WhatsApp,Facebook,Telegramಗಳು ನೀಡುವ ಈ ಸೇವೆ Google ಕೂಡ ಆರಂಭಿಸಿದೆ
ಗೂಗಲ್‌ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು.
ನವದೆಹಲಿ: Social Messaging Appsಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಕಂಪನಿ ಗೂಗಲ್ (Google), ಚಾಟ್ ಸೇವೆಯನ್ನು ಆರಂಭಿಸಿದೆ. ಕಂಪನಿ ತನ್ನ ಮೆಸ್ಸೇಜಿಂಗ್ ಸೇವೆಯಲ್ಲಿ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಕಂಪನಿಯ ಈ ಸೇವೆ ಓಪನ್ ರಿಚ್ ಕಮ್ಯೂನಿಕೇಶನ್ ಸರ್ವಿಸೆಸ್ ಮಾನದಂಡ ಆಧಾರಿತವಾಗಿದೆ.
ಇದನ್ನು ಓದಿ- ಎಚ್ಚರ! ಚೀನೀ ಸರ್ವರ್ ಸಂಪರ್ಕ ಹೊಂದಿರುವ 5 ಹಣಕಾಸು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಗೂಗಲ್
ಇವರಿಗೆ ತೀವ್ರ ಪೈಪೋಟಿ
ಗೂಗಲ್‌ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು. ಇದೀಗ ಪ್ರಪಂಚದಲ್ಲಿ ಮೆಸೇಜ್ ಬಳಸುವ ಯಾವುದೇ ವ್ಯಕ್ತಿ ತಮ್ಮ ಕರಿಯರ್ ಅಥವಾ ನೇರವಾಗಿ ಗೂಗಲ್ ಮೂಲಕ ಆಧುನಿಕ ಚಾಟ್ ವೈಶಿಷ್ಟ್ಯವನ್ನು ಬಳಸಬಹುದಾಗಿದೆ.
ಇದನ್ನು ಓದಿ- Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!
ಒಂದೇ ರೀತಿಯ ಸೇವೆ ನೀಡುವ ಆಪ್ ಗಳ ತುಲನಾತ್ಮಕ ಅಧ್ಯಯನ ನಡೆಸಬಹುದು
ಗೂಗಲ್ ತನ್ನ ಪ್ಲೇ ಸ್ಟೋರ್ ನಲ್ಲಿ ನೂತನ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಭವಿಷ್ಯದಲ್ಲಿ ಒಂದೇ ರೀತಿಯ ಸೇವೆ ಒದಗಿಸುವ ಆಪ್ ಗಳ ತುಲನಾತ್ಮಕ ಅಧ್ಯಯನ ನಡೆಸಬಹುದು ಹಾಗೂ ಅದನ್ನು ಆಧಾರವಾಗಿಟ್ಟುಕೊಂದು ಆಪ್ ಗಳನ್ನು ಡೌನ್ಲೋಡ್ ಮಾಡಬೇಕೆ ಅಥವಾ ಬೇಡವೇ ಎಂಬ ನಿರ್ಣಯಕೈಗೊಳ್ಳಬಹುದು.
ಇದನ್ನು ಓದಿ- ಗೂಗಲ್ ಫೋಟೋ ಬಳಕೆ ಇನ್ನು ಮುಂದೆ ಉಚಿತವಲ್ಲ
ಆಪ್ ನಡುವಿನ ವ್ಯತ್ಯಾಸಗಳ ಕುರಿತು ತಿಳಿಯಬಹುದು
ಒಂದು ವೇಳೆ ನೀವು VLC ಮೀಡಿಯಾ ಪ್ಲೇಯರ್ ಆಪ್ ವಿಕ್ಷೀಸುತ್ತಿದ್ದರೆ, ಆ ವೇಳೆ ನೀವು Compare Apps ಸೆಕ್ಷನ್ ನಲ್ಲಿ ಎಂಎಕ್ಸ್ ಪ್ಲೇಯರ್, ಜಿಓಎಂ ಪ್ಲೇಯರ್ ಹಾಗೂ ಇಂತಹ ಇತರೆ ಆಪ್ ಗಳು ನೋಡಲು ಸಿಗಲಿವೆ. ಸರಣಿಯಲ್ಲಿ ಆಪ್ ಗಳ ಹೋಲಿಕೆ ಮಾಡುವುದರ ಜೊತೆಗೆ ನೀವು ರೇಟಿಂಗ್ಸ್, ಇದುವರೆಗೆ ಡೌನ್ಲೋಡ್ ಆದ ಸಂಖ್ಯೆ, ಬಳಕೆಯಲ್ಲಿ ಸುಲಭಗಳಂಥ ಮುಂತಾದ ಫೀಚರ್ಸ್ ಸಿಗಲಿವೆ.