ನವದೆಹಲಿ: Good Morning Messages Effect-  ಪ್ರತಿದಿನ ಬೆಳಿಗ್ಗೆ ವಾಟ್ಸಾಪ್‌ನಲ್ಲಿ ಶುಭೋದಯ ಸಂದೇಶಗಳನ್ನು (WhatsApp Good Morning Messages)  ಕಳುಹಿಸುವ ಭಾರತೀಯರ ಅಭ್ಯಾಸವು ಪ್ರಪಂಚದಾದ್ಯಂತ ಅಂತರ್ಜಾಲವನ್ನು ನಿಧಾನಗೊಳಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ವಾಸ್ತವವಾಗಿ, ಪ್ರಪಂಚದಾದ್ಯಂತದ ಐಟಿ ತಜ್ಞರು ನಿರ್ದಿಷ್ಟ ಸಮಯದಲ್ಲಿ ಜಗತ್ತಿನಲ್ಲಿ ಇಂಟರ್ನೆಟ್ ಏಕೆ ನಿಧಾನವಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ, ಇದರ ಹಿಂದೆ ಭಾರತದ ಕೋಟ್ಯಂತರ ಜನರ ಪ್ರತಿನಿತ್ಯದ ಮುಂಜಾನೆಯ ಗುಡ್ ಮಾರ್ನಿಂಗ್ ಹೇಳುವ  ಅಭ್ಯಾಸ ಇದಕ್ಕೆ ಕಾರಣವಾಗಿದೆ ಎಂದು ಕಂಡು ಹಿಡಿದಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಿಗ್ಗೆ ಎದ್ದ ತಕ್ಷಣ ಬಹುತೇಕ ಮಂದಿ ಮಾಡುವ ಕೆಲಸ ಅವರ ಮೊಬೈಲ್ ಫೋನ್ ಪರಿಶೀಲಿಸುವುದು. ನೀವು ಕೂಡ ಬೆಳಿಗ್ಗೆ ಹೊತ್ತು ನಿಮ್ಮ ಮೊಬೈಲ್ ಫೋನ್ ತೆಗೆದುಕೊಂಡು ವಾಟ್ಸಾಪ್ (WhatsApp) ಅನ್ನು ಪರಿಶೀಲಿಸಿದಾಗ,  ಕುಟುಂಬದ ಸದಸ್ಯರ ಗ್ರೂಪ್ ನಿಂದಲೋ, ಸ್ನೇಹಿತರಿಂದಲೋ ಯಾರಿಂದಲಾದರೂ ಶುಭೋದಯದ ಸಂದೇಶ ಬರುವುದನ್ನು ನೀವು ನೋಡಬಹುದು. ಇದರ ಜೊತೆಗೆ ನಿಮ್ಮಲ್ಲಿ ಬಹುತೇಕ ಜನರು ಈ ಕೆಲಸವನ್ನು ಸ್ವತಃ ಮಾಡುವ ಅಭ್ಯಾಸ ಹೊಂದಿರಬಹುದು. ಒಂದೊಮ್ಮೆ ಇದು ಫೋಟೋ ಸಂದೇಶ ಆಗಿದ್ದರೆ ನಗುತ್ತಿರುವ ಪುಟ್ಟ ಮಗುವಿನೊಂದಿಗೆ ಅಥವಾ ಕೆಲವು ಸ್ಫೂರ್ತಿದಾಯಕ ಚಿಂತನೆಯೊಂದಿಗೆ, ಶುಭೋದಯದ ಸಂದೇಶವನ್ನು ಬರೆದಿರುವ ಫೋಟೋ ಸಂದೇಶಗಳನ್ನೂ ನೀವು ಫಾರ್ವರ್ಡ್ ಮಾಡಬಹುದು. ಪ್ರತಿದಿನ ಭಾರತದಲ್ಲಿ ಕೋಟಿಗಟ್ಟಲೆ ಜನರು ವಾಟ್ಸಾಪ್‌ನಲ್ಲಿ ಒಂದೇ ರೀತಿಯ ಶುಭೋದಯ ಸಂದೇಶಗಳನ್ನು (WhatsApp Good Morning Messages) ಬೇರೆ ಬೇರೆ ರೀತಿಯಲ್ಲಿ ಕಳುಹಿಸುತ್ತಾರೆ.


ಇಂಟರ್ನೆಟ್ ಜಾಮ್‌ನಲ್ಲಿ ನಿಮ್ಮ ಕೈ!
ಆದರೆ ಶುಭೋದಯದ ಈ ಅಸಂಖ್ಯಾತ ಸಂದೇಶಗಳು ಅಂತರ್ಜಾಲವನ್ನು ಜಾಮ್ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ. ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್‌ ಅನ್ನು ಚಲಾಯಿಸುವಾಗ, ಕೆಲವೊಮ್ಮೆ ಇಂಟರ್‌ನೆಟ್‌ನ ವೇಗ (Internet Speed) ನಿಧಾನವಾಗುತ್ತದೆ ಮತ್ತು ನೀವು ಹುಡುಕುತ್ತಿರುವುದನ್ನು ಲೋಡ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಗಮನಿಸಿರಬೇಕು. ಇದು ಪ್ರಪಂಚದಾದ್ಯಂತ ಜನರಿಗೆ ಸಂಭವಿಸುತ್ತದೆ. ಪ್ರಪಂಚದಾದ್ಯಂತದ ಐಟಿ ತಜ್ಞರು ಈ ಒಗಟನ್ನು ಪರಿಹರಿಸಲು ಆಯಾಸಗೊಂಡಿದ್ದರು. ಆದರೆ ಅಂತಿಮವಾಗಿ ಕೋಟಿಗಟ್ಟಲೆ ಭಾರತೀಯರು ಶುಭೋದಯ ಸಂದೇಶಗಳನ್ನು ಕಳುಹಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಕಂಡುಬಂದಿದೆ.


ಇದನ್ನೂ ಓದಿ- Voter ID Card: ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ವೋಟರ್ ಐಡಿ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ


ಅಂಕಿಅಂಶಗಳು ಏನು ಹೇಳುತ್ತವೆ?
ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ವಾಟ್ಸಾಪ್ ((WhatsApp) ಅನ್ನು ಬಳಸುತ್ತಾರೆ ಮತ್ತು ಈ ಕೋಟಿಗಟ್ಟಲೆ ಜನರು ಮುಂಜಾನೆ ಒಬ್ಬರಿಗೊಬ್ಬರು ಶುಭೋದಯ ಸಂದೇಶಗಳನ್ನು (Good Morning Messages) ಕಳುಹಿಸಿದಾಗ, ಈ ಸಂದೇಶಗಳ ಪ್ರವಾಹವು ಉಂಟಾಗುತ್ತದೆ ಮತ್ತು ಪ್ರಪಂಚದಾದ್ಯಂತ ಅಂತರ್ಜಾಲದ ಬ್ಯಾಡ್‌ವಿಡ್ತ್ ಕಡಿಮೆಯಾಗುತ್ತಿದೆ. ಅಂದರೆ ಪ್ರಪಂಚದ ಇಂಟರ್ನೆಟ್ ಭಾರತೀಯರು ನೀಡಿದ ಈ ಹೊರೆ ಹೊರಲು ಸಾಧ್ಯವಿಲ್ಲ.


ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ, ಅಂತರ್ಜಾಲದಲ್ಲಿ (Internet) ಶುಭೋದಯ ಸಂದೇಶಗಳ ಚಿತ್ರಗಳನ್ನು ಹುಡುಕುವವರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ ಮತ್ತು ಅವುಗಳನ್ನು ಡೌನ್‌ಲೋಡ್ ಮಾಡುವವರ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ. ಈ ಎಲ್ಲಾ ಚಿತ್ರಗಳನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಲಾಗಿರುತ್ತದೆ ಮತ್ತು ಇದರಿಂದಾಗಿ ನಿಮ್ಮ ಮೊಬೈಲ್ ಫೋನ್‌ನ ಸಂಗ್ರಹವೂ ಕೂಡ ಫುಲ್ ಆಗಿರುತ್ತದೆ. ಇದು ಇಂಟರ್ನೆಟ್ ಜಾಮ್‌ ಜೊತೆಗೆ ನಿಮ್ಮ ಫೋನ್ ಹ್ಯಾಂಗ್ ಆಗಲು ಕೂಡ ಕಾರಣವಾಗಿದೆ.


ಈ ಸಮಸ್ಯೆಯನ್ನು ತಪ್ಪಿಸಲು ಒಂದು ಮಾರ್ಗವೆಂದರೆ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಅನಗತ್ಯ ಚಿತ್ರಗಳನ್ನು ಮತ್ತು ಸಂದೇಶಗಳನ್ನು ಅಳಿಸುವಂತಹ ಆಪ್‌ಗಳನ್ನು (Apps) ಬಳಸುವುದು. ಇನ್ನೊಂದು ಮಾರ್ಗವೆಂದರೆ ಸಮಸ್ಯೆಯ ಆಳಕ್ಕೆ ಹೋಗುವುದು.


ಶುಭೋದಯದ ಗಣಿತ:
ಭಾರತದಲ್ಲಿ ಈ ಶುಭೋದಯದ ಸಂದೇಶಗಳನ್ನು  (Good Morning Messages) ಹೆಚ್ಚಾಗಿ ವಯಸ್ಸಾದವರು ಕಳುಹಿಸುತ್ತಾರೆ. ಇವರಲ್ಲಿ ಕೆಲವರು ಏಕಾಂಗಿಯಾಗಿರಬಹುದು. ಹಾಗಾಗಿ ಸಾಮಾಜಿಕ ಮಾಧ್ಯಮವು (Social Media) ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಹೊಂದಲು ಅವರಿಗೆ ಏಕೈಕ ಮಾರ್ಗವಾಗಿರುತ್ತದೆ. ಹಾಗಾಗಿಯೇ ಅವರು ಮೊದಲು ಈ ಶುಭೋದಯ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ- Post office Jan Dhan Account: ಅಂಚೆ ಕಚೇರಿಯಲ್ಲಿ ಜನ್ ಧನ್ ಖಾತೆ ತೆರೆದು 2 ಲಕ್ಷ ಲಾಭ ಪಡೆಯಿರಿ


ಅನೇಕ ಬಾರಿ ಮನೆಯ ಹಿರಿಯರು ಅವರ ಅನಾರೋಗ್ಯ ಕಾರಣಗಳಿಂದಾಗಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಅಥವಾ ಕೆಲವೊಮ್ಮೆ ಅವರ ಕುಟುಂಬವು ಅವರಿಂದ ದೂರವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂಟರ್ನೆಟ್ (Internet) ಮತ್ತು ಸಾಮಾಜಿಕ ಮಾಧ್ಯಮಗಳು (Social Media) ಮಾತ್ರ ಅವರನ್ನು ಬೆಂಬಲಿಸುತ್ತವೆ ಎಂದವರು ಭಾವಿಸುತ್ತಾರೆ. ಈ ಜನರು ಅಂತರ್ಜಾಲದಲ್ಲಿ ಸಂದೇಶವನ್ನು ಹುಡುಕುತ್ತಾರೆ, ನಂತರ ಅದನ್ನು ಅನೇಕ ಜನರಿಗೆ ಫಾರ್ವರ್ಡ್ ಮಾಡುತ್ತಾರೆ ಮತ್ತು ನಂತರ ಈ ಸಂದೇಶಗಳನ್ನು ಪಡೆದವರು ಸಹ ಅವುಗಳನ್ನು ಫಾರ್ವರ್ಡ್ ಮಾಡುತ್ತಾರೆ. ಅಂದರೆ, ಸಂದೇಶವನ್ನು ಫಾರ್ವರ್ಡ್ (Forward Messages) ಮಾಡುವ ವೇಳೆಗೆ ಲಕ್ಷಾಂತರ ಸಂದೇಶಗಳಾಗಿ ಪರಿವರ್ತನೆಗೊಳ್ಳುತ್ತದೆ. ಅನೇಕ ಬಾರಿ ಒಂದೇ ಕುಟುಂಬದಲ್ಲಿ ವಾಸಿಸುವ ಜನರು ಪರಸ್ಪರ ಮಾತನಾಡುವುದಿಲ್ಲ. ಆದರೆ ಫ್ಯಾಮಿಲಿ ಗ್ರೂಪ್ ಗಳಲ್ಲಿ ಶುಭೋದಯ ಸಂದೇಶಗಳನ್ನು ಕಳುಹಿಸುತ್ತಾರೆ. ಇದು ವಿಚಿತ್ರ ಎನಿಸಿದರೂ ನಾವು ನೀವೆಲ್ಲರೂ ಈ ಕೆಲಸ ಮಾಡುತ್ತೇವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.


ನಕಲಿ ಸುದ್ದಿ ಹರಡುವ ಅಭ್ಯಾಸ:
ಸಂದೇಶಗಳನ್ನು ಫಾರ್ವರ್ಡ್ ಮಾಡುವ ಈ ಸಾಂಕ್ರಾಮಿಕವು ಕೆಲವೊಮ್ಮೆ ನಕಲಿ ಸುದ್ದಿಗಳನ್ನು (Fake Messages) ಹರಡುವ ಮಾಧ್ಯಮವೂ ಆಗುತ್ತದೆ. ಇದರ ಮೂಲಕ, ಪ್ರಚಾರದ ವೀಡಿಯೊಗಳು ಸಹ ಹರಡುತ್ತವೆ. ಈ ವಿಭಿನ್ನ ರೀತಿಯ ಸಂದೇಶಗಳು ಒಟ್ಟಾಗಿ ಸಮಾಜದಲ್ಲಿ ಕಹಿಯನ್ನು ಸೃಷ್ಟಿಸುತ್ತವೆ ಮತ್ತು ಅಂತರ್ಜಾಲದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವೂ ಆಗುತ್ತವೆ.


ಅಂದಹಾಗೆ, ಪ್ರಪಂಚದ ದೊಡ್ಡ ಹ್ಯಾಕರ್‌ಗಳು ಅಂತರ್ಜಾಲವನ್ನು ನಿಧಾನಗೊಳಿಸಲು (Slow Internet) ಸಾಕಷ್ಟು ಬ್ರೈನ್ ಉಪಯೋಗಿಸಬೇಕಾಗುತ್ತದೆ ಎಂಬುದು ಮೋಜಿನ ಸಂಗತಿಯಾಗಿದೆ. ಇದಕ್ಕಾಗಿ ಉತ್ತರ ಕೊರಿಯಾ ಮತ್ತು ರಷ್ಯಾದಂತಹ ದೇಶಗಳ ಹ್ಯಾಕರ್‌ಗಳು ಹಗಲಿರುಳು ಶ್ರಮಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಭಾರತದ ಜನರು ಶುಭೋದಯ ಸಂದೇಶಗಳನ್ನು ಕಳುಹಿಸುವ ಮೂಲಕ ಇಂಟರ್ನೆಟ್ ಅನ್ನು ಜಾಮ್ ಮಾಡುತ್ತಾರೆ.


ಇಂಟರ್ನೆಟ್ ವ್ಯಸನವನ್ನು ತಪ್ಪಿಸುವುದು ಹೇಗೆ?
ಸಾಮಾಜಿಕ ಮಾಧ್ಯಮ (Social Media) ಮತ್ತು ಅಂತರ್ಜಾಲದ (Internet) ಈ ಚಟವು ಮನೆಯಲ್ಲಿರುವ ಹಿರಿಯರು, ಕಿರಿಯರು ಎಲ್ಲರನ್ನೂ ಆವರಿಸಿದೆ. ಮನೆಯ ಹಿರಿಯರು ಹಬ್ಬಗಳಲ್ಲಿ ಉಪವಾಸವನ್ನು ಬಹಳ ಸುಲಭವಾಗಿ ಮಾಡುತ್ತಾರೆ. ಆದರೆ ಡಿಜಿಟಲ್ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅಥವಾ ಡಿಜಿಟಲ್ ಗ್ಯಾಜೆಟ್‌ಗಳಿಂದ ಕೆಲವು ಗಂಟೆಗಳ ಕಾಲವೂ ದೂರವಿರಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ- EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ?


ಉಪವಾಸದ ಸಮಯದಲ್ಲಿ ನಾಲಿಗೆಯನ್ನು ನಿಯಂತ್ರಿಸುವುದು ಸುಲಭ ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಆದರೆ ಇಂದಿನ ಯುಗದಲ್ಲಿ ಸ್ಮಾರ್ಟ್ ಫೋನ್ ನಲ್ಲಿ ಚಾಲನೆಯಲ್ಲಿರುವ ಬೆರಳುಗಳನ್ನು ನಿಯಂತ್ರಿಸುವುದು ಏಕೆ ಸುಲಭವಲ್ಲ? ಇದರ ಹಿಂದೆ ಡೋಪಮೈನ್ (Dopamine) ಇದೆ. ಇದು ನಿಮಗೆ ಸಂತೋಷದ ಭಾವನೆಯನ್ನು ನೀಡುವ ಮೆದುಳಿನಲ್ಲಿ ಮಾಡಿದ ರಾಸಾಯನಿಕವಾಗಿದೆ. ನೀವು ಸ್ಮಾರ್ಟ್‌ಫೋನ್‌ನಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಅಥವಾ ವಿಡಿಯೋ ಗೇಮ್ ಆಡುವಾಗ, ನಿಮ್ಮ ಮೆದುಳು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಈಗ ಡೋಪಮೈನ್ ನಿಮಗೆ ಸಂತೋಷವನ್ನುಂಟುಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಮೊಬೈಲ್ ಫೋನ್ ಅನ್ನು ಹೆಚ್ಚು ಹೆಚ್ಚು ಬಳಸಲು ಪ್ರಾರಂಭಿಸುತ್ತೀರಿ.


ಡೋಪಮೈನ್ ನಿಮ್ಮ ಮನಸ್ಸಿನಲ್ಲಿ ನಿಮಗೆ ಇಷ್ಟವಾದದ್ದನ್ನು ಖರೀದಿಸುವ, ನಿಮಗೆ ಇಷ್ಟವಾದದ್ದನ್ನು ತಿನ್ನುವ ಅಥವಾ ನೆಚ್ಚಿನ ಸ್ಥಳಕ್ಕೆ ಹೋಗುವ ಬಯಕೆಯನ್ನು ಸೃಷ್ಟಿಸುತ್ತದೆ. ಅಂದರೆ, ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮ ಆಸೆಗಳನ್ನು ಈಡೇರಿಸುವುದಕ್ಕಾಗಿ ನಡೆಸುತ್ತಿರುವ ರಾಸಾಯನಿಕವಾಗಿದೆ.


ಸಾಮಾಜಿಕ ಮಾಧ್ಯಮದಲ್ಲಿ (Social Media) ಇನ್ನೂ ಒಂದು ಪ್ರೊಫೈಲ್ ಚೆಕ್ ಮಾಡಿ, ಇನ್ನೂ ಕೆಲವು ಚಿತ್ರಗಳನ್ನು ನೋಡಿ, ಇನ್ನೊಂದು ವಿಡಿಯೋ ನೋಡಿ ಮತ್ತು ವೆಬ್ ಸರಣಿಯ ಈ ಕೊನೆಯ ಎಪಿಸೋಡ್ ನೋಡುವುದು, ಹೀಗೆ ಈ ಅಂತ್ಯವಿಲ್ಲದ ಆಸೆಗಳು ಡೋಪಮೈನ್ ನಿಂದ ಹುಟ್ಟಿದವು. ಆದರೆ ನೀವು ಇದನ್ನೆಲ್ಲಾ ಮಾಡಿದಾಗಲೂ, ಒಳಗೆ ಖಾಲಿತನ ತುಂಬುವುದಿಲ್ಲ ಮತ್ತು ನೀವು ಮತ್ತೆ ಅದೇ ಕೆಲಸವನ್ನು ಮಾಡಲು ಪ್ರಾರಂಭಿಸುತ್ತೀರಿ. ನಂತರ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗದ ಈ ಹತಾಶೆ ಒತ್ತಡ, ಖಿನ್ನತೆಗೆ ಬದಲಾಗುತ್ತದೆ. ನೀವು ವೈದ್ಯರು ಅಥವಾ ಮನಶ್ಶಾಸ್ತ್ರಜ್ಞರ ಬಳಿ ಹೋದರೆ, ಅವರು ನಿಮಗೆ ಕೆಲವು ಔಷಧಿಗಳನ್ನು ಸೂಚಿಸುತ್ತಾರೆ. ಆದರೆ ಈ ಔಷಧಿಗಳು ಕೂಡ ಡೋಪಮೈನ್ ಹೆಸರಿನ ಈ ಆಡಳಿತಗಾರನನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಮತ್ತು ಡಿಜಿಟಲ್ ಪ್ರಪಂಚದ ಭ್ರಮೆಯು ನಿಮ್ಮನ್ನು ಗೊಂದಲಕ್ಕೀಡುಮಾಡುತ್ತಲೇ ಇರುತ್ತದೆ.


ಈಗ ಪ್ರಪಂಚದಾದ್ಯಂತ ಮನೋವಿಜ್ಞಾನಿಗಳು ಅದನ್ನು ತಪ್ಪಿಸಲು ಒಂದು ಮಾರ್ಗವಿದೆ ಎಂದು ನಂಬಲು ಆರಂಭಿಸಿದ್ದಾರೆ. ಡೋಪಮೈನ್ ಡಿಟಾಕ್ಸ್ ಅಥವಾ ಡೋಪಮೈನ್ ಫಾಸ್ಟ್. ಇದರ ಅಡಿಯಲ್ಲಿ, ಡೋಪಮೈನ್‌ಗೆ ಕಾರಣವಾಗಿರುವ ಎಲ್ಲ ವಸ್ತುಗಳಿಂದ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.  ಈ ಉಪವಾಸದ ಸಮಯದಲ್ಲಿ, ಆಸೆಗಳು ನಿಮ್ಮನ್ನು ನಿಯಂತ್ರಿಸುವುದಿಲ್ಲ, ಬದಲಿಗೆ ನೀವು ಆಸೆಗಳನ್ನು ನಿಯಂತ್ರಿಸುತ್ತೀರಿ.


ಇದನ್ನೂ ಓದಿ- Internet Speed: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು


ಇದಕ್ಕಾಗಿ, ನೀವು ಮೊದಲು ನಿಮ್ಮನ್ನು ಹೆಚ್ಚು ಕಾಡುತ್ತಿರುವ ವಸ್ತುಗಳ ಪಟ್ಟಿಯನ್ನು ಮಾಡಬೇಕು. ಇದು ನಿಮ್ಮ ಸ್ಮಾರ್ಟ್ ಫೋನ್ (Smartphone) ಕೂಡ ಆಗಿರಬಹುದು, ಅದು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳೂ ಆಗಿರಬಹುದು. ನಿಮಗೆ ಹಾನಿಕಾರಕವಾದ ಕೆಲವು ಆಹಾರ ಮತ್ತು ಪಾನೀಯಗಳು ಕೂಡ ಇರಬಹುದು, ಆದರೆ ನೀವು ಅವುಗಳನ್ನು ಪದೇ ಪದೇ ತಿನ್ನುತ್ತೀರಿ ಅಥವಾ ಕುಡಿಯುತ್ತೀರಿ. ಇದರ ಹೊರತಾಗಿ, ನೀವು ಅಶ್ಲೀಲ ಚಲನಚಿತ್ರಗಳನ್ನು ನೋಡುವ ಮತ್ತು ಅತಿಯಾಗಿ ಶಾಪಿಂಗ್ ಮಾಡುವ ಅಭ್ಯಾಸವನ್ನು ಸಹ ಈ ಪಟ್ಟಿಯಲ್ಲಿ ಹಾಕಬಹುದು.


ಡಿಜಿಟಲ್ ಸನ್ಯಾಸಿಯಾಗುವುದು ಹೇಗೆ? 
ಇದರ ನಂತರ ನೀವು ಸ್ವಲ್ಪ ಸಮಯದವರೆಗೆ ಈ ಎಲ್ಲ ವಿಷಯಗಳಿಂದ ದೂರವಿರಬೇಕು. ನೀವು ಇದನ್ನು ಡಿಜಿಟಲ್ (Digital) ನಿವೃತ್ತಿ ಎಂದೂ ಕರೆಯಬಹುದು. ಒಂದೇ ವ್ಯತ್ಯಾಸವೆಂದರೆ ಸನ್ಯಾಸಿಗಳು ತಮ್ಮ ಸನ್ಯಾಸವನ್ನು ಕೆಲವೇ ಸಂದರ್ಭಗಳಲ್ಲಿ ಮುರಿಯುತ್ತಾರೆ ಆದರೆ ನಿಮ್ಮ ಅಭ್ಯಾಸಗಳನ್ನು ನಿಯಂತ್ರಿಸಿದ ನಂತರ ನೀವು ಡಿಜಿಟಲ್ ಜಗತ್ತಿಗೆ ಹಿಂತಿರುಗಬಹುದು ಮತ್ತು ಹಾಗೆ ಮಾಡುವ ಮೂಲಕ ನಿಮ್ಮ ಮೊಬೈಲ್ ಫೋನ್ ನಿಮ್ಮ ಮಾಲೀಕರಲ್ಲ ಬದಲಾಗಿ ನೀವು ಮೊಬೈಲ್ ಫೋನ್ ಮಾಲೀಕರು ಎಂಬುದನ್ನು ನೀವು ಕಾಣಬಹುದು. ಹಿಂದೂ ಧರ್ಮದಲ್ಲಿ ಸನ್ಯಾಸಿಗಳನ್ನು ಸ್ವಾಮಿ ಎಂದು ಕರೆಯುವುದನ್ನು ನೀವು ಗಮನಿಸಿರಬೇಕು. ಸ್ವಾಮಿ ಎಂದರೆ ಮಾಲೀಕ. ಒಬ್ಬ ವ್ಯಕ್ತಿಯು ಸನ್ಯಾಸಿಯಾದಾಗ, ಭೌತಿಕ ವಸ್ತುಗಳು ಅವನನ್ನು ವಿಚಲಿತಗೊಳಿಸುವುದಿಲ್ಲ, ಆದರೆ ಸನ್ಯಾಸಿ ಅವನ ಆಸೆಗಳ ಒಡೆಯ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.