ಬೆಂಗಳೂರು: ಶೀಘ್ರದಲ್ಲಿಯೇ ರಿಲಯನ್ಸ್ ಮಾಲೀಕತ್ವದ ಜಿಯೋ ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ರಿಲಯನ್ಸ್ ಈ ತಿಂಗಳ ಕೊನೆಯಲ್ಲಿ ವಾರ್ಷಿಕ AGM ಕಾರ್ಯಕ್ರಮವನ್ನು ನಡೆಸುವ ಸಾಧ್ಯತೆ ಇದೆ. ಈವೆಂಟ್‌ಗೆ ಮುಂಚಿತವಾಗಿ BIS ಪಟ್ಟಿಯೊಂದರ ಪ್ರಕಾರ ಕಂಪನಿ ಎರಡು ಹೊಸ ಫೋನ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಬಹಿರಂಗಪಡಿಸಿದೆ (Technology News In Kannada). ವದಂತಿಗಳನ್ನು ನಂಬುವುದಾದರೆ ಈ ಫೋನ್ ಗಳು ದೊಡ್ಡ ಪರದೆ, ಉತ್ತಮ ಕ್ಯಾಮೆರಾ ಮತ್ತು ಬಲವಾದ ಬ್ಯಾಟರಿ ಬ್ಯಾಕ್ ಅಪ್ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...
ಹೊಸ 5G ಜಿಯೋ ಫೋನ್‌ಗಳು
ಕಂಪನಿಯು ಆಗಸ್ಟ್ 28 ರಂದು AGM ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಕೆಲವು ದಿನಗಳ ಹಿಂದೆ ಜಿಯೋ ಫೋನ್ ಬಗ್ಗೆ ಅನೇಕ ಸೋರಿಕೆಗಳು ಮತ್ತು ವದಂತಿಗಳು ಹೊರಹೊಮ್ಮಿದ್ದವು, ಆದರೆ BIS ಪಟ್ಟಿಯ ಗಮನ ಈ ಸೋರಿಕೆಗಳಿಗೆ ಮತ್ತಷ್ಟು ಬಲ ನೀಡಿದೆ. ಟಿಪ್‌ಸ್ಟರ್ ಮುಕುಲ್ ಶರ್ಮಾ ತಮ್ಮ ಟ್ವೀಟ್‌ನಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ. ಪಟ್ಟಿಯನ್ನು ನಂಬುವುದಾದರೆ ಜಿಯೋ ಫೋನ್‌ನ ಉತ್ಪಾದನೆಯು ನೋಯ್ಡಾದಲ್ಲಿ ನಡೆಯಲಿದೆ.
ಇದನ್ನೂ ಓದಿ-ಕೇವಲ ರೂ.540ಕ್ಕೆ ಮನೆಗ ತನ್ನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್14 5G ಫೋನ್!
ಭಾರತದ ಅಗ್ಗದ 5G ಫೋನ್ ಆಗಿರಬಹುದು
ಜಿಯೋ ಕಂಪನಿ ಒಟ್ಟು ಎರಡು ಮಾದರಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ, ಅದರ ಮಾದರಿ ಸಂಖ್ಯೆಗಳು JBV161W1 ಮತ್ತು JBV162W1 ಗಳಾಗಿವೆ. ಪಟ್ಟಿಯಲ್ಲಿ ವೈಶಿಷ್ಟ್ಯ ಮತ್ತು ಬೆಲೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲಾಗಿಲ್ಲ. ಈ ಹಿಂದೆ ಜಿಯೋ ಫೋನ್ 5G ಚಿತ್ರ ಸೋರಿಕೆಯಾಗಿತ್ತು, ಈ ಫೋನ್ ಅವುಗಳಲ್ಲಿ ಒಂದಾಗಿರಬಹುದು. ಈ ತಿಂಗಳ ಕೊನೆಯಲ್ಲಿ ಲಾಂಚ್ ಆಗುವ ನಿರೀಕ್ಷೆ ಇದೆ. ಇದು ಭಾರತದಲ್ಲಿ ಅಗ್ಗದ 5G ಫೋನ್ ಆಗಿರಬಹುದು ಎನ್ನಲಾಗಿದೆ.
ಇದನ್ನೂ ಓದಿ-Indian Railways ಸಾಮಾನ್ಯ ಟಿಕೆಟ್ ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೊಂದು ಸಂತಸದ ಸುದ್ದಿ !
ಸೋರಿಕೆಯನ್ನು ನಂಬುವುದಾದರೆ, ಫೋನ್ HD+ ರೆಸಲ್ಯೂಶನ್‌ನೊಂದಿಗೆ 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಫೋನ್ Qualcomm Snapdragon 480 SoC ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 4GB RAM ಮತ್ತು 32GB ಆಂತರಿಕ ಸಂಗ್ರಹಣೆಯೊಂದಿಗೆ ಬಿಡುಗಡೆಯಾಗಲಿದೆ. ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಬಹುದು, ಇದು 13MP ಪ್ರಾಥಮಿಕ ಸಂವೇದಕ ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ