BSNL ಗ್ರಾಹಕರಿಗೆ ಒಳ್ಳೆಯ ಸುದ್ದಿ, ಶೀಘ್ರದಲ್ಲೇ ಸಿಗಲಿದೆ ಈ ಸೌಲಭ್ಯ
ಲಭ್ಯವಾದ ಮಾಹಿತಿಯ ಪ್ರಕಾರ, ಶೀಘ್ರದಲ್ಲೇ 4G ಸೇವೆಯನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸಶಕ್ತ ತಾಂತ್ರಿಕ ಗುಂಪಿನ ಮುಂದೆ ಇಡಲಾಗುವುದು. ಅನುಮೋದನೆಯ ನಂತರವೇ ಸೇವೆ ಪ್ರಾರಂಭವಾಗುತ್ತದೆ.
ನವದೆಹಲಿ: ದೇಶಾದ್ಯಂತ ಇರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಗ್ರಾಹಕರಿಗೆ ಒಳ್ಳೆಯ ಸುದ್ದಿ ಬಂದಿದೆ. ಬಿಎಸ್ಎನ್ಎಲ್ ತನ್ನ 4G ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂಬ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬಿಎಸ್ಎನ್ಎಲ್ (BSNL) ನ ಹಿರಿಯ ಅಧಿಕಾರಿಯೊಬ್ಬರು ದೇಶಾದ್ಯಂತ 4G ನೆಟ್ವರ್ಕ್ ಪ್ರಾರಂಭಿಸಲು ಸಂಬಂಧಿಸಿದ ಫೈಲ್ ಅನ್ನು ಟೆಲಿಕಾಂ ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ 4G ಸೇವೆ ಯಾವಾಗ ಲಭ್ಯವಾಗಲಿದೆ ಎಂಬುದರ ನಿಖರ ದಿನಾಂಕ ನಿರ್ಧರಿಸಲಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ ಶೀಘ್ರದಲ್ಲೇ 4G ಸೇವೆಯನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಸಶಕ್ತ ತಾಂತ್ರಿಕ ಗುಂಪಿನ ಮುಂದೆ ಇಡಲಾಗುವುದು. ಅನುಮೋದನೆಯ ನಂತರವೇ ಸೇವೆ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ.
BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್ ಗಿಫ್ಟ್ : ಈ ವಿಶೇಷ ಯೋಜನೆಗಳಿಗೆ ನೀಡುತ್ತಿದೆ 25% ರಿಯಾಯಿತಿ
ಏತನ್ಮಧ್ಯೆ ಬಿಎಸ್ಎನ್ಎಲ್ ನೌಕರರು ಮತ್ತು ಅಧಿಕಾರಿಗಳು 4G ಸೇವೆಯನ್ನು ಪರಿಚಯಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾರೆ. ಸರ್ಕಾರಿ ಟೆಲಿಕಾಂ ಕಂಪನಿಯನ್ನು ಉಳಿಸಲು ಪ್ರಯತ್ನಿಸದಿದ್ದರೆ ನವೆಂಬರ್ 26 ರಿಂದ ಯೂನಿಯನ್ ಧರಣಿ ನಡೆಸಬಹುದು ಎಂದು ಸುಮಾರು ಎಂಟು ಸಂಸ್ಥೆಗಳು ಬೆದರಿಕೆ ಹಾಕಿವೆ.
ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಜಾಲ ಇರುವುದರ ಹೊರತಾಗಿಯೂ ಬಿಎಸ್ಎನ್ಎಲ್ ಇನ್ನೂ 2 ಜಿ ಮತ್ತು 3 ಜಿ ಸೇವೆಗಳನ್ನು ಮಾತ್ರ ಒದಗಿಸುತ್ತದೆ. ಈ ಹಿನ್ನಲೆಯಲ್ಲಿ ಖಾಸಗಿ ಕಂಪನಿಗಳಿಗೆ ಲಾಭವಾಗಲು ಸರ್ಕಾರಿ ಟೆಲಿಕಾಂ ಕಂಪನಿಯು ಹಾಳಾಗುತ್ತಿದೆ ಎಂದು ನೌಕರರ ಸಂಘಟನೆಗಳು ಆರೋಪಿಸುತ್ತಿವೆ.