Valentine's Day Doodle 2023: ಇಂದು ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ. ಪ್ರೀತಿಸುವ ಹೃದಯಗಳಿಗೆ ಇದು ಅತ್ಯಂತ ವಿಶೇಷ ದಿನವಾಗಿದೆ. ಈ ದಿನ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಗೂಗಲ್ ಅನೇಕ ವಿಶೇಷ ಸಂದರ್ಭಗಳಲ್ಲಿ ವಿಶೇಷ ಡೂಡಲ್‌ಗಳನ್ನು ಮಾಡುತ್ತದೆ. ಇಂದಿನ ಸಂದರ್ಭದಲ್ಲಿ, ನಾವು ವಿಶಿಷ್ಟವಾದ ಡೂಡಲ್ ಅನ್ನು  ಕಾಣಬಹುದಾಗಿದೆ. ಗೂಗಲ್ ಈ ಡೂಡಲ್‌ನಲ್ಲಿ ಹೃದಯದ ರೂಪದಲ್ಲಿ ನೀರಿನ ಹನಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶಿಷ್ಟವಾದ ಅನಿಮೇಟೆಡ್ 3D ಡೂಡಲ್ ನಲ್ಲಿ ಎರಡು ನೀರ ಹನಿಗಳು ಬೇರ್ಪಟ್ಟು ಮತ್ತೆ ಒಂದಾಗಿರುವುದನ್ನು ತೋರಿಸಲಾಗಿದೆ.


COMMERCIAL BREAK
SCROLL TO CONTINUE READING

ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನ, ಪ್ರೇಮಿಗಳ ದಿನದ ಸಂದರ್ಭದಲ್ಲಿ, ಗೂಗಲ್ ರಚಿಸಿದ ಅನಿಮೇಟೆಡ್ ಡೂಡಲ್ ತುಂಬಾ ಮುದ್ದಾಗಿದೆ. ಜೀವನದಲ್ಲಿ ಏರಿಳಿತಗಳಿರುತ್ತವೆ, ಕೆಲವೊಮ್ಮೆ ಪ್ರೀತಿ ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವನ್ನು ಡೂಡಲ್ ಮೂಲಕ ಮಾಡಲಾಗಿದೆ. ಪ್ರಪಂಚದಾದ್ಯಂತ ಜನರು ತಮ್ಮ ಪ್ರೇಮಿಗಳು, ಸ್ನೇಹಿತರು ಮತ್ತು  ಸಂಗಾತಿಗೆ ಉಡುಗೊರೆಗಳನ್ನು ನೀಡಿ ಶುಭಾಶಯ ಕೋರಿ  ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ : Valentines Day Special : ಜಿಯೋ ಬಳಕೆದಾರರಿಗೆ 87GB ಡೇಟಾ ಜೊತೆಗೆ McDonald's burger ಕೂಡಾ ಉಚಿತ


17 ನೇ ಶತಮಾನದಲ್ಲಿ ಜನಪ್ರಿಯವಾದ ಫೆಬ್ರವರಿ 14 :
"ಮಧ್ಯಯುಗದಲ್ಲಿ, ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಂತಹ ಯುರೋಪಿಯನ್ ದೇಶಗಳು ಫೆಬ್ರವರಿ 14 ರಂದು ಪಕ್ಷಿಗಳ ಮಿಲನದ ಅವಧಿಯ ಆರಂಭ ಎಂದು ನಂಬಿದ್ದರು. ನಂತರ ಈ ಈವೆಂಟ್ ಅನ್ನು ಪ್ರೀತಿಯೊಂದಿಗೆ ಕನೆಕ್ಟ್ ಮಾಡಿ ಪ್ರೇಮಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಈ ದಿನದ ಆಚರಣೆ 17ನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯವಾಯಿತು. ಇಂದು ನಿಮ್ಮ ಇಂದಿನ ಕಾರ್ಯಗಳೇನೇ ಇರಲಿ, ವಿಶೇಷ ವ್ಯಕ್ತಿಯೊಂದಿಗೆ ಈ ದಿನವನ್ನು ಆಚರಿಸಿ ಆನಂದಿಸಿ ಎಂಬ ಸಂದೇಶವನ್ನು  ಗೂಗಲ್ ಹೇಳಿದೆ. 


ಪ್ರೇಮಿಗಳ ವಾರ ಫೆಬ್ರವರಿ 7 ರಿಂದ ಪ್ರಾರಂಭವಾಗುತ್ತದೆ. ಪ್ರಪಂಚದಾದ್ಯಂತದ  ಜೋಡಿಗಳು ಪ್ರೇಮಿಗಳ ದಿನಕ್ಕಾಗಿ ಕಾಯುತ್ತಿರುತ್ತಾರೆ.  ಈ ದಿನಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಪ್ರತಿ ವರ್ಷ ಪ್ರೇಮಿಗಳ ವಾರವು ಫೆಬ್ರವರಿ 7 ರಿಂದ ಪ್ರಾರಂಭವಾಗಿ, ಫೆಬ್ರವರಿ 14 ರಂದು ಕೊನೆಗೊಳ್ಳುತ್ತದೆ.


ಇದನ್ನೂ ಓದಿ : WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.