸ್ಪೀಡ್ 64Kbpsಗೆ ಕಡಿಮೆಯಾಗುತ್ತದೆ.


ಇದನ್ನೂ ಓದಿ : 365 ದಿನಗಳವರೆಗೆ ನಿತ್ಯ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ನೀಡುವ ಅತ್ಯಂತ ಅಗ್ಗದ ಮೊಬೈಲ್ ರೀಚಾರ್ಜ್ ಪ್ಲಾನ್ ಇದು!


ಈ ಡೇಟಾ ಪ್ಯಾಕ್ ಅನ್ನು ಬಳಸಲು, ಬಳಕೆದಾರರು ಆಕ್ಟಿವ್ ಬೇಸ್ ಪ್ಲಾನ್ ಹೊಂದಿರಬೇಕಾಗುತ್ತದೆ. ಏಕೆಂದರೆ, ಈ ಪ್ಯಾಕ್ 1 ದಿನದ ಮಾನ್ಯತೆಯ ಹೊರತಾಗಿ ಸ್ಟಾಂಡ್ ಅಲೋನ್ ರೂಪದಲ್ಲಿ ಲಭ್ಯವಿಲ್ಲ.


ಏರ್‌ಟೆಲ್ ತನ್ನ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ.  5G ಸೇವೆಗಳು ಲಭ್ಯವಿರುವ ಎಲ್ಲಾ ಪ್ರದೇಶಗಳಲ್ಲಿ ಈ ವೈಶಿಷ್ಟ್ಯವು ಅನ್ವಯಿಸುತ್ತದೆ. ಆದರೆ, ಇದಕ್ಕಾಗಿ 5G ಸಾಧನವನ್ನು ಹೊಂದಿರುವುದು ಅವಶ್ಯಕ. 


ಇದನ್ನೂ ಓದಿ : ಶೀಘ್ರದಲ್ಲಿಯೇ ರಿಲಯನ್ಸ್ ಜಿಯೋನಿಂದ ದೇಶದ ಅತ್ಯಂತ ಅಗ್ಗದ 5ಜಿ ಫೋನ್ ಬಿಡುಗಡೆ, ವೈಶಿಷ್ಟ್ಯ-ಬೆಲೆ ಮಾಹಿತಿ ಇಲ್ಲಿದೆ!


ಏರ್‌ಟೆಲ್ ಇತರ ಡೇಟಾ ಪ್ಯಾಕ್‌ಗಳು : 
99 ರೂ. ಡೇಟಾ ಪ್ಯಾಕ್‌ನ ಹೊರತಾಗಿ, ಏರ್‌ಟೆಲ್ 98 ರೂಪಾಯಿ ಪ್ಯಾಕ್ ಅನ್ನು ಹೊಂದಿದೆ. ಇದರಲ್ಲಿ 5 ಜಿ ಡೇಟಾ ಮತ್ತು ಏರ್‌ಟೆಲ್ ವಿಂಕ್ ಮ್ಯೂಸಿಕ್ ಚಂದಾದಾರಿಕೆಯೂ ಸೇರಿದೆ. ಇದಾದ ನಂತರ 181 ರೂ. ಪ್ಲಾನ್ ಇದೆ. ಇದರಲ್ಲಿ  30 ದಿನಗಳವರೆಗೆ  ದಿನಕ್ಕೆ 1GB ಡೇಟಾವನ್ನು ಪಡೆಯಬಹುದು. ಏರ್‌ಟೆಲ್ ಇನ್ನೂ ಕೆಲವು ಕೈಗೆಟುಕುವ ಯೋಜನೆಗಳನ್ನು ಹೊಂದಿದೆ. ಉದಾಹರಣೆಗೆ 19 ರೂ.ಪ್ಲಾನ್ ನಲ್ಲಿ 1 ದಿನಕ್ಕೆ 1GB ಡೇಟಾ  ಸಿಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ