Google Alert - ನವದೆಹಲಿ: ಸರ್ಚ್ ಇಂಜಿನ್ ದೈತ್ಯ google ತನ್ನ Gmail ಬಳಕೆದಾರರಿಗೆ ವಾರ್ನಿಂಗ್ ನೀಡಿದೆ. ಕಂಪನಿ ಬಿಡುಗಡೆಗೊಳಿಸಿರುವ ನೂತನ ನಿಯಮ-ನಿಬಂಧನೆಗಳನ್ನು ಒಪ್ಪಿಕೊಳ್ಳಲೇಬೇಕು ಎಂದು Gmail ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿದೆ. ಹೊಸ ನಿಯಮಗಳನ್ನು ಒಪ್ಪದಿದ್ದರೆ ನಿಮ್ಮ ಖಾತೆಯಲ್ಲಿ ಪ್ರಮುಖ ವೈಶಿಷ್ಟ್ಯಗಳು ಸ್ಥಗಿತಗೊಳ್ಳಲಿವೆ. ಅಂದರೆ, ಬಳಕೆದಾರರು ಈ ವೈಶಿಷ್ಟ್ಯಗಳಿಂದ ವಂಚಿತರಾಗಲಿದ್ದಾರೆ. express.co.uk ಪ್ರಕಟಿಸಿರುವ ವರದಿಯೊಂದರಲ್ಲಿ ಈ ಮಾಹಿತಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- GMAIL ನ ಈ Top Secret Feature ಗಳು ನಿಮಗೂ ಗೊತ್ತಿರಲಿಕ್ಕಿಲ್ಲ


Gmail ಈ ವೈಶಿಷ್ಟ್ಯಗಳು ಬ್ಲಾಕ್ ಆಗಬಹುದು
ವರದಿಗಳ ಪ್ರಕಾರ ಗೂಗಲ್ ನ ಈ ವಾರ್ನಿಂಗ್ ಜನವರಿ 25 ರ ಡೆಡ್ ಲೈನ್ ಗೂ ಮೊದಲು ನೀಡಲಾಗಿದೆ. ಅಂತಿಮ ಗಡುವು ಮುಕ್ತಾಯಕ್ಕು ಮೊದಲು ಈ ಹೊಸ ನಿಯಮಗಳನ್ನು ಬಳಕೆದಾರರು ಒಪ್ಪಿಕೊಳ್ಳಬೇಕಾಗಿದೆ.  ಒಂದು ವೇಳೆ ಒಪ್ಪಿಕೊಳ್ಳದೆ ಹೋದಲ್ಲಿ ಸ್ಮಾರ್ಟ್ ಕಂಪೋಸ್, ಅಸಿಸ್ಟೆಂಟ್ ರಿಮೈಂಡರ್ಸ್ ಹಾಗೂ ಆಟೋಮ್ಯಾಟಿಕ್ ಇ-ಮೇಲ್ ಫಿಲ್ಟರಿಂಗ್ ಗಳಂತಹ ವೈಶಿಷ್ಟ್ಯಗಳು ಬ್ಲಾಕ್ ಆಗಲಿವೆ. ಈ ಕುರಿತು ಹೇಳಿಕೆ ನೀಡಿರುವ Google ಜಿಮೇಲ್ ನಲ್ಲಿನ ಸ್ಮಾಲ್ ಪ್ರಿಂಟ್ ಅನ್ನು ಅಪ್ಡೇಟ್ ಮಾಡಲಾಗಿದೆ ಎಂದು ಹೇಳಿದೆ. ಬಳಕೆದಾರರಿಗೆ ಅವರ ವೈಯಕ್ತಿಕ ಡೇಟಾವರೆಗಿನ ಎಲ್ಲದರ ಕಂಟ್ರೋಲ್ ನೀಡುವುದರ ಜೊತೆಗೆ ಕಪ್ಲೈನ್ಸ್ ಗೆ ಸಂಬಂಧಿಸಿದ ಅವಶ್ಯಕತೆಗಳನ್ನು ಪೂರೈಸುವುದಾಗಿದೆ ಎಂದು ಅದು ಹೇಳಿದೆ.
[[{"fid":"201611","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನು ಓದಿ- Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!


ಈ ಮೊದಲು ಕೂಡ ಈ ವಾರ್ನಿಂಗ್ ನೀಡಿದೆ Google
ಗೂಗಲ್ ನ ಈ ಅಪ್ಡೇಟ್ ಆಪ್ ಬಳಕೆದಾರರಿಗೆ ಈ ವೈಶಿಷ್ಟ್ಯಗಳನ್ನು ಬಳಸಲು ಕಂಪನಿಯ ಜೊತೆಗೆ ಕೆಲ ದತ್ತಾಂಶಗಳನ್ನು ನೀಡಲು ಅನುಮತಿಸುತ್ತಾರೆಯೇ ಎಂಬ ಆಯ್ಕೆ ಒದಗಿಸುತ್ತದೆ.  ಈ ಕುರಿತು ಬರೆದುಕೊಂಡಿರುವ ಗೂಗಲ್ "ನೀವು ಜನವರಿ 25, 2021 ರ ನಂತರ ಈ ವೈಶಿಷ್ಟ್ಯಗಳನ್ನು ಬಳಸುವುದನ್ನು ಮುಂದುವರಿಸಲು ಬಯಸಿದರೆ, ಈ ವಿಶೇಷ ವೈಶಿಷ್ಟ್ಯಗಳನ್ನು ಚಾಲನೆಯಲ್ಲಿಡಲು ನೀವು Google ಸೆಟ್ಟಿಂಗ್‌ಗಳಲ್ಲಿ ಆಯ್ಕೆ ಮಾಡಬೇಕಾಗುತ್ತದೆ" ಎಂದಿದೆ.  ಈ ಮೊದಲು, ಬಳಕೆದಾರರು ಹೊಸ ನಿಯಮಗಳನ್ನು ಪಾಲಿಸದಿದ್ದರೆ ಅವರ ಜಿಮೇಲ್, ಗೂಗಲ್ ಫೋಟೋಗಳು ಮತ್ತು ಗೂಗಲ್ ಡ್ರೈವ್ ಡಿಲೀಟ್ ಆಗುವ ಸಾಧ್ಯತೆ ಇದೆ ಎಂದು ಗೂಗಲ್ ಹೇಳಿತ್ತು.


ಇದನ್ನು ಓದಿ-ಗೂಗಲ್ ಫೋಟೋ ಬಳಕೆ ಇನ್ನು ಮುಂದೆ ಉಚಿತವಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.