ನವದೆಹಲಿ: ಬಳಕೆದಾರರ ವೈಯಕ್ತಿಕ ಡೇಟಾವನ್ನು ಮತ್ತಷ್ಟು ಸುರಕ್ಷಿತವಾಗಿಸಲು Google ತನ್ನ ಸೆಟ್ಟಿಂಗ್ ನಲ್ಲಿ ಬದಲಾವಣೆ ತಂದಿದೆ. ಸರ್ಚ್ ಎಂಜಿನ್ ಪ್ರಕಾರ, ಇನ್ಮುಂದೆ ಬ್ರೌಸರ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ ಮಾಹಿತಿಯನ್ನು ಹುಡುಕಲಾದರೂ ಕೂಡ , ಆ ಮಾಹಿತಿ 18 ತಿಂಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ. ಇದು ಪದೇ ಪದೇ ಆಗಲಿದ್ದು, ನೀವು ಹುಡುಕಿದ ಹಳೆ ಮಾಹಿತಿ ಸರ್ಚ್ ಆಟೋ ಸೇವ್ ನಿಂದ ತೆಗೆದುಹಾಕಲಾಗುವುದು.
ಈ ಕುರಿತು ಹೇಳಿಕೆ ನೀಡಿರುವ ಗೂಗಲ್, ಬಳಕೆದಾರರ ಪ್ರಸ್ತುತ ಸೆಟ್ಟಿಂಗ್ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದಿದೆ. ಆದರೆ, ಕಂಪನಿ ಬಳಕೆದಾರರಿಗೆ ಮೊದಲು ಈ ಬದಲಾವಣೆಯ ಕುರಿತು ಸಂದೇಶ ಕಳುಹಿಸಲಿದೆ. ಇದಕ್ಕೂ ಮೊದಲು ಗೂಗಲ್ ತನ್ನ ಬಳಕೆದಾರರಿಗೆ ಅವರ ಡೇಟಾ ಮುಕ್ತಾಯಗೊಂಡ ತಿಥಿಯನ್ನು ನಿಗದಿಪಡಿಸುವ ಆಯ್ಕೆ ನೀಡಿತ್ತು. ಹೊಸ ಬದಲಾವಣೆ ಇದರ ಮುಂದಿನ ಹಂತವಾಗಿದೆ ಎಂದು ಗೂಗಲ್ ಹೇಳಿದೆ.
ಕೋವಿಡ್ 19 ಸಾಂಕ್ರಾಮಿಕ ಕಾಲದಲ್ಲಿ, ಗೂಗಲ್ ಮತ್ತು ಇತರ ಐಟಿ ಕಂಪನಿಗಳು ತಮ್ಮ ಬ್ರೌಸರ್ ಅಥವಾ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ಪ್ರಯತ್ನಿಸಿವೆ. ಈ ಸಮಯದಲ್ಲಿ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮೀಟಿಂಗ್ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ಗಾಗಿ ಮೊಬೈಲ್ ಅಪ್ಲಿಕೇಶನ್ ಅಥವಾ ಬ್ರೌಸರ್ ಅನ್ನು ಬಳಸಲಾಗುತ್ತಿದೆ.
ಹೀಗಾಗಿ ಗೂಗಲ್ ಅಂಡ್ರಾಯಿಡ್ ಹಾಗೂ ಐಓಎಸ್ ಸ್ಮಾರ್ಟ್ ಫೋನ್ ಗಳ ಮೇಲೆ ತನ್ನ ವಿಡಿಯೋ ಚಾಟ್ ಸೇವೆ Meet To Gmail ಜಾರಿಗೆ ತರುವುದಾಗಿ ಹೇಳಿದ್ದು. ಈ ಸೇವೆ ಬಳಸಿ ಬಳಕೆದಾರರು ತಮ್ಮ Inbox ಮೂಲಕವೇ ವಿಡಿಯೋ ಮೀಟಿಂಗ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇಂದು ನೀವು Google ಬಳಕೆದಾರರ ಫೋನ್ನ Gmail ಅಪ್ಲಿಕೇಶನ್ನಲ್ಲಿ ಹೊಸ Meetಟ್ಯಾಬ್ ಅನ್ನು ನೋಡಬಹುದು, ಅಲ್ಲಿ ಅವರು Google ಕ್ಯಾಲೆಂಡರ್ನಲ್ಲಿನ ಮೀಟಿಂಗ್ ಗಳನ್ನೂ ನೋಡಬಹುದು ಮತ್ತು ಕೇವಲ ಒಂದು ಗುಂಡಿಯನ್ನು ಕ್ಲಿಕ್ಕಿಸುವ ಮೂಲಕ ಮೀಟಿಂಗ್ ಗೆ ಸೇರಬಹುದು..
ಮೀಟ್ ಟ್ಯಾಬ್ನಲ್ಲಿ ಹೊಸ ಮೀಟಿಂಗ್ ಟ್ಯಾಬ್ ಅನ್ನು ಒತ್ತುವ ಮೂಲಕ ಮೀಟಿಂಗ್ ತಕ್ಷಣ ಆರಂಭವಾಗುತ್ತದೆ. ಈ ಮೀಟಿಂಗ್ ಲಿಂಕ್ಗಳನ್ನು ಸಹ ಹಂಚಿಕೊಳ್ಳಲು ಅದರಲ್ಲಿ ಅವಕಾಶವಿದೆ ಮತ್ತು ಕ್ಯಾಲೆಂಡರ್ಗೆ ಭೇಟಿ ನೀಡುವ ಮೂಲಕ ಮೂಲಕ ಮೀಟಿಂಗ್ ಆರ್ಗನೈಸ್ ಕೂಡ ಮಾಡಬಹುದು.