ನವದೆಹಲಿ: ಗೂಗಲ್ ಕ್ರೋಮ್ (Google Chrome)ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಇತ್ತೀಚೆಗಷ್ಟೇ ಗೂಗಲ್ ತನ್ನ ಅಂಡ್ರಾಯಿಡ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಆಂಡ್ರಾಯ್ಡ್ ಸಾಧನಗಳಲ್ಲಿನ ಕ್ರೋಮ್ ಸೆಕ್ಯುರಿಟಿ ಸ್ಯಾಂಡ್‌ಬಾಕ್ಸ್ ಅನ್ನು ಬೈಪಾಸ್ ಮಾಡಲು ಮತ್ತು ಮೂಲ ಓಎಸ್‌ನಲ್ಲಿ ಚಲಾಯಿಸಲು ದಾಳಿಕೋರರಿಗೆ ಅವಕಾಶ ನೀಡಲು ಈ ದೋಷವನ್ನು ಬಳಸಲಾಗಿದೆ. ಏತನ್ಮಧ್ಯೆ, ಈಗ ಇದನ್ನು ತಪ್ಪಿಸಲು ಗೂಗಲ್ ಮಾಹಿತಿಯನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಎಚ್ಚರಿಕೆ ! ನೀವೂ Google Chrome ಬಳಸುತ್ತೀರಾ? ಈ ಸುದ್ದಿ ತಪ್ಪದೆ ಓದಿ


ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಕ್ರೋಮ್ ಅನ್ನು ಅಪ್ಡೇಟ್ ಮಾಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಮ್ಮ ಬ್ರೌಸರ್‌ನಲ್ಲಿನ ಝೀರೋ ಡೇ  ದೋಷದಿಂದ ಸುರಕ್ಷಿತವಾಗಿರಲು ಕ್ರೋಮ್ ಬ್ರೌಸರ್ ಅನ್ನು ನವೀಕರಿಸಲು ಗೂಗಲ್ ಸಲಹೆ ನೀಡಿದೆ. ಝೀರೋ ಡೇ ಸೂಕ್ಷ್ಮತೆಯನ್ನು ಸರಿಪಡಿಸಲು ಟೆಕ್ ದೈತ್ಯ ಆಂಡ್ರಾಯ್ಡ್ ಬ್ರೌಸರ್‌ಗಾಗಿ ಕ್ರೋಮ್‌ಗಾಗಿ ಭದ್ರತಾ ನವೀಕರಣಗಳನ್ನು ಬಿಡುಗಡೆ ಮಾಡಿದೆ.


ಇದನ್ನು ಓದಿ- ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು Google ಮಾಡಿದೆ ಈ ಬದಲಾವಣೆ... ತಿಳಿದುಕೊಳ್ಳಲು ಮರೆಯದಿರಿ


ಗೂಗಲ್ ಕ್ರೋಮ್ ನಲ್ಲಿ ಮೂರನೇ ಬಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಳೆದ ಎರಡು ವಾರಗಳಲ್ಲಿ ಗೂಗಲ್ ನ ಥ್ರೆಟ್ ಅನಾಲಿಸಿಸ್ ಗ್ರೂಪ್ (TAG) ತಂಡದ ವತಿಯಿಂದ ಶೋಧಕ್ಕೊಳಗಾದ ಝೀರೋ ಡೇ ನ ಗುರುತನ್ನು ಪತ್ತೆಹಚ್ಚಲಾಗಿದೆ. ಮೊದಲು ಪತ್ತೆಹಚ್ಚಲಾದ ಎರಡು ಝೀರೋ ಡೇ ದೋಷಗಳು ಕೇವಲ ಡೆಸ್ಕ್ ಟಾಪ್ ಗಳನ್ನು ಸೋಂಕಿತಗೊಳಿಸಿ, ಕ್ರೋಮ್ ಅನ್ನು ಪ್ರಭಾವಿತಗೊಳಿಸುತ್ತಿದ್ದವು. ಆದರೆ, ಮೂರನೇ ಬಾರಿಗೆ ಪತ್ತೆಯಾದ ಝೀರೋ ಡೇ ಇತರ ಎರಡರಗಿಂತ ಭಿನ್ನವಾಗಿದೆ. ಆದರೆ ಎಲ್ಲ ಝೀರೋ ಡೇ ಬಗ್ ಗಳ ಉಪಯೋಗ ಹ್ಯಾಕಿಂಗ್ ನ ಉದ್ದೇಶ ಹೊಂದಿವೆಯೇ ಅಥವಾ ಇಲ್ಲವೇ ಎಂಬುದನ್ನು ಗೂಗಲ್ ಇನ್ನೂ ಸ್ಪಷ್ಟಪಡಿಸಿಲ್ಲ. ಇದರ ಜೊತೆಗೆ ಇವು ಒಂದೇ ಹ್ಯಾಕಿಂಗ್ ಸಮೂಹದ ಜೊತೆಗೆ ಸಂಪರ್ಕ ಹೊಂದಿವೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಸಂಸ್ಥೆ ಸ್ಪಷ್ಟಪಡಿಸಿಲ್ಲ.


ಇದನ್ನು ಓದಿ- Google Chrome ಬಳಸಿ ನೀವು Secure Passwords ರಚಿಸಬಹುದು... ಇಲ್ಲಿದೆ ವಿಧಾನ


ಗೂಗಲ್ ನ ಪ್ರಾಜೆಕ್ಟ್ ಝೀರೋ ತಾಂತ್ರಿಕ ಪ್ರಮುಖ ಬೆನ್ ಹಾಕ್ಸ್ ಹೇಳುವ ಪ್ರಕಾರ, ನವೆಂಬರ್ 10ರವರೆಗೆ ಝೀರೋ ಡೇ ಪ್ಯಾಚ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.