Online Shoppingನಲ್ಲಿ ಸಹಾಯ ಮಾಡಲಿದೆ Google Chrome! ಹೇಗೆ ತಿಳಿಯಲು ಸುದ್ದಿ ಓದಿ
Google Chrome New Features - ವಿಶ್ವದ ಪ್ರಚಲಿತ ವೆಬ್ ಬ್ರೌಸರ್ ಗೂಗಲ್ ಕ್ರೋಮ್ ಇತ್ತೀಚಿಗೆ ಆನ್‌ಲೈನ್ ಶಾಪಿಂಗ್ ನಲ್ಲಿ ಸಾಕಷ್ಟು ಸಹಾಯ ಮಾಡುವ ಹೊಸ ವೈಶಿಷ್ಟ್ಯಗಳನ್ನು (Google Chrome Features) ಹೊರತಂದಿದೆ. ಇದರಿಂದ ಬಳಕೆದಾರರಿಗೆ ಆನ್‌ಲೈನ್ ಶಾಪಿಂಗ್ ತಾಣಗಳಾದಂತಹ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಗೂ ಮೊದಲೇ ತಮ್ಮ ನೆಚ್ಚಿನ ಸರಕುಗಳ ಬೆಲೆ ಇಳಿಕೆಯ ಮಾಹಿತಿ ದೊರೆಯಲಿದೆ.
ನವದೆಹಲಿ: Google Chrome Updates - Google Chrome, Google ನ ಜನಪ್ರಿಯ ವೆಬ್ ಬ್ರೌಸರ್ ಆಗಿದ್ದು ಇದುವೇ ಯಾವುದೇ ವೆಬ್‌ಸೈಟ್‌ನಲ್ಲಿ ಏನೇ ಹುಡುಕಲು ತುಂಬಾ ಸುಲಭವಾಗಿದೆ. ಇದೀಗ ಆನ್‌ಲೈನ್ ಶಾಪಿಂಗ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡುವ ವೈಶಿಷ್ಟ್ಯದೊಂದಿಗೆ ಗೂಗಲ್ ಕ್ರೋಮ್ ಬಂದಿರುವುದು ಗಮನಕ್ಕೆ ಬಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ, Google Chrome ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ನೀವು ಖರೀದಿಸಲು ಬಯಸುವ ಎಲ್ಲಾ ಉತ್ಪನ್ನಗಳ ಅತ್ಯಂತ ಕಡಿಮೆ ಬೆಲೆಯ ಮಾಹಿತಿಯನ್ನು ಮೊದಲೇ ತಿಳಿಸಲಿದೆ. ಈ ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಗೂಗಲ್ ಕ್ರೋಮ್‌ನ ಹೊಸ ವೈಶಿಷ್ಟ್ಯ (Google Chrome Online Shopping)
ಗೂಗಲ್ ಕ್ರೋಮ್ ಹೊಸ ವೈಶಿಷ್ಟ್ಯವನ್ನುಆರಂಭಿಸಿದ್ದು, ಇದು ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ಶಾಪಿಂಗ್ ಮಾಡಲು ಅನುವು ಮಾಡಿಕೊಡಲಿದೆ. ಒಂದು ವೇಳೆ ನಿಮಗೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬೇಕು ಎಂದೆನೆಸಿದರೆ ಮತ್ತು ನೀವು ಖರೀದಿಸಲು ಬಯಸುವ ಉತ್ಪನ್ನಗಳು ದುಬಾರಿಯಾಗಿರುವುದು ಕಂಡುಬಂದಲ್ಲಿ ಗೂಗಲ್ ನ ಈ ವೈಶಿಷ್ಟ್ಯ ನಿಮಗೆ ಸಹಾಯ ಮಾಡಲಿದೆ. ಏಕೆಂದರೆ, ಆ ಉತ್ಪನ್ನಗಳ ಬೆಲೆ ಕಡಿಮೆಯಾದಾಗ, ಅನೇಕ ಬಾರಿ ಅವಕಾಶವು ಕೈ ತಪ್ಪುತ್ತದೆ. ಆದರೆ, ಇದೀಗ ಗೂಗಲ್ ಕ್ರೋಮ್‌ನ ಹೊಸ ವೈಶಿಷ್ಟ್ಯದೊಂದಿಗೆ, ಶಾಪಿಂಗ್ ವೆಬ್‌ಸೈಟ್ ಗಳಿಗೂ ಮುನ್ನವೇ ನಿಮ್ಮ ನೆಚ್ಚಿನ ಉತ್ಪನ್ನಗಳ ಬೆಲೆ ಕಡಿಮೆಯಾಗಿರುವ ಕುರಿತು ನಿಮ್ಮ ಬ್ರೌಸರ್ ನಿಮಗೆ ಮಾಹಿತಿ ನೀಡಲಿದೆ.
Google Chrome ನ 'Track Prices' ವೈಶಿಷ್ಟ್ಯ
Google ನ ಹೊಸ 'ಟ್ರ್ಯಾಕ್ ಪ್ರೈಸಸ್' ವೈಶಿಷ್ಟ್ಯವು Google Chrome ನ ಟ್ಯಾಬ್‌ಗಳ ವಿಭಾಗದಲ್ಲಿ ನೀವು ಹುಡುಕಿದ ಪ್ರತಿಯೊಂದು ಉತ್ಪನ್ನಕ್ಕೆ ನವೀಕರಿಸಿದ ಬೆಲೆಗಳನ್ನು ತೋರಿಸುತ್ತದೆ. ಈ ಹೊಸ ವೈಶಿಷ್ಟ್ಯದಿಂದ, ನೀವು ಫ್ಲಿಪ್‌ಕಾರ್ಟ್ (Flipkart) ಮತ್ತು ಅಮೆಜಾನ್‌ನಂತಹ ವೆಬ್‌ಸೈಟ್‌ಗಳನ್ನು ತೆರೆಯುವ ಅಗತ್ಯವಿಲ್ಲ, ಟ್ಯಾಬ್‌ಗಳ ಸ್ಥಳದಲ್ಲಿ ಈ ಉತ್ಪನ್ನಗಳ ಕಡಿಮೆ ಬೆಲೆಯ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ-Jio ಗ್ರಾಹಕರ ಗಮನಕ್ಕೆ : 1 ರೂ. ರಿಚಾರ್ಜ್ ಪ್ಲಾನ್ ನಲ್ಲಿ ಭಾರಿ ಬದಲಾವಣೆ!
ಯಾರಿಗೆ ಈ ವೈಶಿಷ್ಟ್ಯ ಮೊದಲು ದೊರೆತಿದೆ (Latest Google Chrome News)
ಪ್ರಸ್ತುತ ಗೂಗಲ್ ಕ್ರೋಮ್ ಅಮೆರಿಕದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಯುಎಸ್‌ನಲ್ಲಿಯೂ ಸಹ, ಆಂಡ್ರಾಯ್ಡ್ ಓಎಸ್‌ನಲ್ಲಿ ಚಾಲನೆಯಲ್ಲಿರುವ ಫೋನ್‌ಗಳನ್ನು ಬಳಸುವ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯವು ಲಭ್ಯವಿದೆ. ಆದರೆ ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೂ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಗೂಗಲ್ ಹೇಳಿದೆ.
ಇದನ್ನೂ ಓದಿ-ಕೇವಲ 713 ರೂ.ಯಲ್ಲಿ ಮನೆಗೆ ತನ್ನಿ 25 ಲೀಟರ್ ನ Havells Geyser, ರಿಮೋಟ್ ಮೂಲಕ ನಿಮಿಷಗಳಲ್ಲಿ ಬಿಸಿಯಾಗಲಿದೆ ನೀರು
ಯುಎಸ್ ಹೊರತುಪಡಿಸಿ ಇತರ ದೇಶಗಳಲ್ಲಿ ಗೂಗಲ್ ಈ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಈ ವೈಶಿಷ್ಟ್ಯದ ಜೊತೆಗೆ, ಈಗ ಗೂಗಲ್ ಕ್ರೋಮ್‌ನಲ್ಲಿರುವ ಬಳಕೆದಾರರು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಉಳಿಸಲು ಸಾಧ್ಯವಾಗುತ್ತದೆ ಇದರಿಂದ ಅವರು ಮತ್ತೆ ಮತ್ತೆ ಲಾಗ್ ಇನ್ ಆಗಬೇಕಾಗಿಲ್ಲ.
ಇದನ್ನೂ ಓದಿ-ನಾಲ್ಕು ಹೊಸ ಪ್ಲಾನ್ ಗಳನ್ನು ಪರಿಚಯಿಸಿದ Vodafone-Idea, 77 ದಿನಗಳವರೆಗೆ ನಿತ್ಯ ಸಿಗಲಿದೆ 1.5GB ಡೇಟಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.