ನಾಲ್ಕು ಹೊಸ ಪ್ಲಾನ್ ಗಳನ್ನು ಪರಿಚಯಿಸಿದ Vodafone-Idea, 77 ದಿನಗಳವರೆಗೆ ನಿತ್ಯ ಸಿಗಲಿದೆ 1.5GB ಡೇಟಾ

 ಹೊಸ Vi ಪ್ಲಾನ್‌ಗಳ ಬೆಲೆ 155, 239, 666 ಮತ್ತು 699 ರೂ. ಕೆಲವು ದಿನಗಳ ಹಿಂದೆ Vi ತನ್ನ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿ

Written by - Ranjitha R K | Last Updated : Dec 16, 2021, 03:09 PM IST
  • ವೊಡಾಫೋನ್-ಐಡಿಯಾ ನಾಲ್ಕು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ.
  • ಪ್ಲಾನ್‌ಗಳ ಬೆಲೆ 155 ರೂ, 239 ರೂ, 666 ರೂ ಮತ್ತು 699.
  • Vi ನ 155 ರೂ ಯೋಜನೆಯಲ್ಲಿ 24 ದಿನಗಳ ಮಾನ್ಯತೆ ಲಭ್ಯವಿದೆ.
ನಾಲ್ಕು ಹೊಸ ಪ್ಲಾನ್ ಗಳನ್ನು ಪರಿಚಯಿಸಿದ Vodafone-Idea, 77  ದಿನಗಳವರೆಗೆ ನಿತ್ಯ ಸಿಗಲಿದೆ 1.5GB ಡೇಟಾ title=
ವೊಡಾಫೋನ್-ಐಡಿಯಾ ನಾಲ್ಕು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. (file photo)

ನವದೆಹಲಿ : ವೊಡಾಫೋನ್-ಐಡಿಯಾ (Vodafone-Idea) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನಾಲ್ಕು ಸ್ಮಾರ್ಟ್ ಯೋಜನೆಗಳನ್ನು ಪರಿಚಯಿಸಿದೆ. ಹೊಸ Vi ಪ್ಲಾನ್‌ಗಳ ಬೆಲೆ 155, 239, 666 ಮತ್ತು 699 ರೂ. ಕೆಲವು ದಿನಗಳ ಹಿಂದೆ Vi ತನ್ನ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಬಳಕೆದಾರರಿಗೆ ಕಡಿಮೆ ರೀಚಾರ್ಜ್ ಆಯ್ಕೆಗಳು ಉಳಿದಿವೆ. ಆದರೆ, ಇದೀಗ ಈ ಯೋಜನೆಯನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರಿಗೆ, ಹಲವು ಆಯ್ಕೆಗಳನ್ನು ನೀಡಲಾಗಿದೆ.  

Vi  155 ರೂ ಯೋಜನೆ :
Viಯ  155 ರೂ ಯೋಜನೆಯು 24 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರು 1GB ಡೇಟಾ, ಮತ್ತು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು 300 SMS ಅನ್ನು ಪಡೆಯುತ್ತಾರೆ.

ಇದನ್ನೂ ಓದಿ : Jio Cheapest Plan: Jio ಬಿಡುಗಡೆ ಮಾಡಿದೆ ಕೇವಲ ಒಂದು ರೂಪಾಯಿ ರಿಚಾರ್ಜ್ ಪ್ಲಾನ್, 30 ದಿನಗಳವರೆಗೆ ಸಿಗಲಿದೆ ಈ ಎಲ್ಲಾ ಪ್ರಯೋಜನ

Vi 239 ರೂ. ಯೋಜನೆ :
24 ದಿನಗಳ ವ್ಯಾಲಿಡಿಟಿಯು Viನ 239 ರೂ. ಯೋಜನೆಯಲ್ಲಿ ಲಭ್ಯವಿದೆ. ಯೋಜನೆಯಲ್ಲಿ, ಬಳಕೆದಾರರಿಗೆ ದಿನಕ್ಕೆ 1GB ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಅನಿಯಮಿತ ಕರೆ (unlimited calls) ಮತ್ತು ದಿನಕ್ಕೆ 100 SMS ಲಭ್ಯವಿದೆ. 

Vi 666 ರೂ. ಯೋಜನೆ :
Vi ನ  666 ರೂ. ಯೋಜನೆಯು 77 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ದಿನಕ್ಕೆ 1.5GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಬಿಂಜ್ ಆಲ್ ನೈಟ್ , ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಲಭ್ಯವಿರುತ್ತದೆ. ಇದರೊಂದಿಗೆ, Vi Movies & TV ಗೆ ಆಕ್ಸೆಸ್ ಸಿಗುತ್ತದೆ. 

ಇದನ್ನೂ ಓದಿ : Reliance Jio: ಡೌನ್‌ಲೋಡ್ ವೇಗದಲ್ಲಿ ಅಗ್ರಸ್ಥಾನದಲ್ಲಿ ಈ ನೆಟ್‌ವರ್ಕ್‌

Vi 699 ರೂ. ಯೋಜನೆ :
Vi ನ  699  ರೂ. ಯೋಜನೆಯು 56 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೇ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವಿದೆ. ಯೋಜನೆಯಲ್ಲಿ, ಬಳಕೆದಾರರು ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಪಡೆಯುತ್ತಾರೆ. ಇದರೊಂದಿಗೆ, Vi Movies & TV ಗೆ ಆಕ್ಸೆಸ್ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News