Google Chrome Features:  ಗೂಗಲ್ ಕ್ರೋಮ್‌ನಲ್ಲಿ ಹಲವು ಬಾರಿ ನಾವು ಸರ್ಚ್ ಮಾಡುತ್ತಿರುವ ವಿಷಯವನ್ನು ನಿಖರವಾಗಿ ಹುಡುಕಲು ಸಾಧ್ಯವಾಗುವುದಿಲ್ಲ. ಆದರೆ, ಇನ್ನುಮುಂದೆ ಈ ರೀತಿಯ ಸಮಸ್ಯೆ ಇರುವುದಿಲ್ಲ. ಇದಕ್ಕಾಗಿ ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗಾಗಿ ಗೂಗಲ್ ಕ್ರೋಮ್‌ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಹೊರತಂದಿದೆ. 


COMMERCIAL BREAK
SCROLL TO CONTINUE READING

ಹೌದು, ಗೂಗಲ್  ತನ್ನ ಜನಪ್ರಿಯ ಬ್ರೌಸಿಂಗ್ ಅಪ್ಲಿಕೇಶನ್ ಗೂಗಲ್ ಕ್ರೋಮ್‌  ಅನ್ನು ಆಗಾಗ್ಗೆ ಅಪ್‌ಗ್ರೇಡ್ ಮಾಡುತ್ತಲೇ ಇರುತ್ತದೆ. ಈ ಸರಣಿಯಲ್ಲಿ, ಗೂಗಲ್ ತನ್ನ ಗೂಗಲ್ ಕ್ರೋಮ್‌ನಲ್ಲಿ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದು ಬಳಕೆದಾರರ ಬ್ರೌಸಿಂಗ್ ಅನುಭವವನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಹಾಗಿದ್ದರೆ, ಯಾವುದಾ ಹೊಸ ವೈಶಿಷ್ಟ್ಯಗಳು, ಅದರ ಪ್ರಯೋಜನಗಳೇನು ಎಂದು ತಿಳಿಯೋಣ... 


ಹುಡುಕಾಟ ಸಲಹೆ: 
ಗೂಗಲ್ ಕ್ರೋಮ್‌ನಲ್ಲಿ ಹುಡುಕಾಟ ಸಲಹೆ ಎಂಬ ವೈಶಿಷ್ಟ್ಯವನ್ನು ಸೇರಿಸಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಹಿಂದಿನ ಹುಡುಕಾಟಗಳ ಪ್ರಕಾರ ಸಲಹೆಗಳನ್ನು ಪಡೆಯುತ್ತಾರೆ. ಇದರ ಹೊರತಾಗಿ, ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಜನಪ್ರಿಯ ವಿಷಯಗಳ ಬಗ್ಗೆ ಗೂಗಲ್ ಸ್ವತಃ ಸಲಹೆಯನ್ನು ನೀಡಲಿದೆ. ಇದು ಗೂಗಲ್ ಸರ್ಚ್ ಅನುಭವವನ್ನು ಇನ್ನಷ್ಟು ಸುಧಾರಿಸಬಹುದು ಎಂದು ಕಂಪನಿ ಅಭಿಪ್ರಾಯ ವ್ಯಕ್ತಪಡಿಸಿದೆ. 


ಇದನ್ನೂ ಓದಿ- ಇಂಟರ್ನೆಟ್ ಇಲ್ಲದೆಯೂ Netflix ಬಳಸಬಹುದು! ಸುಲಭವಾಗಿ ಚಿತ್ರ-ವೆಬ್ ಸರಣಿಗಳನ್ನು ಡೌನ್ಲೋಡ್ ಮಾಡಬಹುದು!


ಗೂಗಲ್ ಕ್ರೋಮ್‌ನಲ್ಲಿ ಹೆಚ್ಚಿನ ಫೋಟೋಗಳು: 
ಗೂಗಲ್ ಪರಿಚಯಿಸಿರುವ ಮತ್ತೊಂದು ವೈಶಿಷ್ಟ್ಯವೆಂದರೆ ಗೂಗಲ್ ಕ್ರೋಮ್‌ನಲ್ಲಿ ಸರ್ಚ್ ಮಾಡಲಾದ ವಿಷಯಗಳಿಗೆ ಸಂಬಂಧಿಸಿದಂತೆ ಈಗ ಮೊದಲಿಗಿಂತ ಹೆಚ್ಚಿನ ಚಿತ್ರಗಳು ಲಭ್ಯವಾಗಲಿವೆ.


ಕಡಿಮೆ ಸಂಪರ್ಕದಲ್ಲಿಯೂ ಸಾಧ್ಯವಾಗಲಿದೆ ಬ್ರೌಸಿಂಗ್: 
ಗೂಗಲ್ ಕ್ರೋಮ್ ಅನ್ನು ಬಳಸಲು ನಿಮಗೆ ಹೆಚ್ಚಿನ ವೇಗದ ಇಂಟರ್ನೆಟ್ ಬೇಕೇ ಬೇಕು ಎನ್ನುವ ಅನಿವಾರ್ಯತೆಯನ್ನು ತೊಡೆದುಹಾಕಲು ಗೂಗಲ್ ಈಗ ತನ್ನ ಕ್ರೋಮ್ ವೈಶಿಷ್ಟ್ಯವನ್ನು ಅಪ್‌ಗ್ರೇಡ್‌ ಮಾಡಿದೆ. ಈಗ ಬಳಕೆದಾರರು ಕಡಿಮೆ ಇಂಟರ್ನೆಟ್ ಸಂಪರ್ಕದಲ್ಲಿಯೂ ತಮಗೆ ಅಗತ್ಯವಿರುವುದನ್ನು ಸುಲಭವಾಗಿ ಸರ್ಚ್ ಮಾಡಬಹುದು. 


ಇದನ್ನೂ ಓದಿ- TRAI ನ ಮಾಸ್ಟರ್ ಪ್ಲಾನ್: ಅಪರಿಚಿತ ಕರೆಗಳಲ್ಲಿಯೂ ಕರೆ ಮಾಡುವವರ ಹೆಸರು ಗೋಚರಿಸುತ್ತೆ!


ಗೂಗಲ್ ಕ್ರೋಮ್‌ನ ಈ ವೈಶಿಷ್ಟ್ಯಗಳು ಯಾವಾಗ ಲಭ್ಯವಾಗಲಿವೆ? 
ಗೂಗಲ್ ಪ್ರಕಾರ, ಗೂಗಲ್ ಕ್ರೋಮ್‌ನ ಎಲ್ಲಾ ವೈಶಿಷ್ಟ್ಯಗಳನ್ನು ಮಾರ್ಚ್ 01ರಿಂದಲೇ ಎಲ್ಲಾ  ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನವೀಕರಣಗಳು ಲಭ್ಯವಿರುತ್ತವೆ ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.