ನಿಮಗೆ ಗೊತ್ತೇ ? ಭಾರತೀಯ ಕ್ರಿಕೆಟಿಗರ ಬ್ಯಾಟ್ ನಲ್ಲಿ ಕಂಪ್ಯೂಟರ್‌ ನಂಥಹ ಈ ಡಿವೈಸ್ ಹಾಕಲಾಗಿರುತ್ತದೆ.. !

T20 World Cup Bat: ಕ್ರಿಕೆಟ್‌ನಲ್ಲಿ ಬಳಸುವ ಬ್ಯಾಟ್‌ನೊಳಗೆ ಹಲವಾರು ರೀತಿಯ ಸೆನ್ಸಾರ್‌ಗಳನ್ನು ಬಳಸಲಾಗುತ್ತದೆ. ಅದು ಆಟಗಾರರ ಪ್ರದರ್ಶನವನ್ನು ಅಳೆಯುತ್ತದೆ.

Written by - Ranjitha R K | Last Updated : Sep 21, 2022, 03:27 PM IST
  • ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ
  • ಮ್ಯಾಚ್ ವೇಳೆ ಅವರು ಬಳಸುವ ಉಪಕರಣಗಳು ಬಹಳ ಮುಖ್ಯ
  • ಬ್ಯಾಟ್ ನಲ್ಲಿ ಬಳಸಲಾಗಿರುತ್ತದೆ ಈ ಡಿವೈಸ್
ನಿಮಗೆ ಗೊತ್ತೇ ? ಭಾರತೀಯ  ಕ್ರಿಕೆಟಿಗರ ಬ್ಯಾಟ್ ನಲ್ಲಿ ಕಂಪ್ಯೂಟರ್‌ ನಂಥಹ ಈ ಡಿವೈಸ್ ಹಾಕಲಾಗಿರುತ್ತದೆ.. ! title=
T20 World Cup Bat (file photo)

T20 World Cup Bat : 2022ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪಂದ್ಯದಲ್ಲಿ ಆಟಗಾರರು ಎಷ್ಟು ಮುಖ್ಯವೋ,  ಮ್ಯಾಚ್ ವೇಳೆ ಅವರು ಬಳಸುವ ಉಪಕರಣಗಳು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ ನೋಡುವುದಕ್ಕೆ ಬಹಳ ಸರಳ ಎಂಬಂತೆ ಕಾಣಿಸುತ್ತದೆ. ಆದರೆ, ವಾಸ್ತವದಲ್ಲಿ ಇದು ತುಂಬಾ ಹೈಟೆಕ್ ಆಗಿದ್ದು, ಅದರಲ್ಲಿ ವಿಶೇಷ ತಂತ್ರಜ್ಞಾನವನ್ನು ಬಳಸಲಾಗುತ್ತದೆ. 

ಏನು ಹೇಳುತ್ತದೆ ತಂತ್ರಜ್ಞಾನ ? : 
ಕ್ರಿಕೆಟ್‌ನಲ್ಲಿ ಬಳಸುವ ಬ್ಯಾಟ್‌ನೊಳಗೆ ಹಲವಾರು ರೀತಿಯ ಸೆನ್ಸಾರ್‌ಗಳನ್ನು ಬಳಸಲಾಗುತ್ತದೆ. ಅದು ಆಟಗಾರರ ಪ್ರದರ್ಶನವನ್ನು ಅಳೆಯುತ್ತದೆ. ಬ್ಯಾಟ್‌ನಲ್ಲಿ ಅಳವಡಿಸಲಾಗಿರುವ ಸಾಧನಗಳಲ್ಲಿ ಮೊದಲನೆಯದ್ದು ಸ್ಪೀಡ್ ಸೆನ್ಸಾರ್. ಈ ಸೆನ್ಸಾರ್ ಸಹಾಯದಿಂದ ಚೆಂಡು ಯಾವ ವೇಗದಲ್ಲಿ ಬ್ಯಾಟ್‌ಗೆ ಬಂದು ಅಪ್ಪಳಿಸಿದೆ, ದಾಂಡಿಗ ಯಾವ ವೇಗದಲ್ಲಿ ಶಾಟ್ ಹೊಡೆದಿದ್ದಾನೆ ಎಂದು ತಿಳಿಯುತ್ತದೆ. ಈ ಮಾಹಿತಿಯು ವೈಫೈ ಸಹಾಯದಿಂದ ಕಂಪ್ಯೂಟರ್ ಅನ್ನು ತಲುಪುತ್ತಲೇ ಇರುತ್ತದೆ. ನಂತರ ಅದೇ ಮಾಹಿತಿಯು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಟಿವಿಯಲ್ಲಿ ಕಾಣಿಸುತ್ತದೆ. ಇದರೊಂದಿಗೆ ಬ್ಯಾಟ್ ಒಳಗೆ ಮೈಕ್ರೊಫೋನ್ ಅನ್ನು ಕೂಡ ಅಳವಡಿಸಲಾಗಿರುತ್ತದೆ. ಚೆಂಡು ಬ್ಯಾಟ್‌ ಗೆ ತಾಕಿದೆಯೇ ಇಲ್ಲವೇ ಎನ್ನುವುದು ಖಚಿತವಾಗದೆ ಹೋದಾಗ, ಈ ಮೈಕ್ರೊಫೋನ್ ಸಹಾಯದಿಂದ ಅದನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ. 

ಇದನ್ನೂ ಓದಿ : BSNLಗೆ ಟಕ್ಕರ್ ನೀಡಲು ಅಗ್ಗದ ಪ್ಲಾನ್ ಪರಿಚಯಿಸಿದ ಜಿಯೋ

ಈ ತಂತ್ರಜ್ಞಾನ ಯಾಕೆ ಬೇಕು ? : 
ಪಂದ್ಯವನ್ನು ಪಾರದರ್ಶಕವಾಗಿಡಲು ಮತ್ತು ಸಮಯವನ್ನು ವ್ಯರ್ಥ ಮಾಡದಿರಲು ಈ ತಂತ್ರಗಳನ್ನು ಬಳಸಲಾಗುತ್ತದೆ. ಇವುಗಳ ಸಹಾಯದಿಂದ ಪಂದ್ಯದ ವೇಳೆ ಯಾವುದೇ ಮೋಸವಾಗದಂತೆ ನೋಡಿಕೊಳ್ಳಲಾಗುತ್ತದೆ. ಈ ತಂತ್ರಜ್ಞಾನ ಹೊಂದಿರುವ ಬ್ಯಾಟ್‌ ಬಹಳ  ದುಬಾರಿಯಾಗಿರುತ್ತದೆ. 

ಇದನ್ನೂ ಓದಿ : Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News