Airtel Thanks App Offer  : ಭಾರ್ತಿ ಏರ್‌ಟೆಲ್ ಈಗ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 5GB ಉಚಿತ ಡೇಟಾವನ್ನು ನೀಡುತ್ತಿದೆ. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ಲಾಗ್ ಇನ್ ಮಾಡಿದಾಗ ಮಾತ್ರ ಈ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಎಂಬುದು ಏರ್‌ಟೆಲ್‌ನ ಅಪ್ಲಿಕೇಶನ್‌ ಆಗಿದ್ದು ಅದು ಬಳಕೆದಾರರಿಗೆ ರಿವಾರ್ಡ್‌ಗಳನ್ನು ಕ್ಲೈಮ್ ಮಾಡಲು, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಗೆ ಆಕ್ಸೆಸ್ ಪಡೆಯಲು  ಪ್ರಸ್ತುತ ಬಿಲ್‌ಗಳನ್ನು ಪಾವತಿಸಲು,  ಪ್ಲಾನ್ ಬದಲಾಯಿಸಲು  ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ಭಾರ್ತಿ ಏರ್‌ಟೆಲ್ 5GB ಉಚಿತ ಡೇಟಾ ವೋಚರ್ ಕೊಡುಗೆ : 
ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್ ಸಂಪರ್ಕವನ್ನು ಖರೀದಿಸುವ ಗ್ರಾಹಕರಿಗೆ ಏರ್‌ಟೆಲ್ 5GB ಉಚಿತ ಡೇಟಾವನ್ನು ನೀಡಲಿದೆ. ಸರಳವಾಗಿ ಹೊಸ ಏರ್‌ಟೆಲ್ ಸಂಪರ್ಕವನ್ನು ಪಡೆದು, ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೆಕಿ. ನಂತರ ಏರ್‌ಟೆಲ್ ಸಂಖ್ಯೆಯನ್ನು  ನೋಂದಾಯಿಸಿ  ಲಾಗ್ ಇನ್ ಮಾಡಿ. ಅದನ್ನು ಪೋಸ್ಟ್ ಮಾಡಿ, ಅಪ್ಲಿಕೇಶನ್‌ನಲ್ಲಿನ  ಮೈ ಕೂಪನ್ ಸೆಕ್ಷನ್ ಗೆ ಹೋಗಿ, ಉಚಿತ ಡೇಟಾ ಕೂಪನ್ ಅನ್ನು ಕ್ಲೈಮ್ ಮಾಡಿ.


ಇದನ್ನೂ ಓದಿ : Budget Smartphone: ಕೇವಲ 6,199 ರೂ.ಗೆ Realme C30 ಸ್ಮಾರ್ಟ್‌ಫೋನ್, ಇಂದೇ ಖರಿದಿಸಿ


90 ದಿನಗಳಲ್ಲಿ  ಕ್ಲೈಂ ಮಾಡಬೇಕು : 
ಅಪ್ಲಿಕೇಶನ್‌ನಲ್ಲಿ ಹೊಸ ಸಂಖ್ಯೆಯೊಂದಿಗೆ ಲಾಗಿನ್ ಮಾಡಿದ ನಂತರ ಪ್ರತಿಯೊಬ್ಬ ಹೊಸ ಬಳಕೆದಾರರು  ಕಂಪನಿಯಿಂದ 1GBಯ 5  ಕೂಪನ್‌ಗಳು ಸಿಗುತ್ತವೆ. ಬಳಕೆದಾರರು ಡೇಟಾ ವೋಚರ್‌ಗಳನ್ನು 90 ದಿನಗಳ ಒಳಗೆ ಕ್ಲೈಮ್ ಮಾಡಬೇಕು. ಇಲ್ಲವಾದರೆ ನಂತರ ಇದರ ಪ್ರಯೋಜನ ಪಡೆಯುವುದು ಸಾಧ್ಯವಾಗುವುದಿಲ್ಲ. ಇದು ಹೊಸ ಪ್ರಿಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ಥ್ಯಾಂಕ್ಸ್ ಡೌನ್‌ಲೋಡ್ ಮಾಡಿದರೆ ಸಿಗುವ ಕೊಡುಗೆಯಾಗಿದೆ.


ರೆಫರಲ್‌ಗೆ ಸಿಗುತ್ತದೆ100 ರೂಪಾಯಿ :
ಏರ್‌ಟೆಲ್ ಬಳಕೆದಾರರು ಪ್ರತಿ ಯಶಸ್ವಿ ರೆಫರಲ್‌ನಲ್ಲಿ 100  ರೂಪಾಯಿ  ಗಳಿಸಬಹುದು. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ಗೆ ಹೋಗುವ ಮೂಲಕ ಬಳಕೆದಾರರು ಏರ್‌ಟೆಲ್ ಪ್ರಿಪೇಯ್ಡ್ ಸಿಮ್‌ನ ರೆಫರಲ್ ಲಿಂಕ್ ಅನ್ನು ತಮ್ಮ ಸ್ನೇಹಿತರಿಗೆ ಕಳುಹಿಸಬಹುದು. ಹೊಸ ಏರ್‌ಟೆಲ್ ಸಿಮ್ ಖರೀದಿಸಲು ಬಳಕೆದಾರರ ಸ್ನೇಹಿತರು ರೆಫರಲ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಬಳಕೆದಾರರು ಮತ್ತು ಸ್ನೇಹಿತ ಇಬ್ಬರೂ ಭಾರ್ತಿ ಏರ್‌ಟೆಲ್‌ನಿಂದ 100 ರೂ. ಮೌಲ್ಯದ ರಿಯಾಯಿತಿ ಕೂಪನ್‌ಗಳನ್ನು ಪಡೆಯುತ್ತಾರೆ. 


ಇದನ್ನೂ ಓದಿ :  ನಿಮಗೆ ಗೊತ್ತೇ ? ಭಾರತೀಯ ಕ್ರಿಕೆಟಿಗರ ಬ್ಯಾಟ್ ನಲ್ಲಿ ಕಂಪ್ಯೂಟರ್‌ ನಂಥಹ ಈ ಡಿವೈಸ್ ಹಾಕಲಾಗಿರುತ್ತದೆ.. !


5GB ಡೇಟಾವನ್ನು ಬಳಕೆದಾರರಿಗೆ ಏಕಕಾಲದಲ್ಲಿ ನೀಡಲಾಗುವುದಿಲ್ಲ ಬದಲಿಗೆ, ಇದು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ ತಲಾ 1GB ಯ ಐದು ಕೂಪನ್‌ಗಳ ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. 


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.