Gmail Top Secret Features-ನವದೆಹಲಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರೂ ಮೇಲ್ ಮಾಡಲು Gmail ಅನ್ನು ಬಳಸುತ್ತಾರೆ. ಇದಕ್ಕಾಗಿ ಇಮೇಲ್ ಐಡಿ ಹೊಂದಿರುವುದು ಬಹಳ ಮುಖ್ಯ ಮತ್ತು ಈ ಸಮಯದಲ್ಲಿ ಜಿಮೇಲ್ ಹೆಚ್ಚು ಬಳಕೆಯಾಗುವ ಇಮೇಲ್ ಆಗಿದೆ. ಅಧಿಕಾರಿಗಳಿಂದ ಹಿಡಿದು ವೈಯಕ್ತಿಕ ಬಳಕೆದಾರರು Gmail ಬಳಸುತ್ತಾರೆ. ಇಂದು ನಾವು ನಿಮಗೆ Gmail ನ ನಾಲ್ಕು ಉನ್ನತ ಸಿಕ್ರೆಟ್ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಲಿದ್ದೇವೆ. ಇವುಗಳ ಸಹಾಯದಿಂದ ನೀವು ಸಾಕಷ್ಟು ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.
ಮೇಲ್ ಗಳನ್ನು ಮ್ಯೂಟ್ ಮಾಡಬಹುದು
ಒಂದು ವೇಳೆ ಥ್ರೆಡ್ ಮೆಸೇಜ್ ಗಳಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ನೀವು ಸಕ್ರೀಯ್ ಗ್ರೂಪ್ ಅನ್ನು ಮ್ಯೂಟ್ ಮಾಡಬಹುದು. ಇದರಿಂದ ಥ್ರೆಡ್ ಸಂದೇಶಗಳು ಆರ್ಕೈವ್ ಗೆ ಹೋಗಲಿವೆ ಹಾಗೂ ಬಿಡುವಿನ ಸಮಯದಲ್ಲಿ ನೀವು ಅವುಗಳನ್ನು ಪರಿಶೀಲಿಸಬಹುದು. ಥ್ರೆಡ್ ಸಂದೇಶಗಳನ್ನು ಮ್ಯೂಟ್ ಮಾಡಲು ಈ ಸಂದೇಶಗಳ ಮುಂದೆ ಇರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ಕಿಸಿ. ಅಲ್ಲಿ ನಿಮಗೆ ಮ್ಯೂಟ್ ಬಟನ್ ಕಾಣಸಿಗಲಿದೆ. ಆ ಆಯ್ಕೆಯನ್ನು ಕ್ಲಿಕ್ಕಿಸುವ ಮೂಲಕ ಕನ್ವರ್ಸೆಶನ್ ಅನ್ನು ನೀವು ಮ್ಯೂಟ್ ಮಾಡಬಹುದು.
ಮೇಲ್ ಗಳನ್ನು ಈ ರೀತಿ ಸ್ನೂಜ್ ಮಾಡಿ
ಕೆಲಸ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನೀವು ಸಮಯ ಉಳಿತಾಯ ಮಾಡಲು ಬಯಸುತ್ತಿದ್ದರೆ, ಈ ವೈಶಿಷ್ಟ್ಯವನ್ನು ಸಕ್ರೀಯಗೊಳಿಸಿ. ಇದರಿಂದ ಅತ್ಯಾವಶ್ಯಕವಾಗಿರುವ ಮೇಲ್ ಗಳನ್ನು ಒಂದು ನಿಗದಿತ ಸಮಯದ ಬಳಿಕ ನೋಡಬಹುದು ಹಾಗೂ ಇದರಲ್ಲಿ ನಿಮಗೆ ರಿಪ್ಲೈ ಆಪ್ಶನ್ ಕೂಡ ಸಿಗಲಿದೆ. ಇದರಿಂದ ನಿಮ್ಮ ಯಾವುದೇ ಮೇಲ್ ಮಿಸ್ ಆಗುವುದಿಲ್ಲ.
ಇದನ್ನು ಓದಿ-Gmailನಲ್ಲಿ ನೀವು ಅನೇಕ ಇಮೇಲ್ ಸಿಗ್ನೇಚರ್ ವೈಶಿಷ್ಟ್ಯಗಳನ್ನು ಹೇಗೆ ಬಳಸಬಹುದೆಂದು ತಿಳಿಯಿರಿ
ಅನಾವಶ್ಯಕ ಮೇಲ್ ಗಳನ್ನು ಡಿಲೀಟ್ ಮಾಡಬಹುದು
ಜಿಮೇಲ್ ಮೇಲೆ ಇರುವ ಆಟೋ ಅಡ್ವಾನ್ಸ್ ವೈಶಿಷ್ಟ್ಯದ ಸಹಾಯದಿಂದ ನೀವು ಅನಾವಶ್ಯಕ ಮೇಲ್ ಗಳನ್ನುಡಿಲೀಟ್ ಮಾಡಬಹುದು. ಇದಕ್ಕಾಗಿ ಮೊದಲು ನೀವು ಸೆಟ್ಟಿಂಗ್ಸ್ ನಲ್ಲಿನ ಆಟೋ ಅಡ್ವಾನ್ಸ್ ಆಪ್ಶನ್ ಅನ್ನು ಆಯ್ಕೆ ಮಾಡಿ ಅದನ್ನು ಸಕ್ರೀಯಗೊಳಿಸಿ .
ಇದನ್ನು ಓದಿ- YouTube, Gmail Down: ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡು ಮರುಸ್ಥಾಪನೆಯಾದ ಸೇವೆ
Advanced Search ವೈಶಿಷ್ಟ್ಯ
ಯಾವುದೇ ಒಂದು ನಿರ್ಧಿಷ್ಟ ಮೇಲ್ (Gmail) ಅನ್ನು ಹುಡುಕಲು ತುಂಬಾ ಸಮಯ ವ್ಯರ್ಥವಾಗುತ್ತದೆ. ಇದರಿಂದ ಮುಕ್ತಿಪಡೆಯಲು ಅಡ್ವಾನ್ಸ್ಡ್ ಸರ್ಚ್ ಆಪ್ಶನ್ ಬಳಕೆ ಮಾಡಿ. ಇದನ್ನು ಉಪಯೋಗಿಸಲು ನೀವು ಸರ್ಚ್ ಆಪ್ಶನ್ ಬಲಭಾಗದಲ್ಲಿ ಡಾಟ್ ಗಳ ಮೇಲೆ ಕ್ಲಿಕ್ಕಿಸಿ. ಆಗ ನಿಮಗೆ ಹೆಚ್ಚುವರಿ ಟ್ಯಾಬ್ ವೊಂದು ಕಾಣಸಿಗಲಿದೆ. ಇಲ್ಲಿ ನೀವು ಟೈಮ್, ಡೇಟ್ ಹಾಗೂ ಕೀವರ್ಡ್ ಆಧರಿಸಿ ಹುಡುಕಾಟ ನಡೆಸಬಹುದು.
ಇದನ್ನು ಓದಿ-Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.