ವಿಮಾನ ಪ್ರಯಾಣ ಮಾಡುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇದಕ್ಕಾಗಿ ಜಬ್ಬರ್ದಸ್ತ್ ವೈಶಿಷ್ಟ್ಯ ಬಿಡುಗಡೆ ಮಾಡಿದ ಗೂಗಲ್!
Google Latest Flights Feature: ಈ ವೈಶಿಷ್ಟ್ಯದೊಂದಿಗೆ, ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಗಮ್ಯಸ್ಥಾನಕ್ಕೆ ಟಿಕೆಟ್ ಬೆಲೆ ಯಾವಾಗ ಅಗ್ಗವಾಗಿದೆ ಮತ್ತು ಯಾವಾಗ ಟಿಕೆಟ್ ಬುಕ್ ಮಾಡಬೇಕು ಎಂಬುದು ನಿಮಗೆ ಮುಂಚಿತವಾಗಿಯೇ ತಿಳಿಯಲಿದೆ.
ಬೆಂಗಳೂರು: ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ ಒಂದು ವೇಳೆ ನೀವೂ ಕೂಡ ಹಣವನ್ನು ಉಳಿತಾಯ ಮಾಡಲು ಯೋಜಿಸುತ್ತಿದ್ದರೆ, ಅದಕ್ಕಾಗಿ ನೀವು ಕೆಲ ಟ್ರಿಕ್ ಗಳನ್ನು ಮಾಡಬೇಕು. ಇದರಿಂದ ಆನ್ನು ಒಳ್ಳೆಯ ಪ್ಲಾನ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ನೀವು ಉತ್ತಮ ಡೀಲ್ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿಯೇ ನೀವು ಟಿಕೆಟ್ ಬುಕ್ ಮಾಡಿದಾಗ ನಿಮಗೆ ನಿಮ್ಮ ಅಪೇಕ್ಷೆಗೆ ಅನುಗುಣವಾಗಿಯೇ ಟಿಕೆಟ್ ಅಗ್ಗದ ದರದಲ್ಲಿ ಸಿಗುತ್ತದೆ. ಒಂದು ವೇಳೆ ನೀವು ರಜಾದಿನಗಳ ಯೋಜನೆಯನ್ನು ತರಾತುರಿಯಲ್ಲಿ ರೂಪಿಸಿದರೆ ಮತ್ತು ದಿನಾಂಕ ಕೂಡ ನಿಗದಿಪಡಿಸಿದರೆ, ಗೂಗಲ್ ನಿಮಗಾಗಿ ಕೆಲ ಉತ್ತಮ ಯೋಜನೆಗಳನ್ನು ತಂದಿದೆ. ಅವುಗಳ ಮಾಧ್ಯಮದ ಮೂಲಕ ನೀವು ಚಿಟಿಕೆ ಹೊಡೆಯೋದ್ರಲ್ಲಿ ಅಗ್ಗದ ಟಿಕೆಟ್ ಪಡೆದುಕೊಳ್ಳಬಹುದು.
ಹಣವನ್ನು ಉಳಿಸುವುದು ಇದೀಗ ಮತ್ತಷ್ಟು ಸುಲಭವಾಗಿದೆ
ವಾಸ್ತವದಲ್ಲಿ ಗೂಗಲ್ ಅಗ್ಗದ ವಿಮಾನ ಟಿಕೆಟ್‌ಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯದ ಮೂಲಕ, ನೀವು ಕಡಿಮೆ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದರೊಂದಿಗೆ, ವಿಮಾನ ದರದಲ್ಲಿ ಹಣವನ್ನು ಉಳಿಸುವುದು ತುಂಬಾ ಸುಲಭವಾಗಲಿದೆ. ಹೊಸ ವೈಶಿಷ್ಟ್ಯದ ಬಗ್ಗೆ ನೀವು ತಿಳಿದಿರಬೇಕು. ವಾಸ್ತವವಾಗಿ, Google ನ ಈ ವೈಶಿಷ್ಟ್ಯವು ನಿಮಗೆ ವಿಮಾನವನ್ನು ಬುಕ್ ಮಾಡಲು ಉತ್ತಮ ಸಮಯ ಯಾವುದು ಎಂಬ ಮಾಹಿತಿಯನ್ನು ನೀಡುತ್ತದೆ. ನೀವು ಇದನ್ನು ಹೇಗೆ ಬಳಸಬಹುದು ಎಂದು ಕಂಪನಿಯು ಪೋಸ್ಟ್ ಮೂಲಕ ತಿಳಿಯಪಡಿಸಿದೆ.
ಬಜೆಟ್ ಸ್ನೇಹಿ ವಿಮಾನ ಬುಕಿಂಗ್
ನೀವು ಬಜೆಟ್ ಫ್ರೆಂಡ್ಲಿ ವಿಮಾನ ಟಿಕೆಟ್ ಕಾಯ್ದಿರಿಸಲು ಹೋದಾಗ ಫ್ಲೈಟ್ ಬುಕಿಂಗ್‌ಗೆ ಉತ್ತಮ ಸಮಯ ಯಾವುದು ಎಂಬುದರ ಕುರಿತು ಈ ವೈಶಿಷ್ಟ್ಯವು ನಿಮಗೆ ಮಾಹಿತಿಯನ್ನು ನೀಡುತ್ತಿದೆ. ಈ ವೈಶಿಷ್ಟ್ಯಕ್ಕೆ ಇದೀಗ ದತ್ತಾಂಶ ಕೂಡ ಸೇರ್ಪಡೆಯಾಗುತ್ತಿದೆ ಎಂಬುದು ಇದರಲ್ಲಿ ಕುತೂಹಲಕಾರಿ ಸಂಗತಿಯಾಗಿದೆ. ಇದರಿಂದ ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಗಮ್ಯಸ್ಥಾನಕ್ಕೆ ಟಿಕೆಟ್ ದರವು ಅಗ್ಗವಾದಾಗ ನಿಮಗೆ ಅದರ ಮಾಹಿತಿ ಲಭಿಸಲಿದೆ. ಅಷ್ಟೇ ಅಲ್ಲ ವಿಮಾನ ಟಿಕೆಟ್‌ಗಳನ್ನು ಯಾವಾಗ ಬುಕ್ ಮಾಡಬೇಕು ಎಂಬ ಬಗ್ಗೆಯೂ ಇದು ಮಾಹಿತಿ ನೀಡಲಿದೆ.
ನಿಮಗೆ ನೋಟಿಫಿಕೇಶನ್ ಸಿಗಲಿದೆ
ಒಂದು ವೇಳೆ ಈ ಕುರಿತು ನೀವು ನೋಟಿಫಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಪಡೆಯಲು ಬಯಸಿದರೆ. ನೀವು Google Flights ನಲ್ಲಿ ಬೆಲೆ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಆನ್ ಮಾಡಬೇಕು. ನಂತರ ಗೂಗಲ್ ಫ್ಲೈಟ್‌ನ ಈ ವೈಶಿಷ್ಟ್ಯವು ವಿಮಾನ ಟಿಕೆಟ್‌ನ ಬೆಲೆ ಕಡಿಮೆಯಾದ ತಕ್ಷಣ ನಿಮಗೆ ಅಧಿಸೂಚನೆಯನ್ನು ಕಳುಹಿಸುತ್ತದೆ ಮತ್ತು ನೀವು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಅಂದಹಾಗೆ, ಫ್ಲೈಟ್‌ನಲ್ಲಿ ಪ್ರಯಾಣಿಸುವ ಹೆಚ್ಚಿನ ಜನರು ಅನೇಕ ತಿಂಗಳುಗಳ ಮುಂಚಿತವಾಗಿ ವಿಮಾನವನ್ನು ಕಾಯ್ದಿರಿಸುವುದು ಸಾಮಾನ್ಯವಾಗಿ ಸಂಭವಿಸುತ್ತದೆ.
ಇದನ್ನೂ ಓದಿ-ಯಾವುದೇ ಚಂದಾದಾರಿಕೆ ಖರೀದಿಸದೆ ಯುಟ್ಯೂಬ್ ಮೇಲೆ ಉಚಿತ ಚಲನ ಚಿತ್ರ ವಿಕ್ಷೀಸಬಹುದು! ಹೇಗೆ ಇಲ್ಲಿ ತಿಳಿದುಕೊಳ್ಳಿ
ಇದನ್ನು ಮಾಡುವುದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದೆಂದರೆ, ಮೊದಲೇ ಬುಕ್ ಮಾಡುವುದರಿಂದ ಕಡಿಮೆ ಹಣ ಖರ್ಚಾಗುತ್ತದೆ. ಆದರೆ ಫ್ಲೈಟ್ ಬುಕ್ಕಿಂಗ್ ವಿಳಂಬವಾದರೆ ಅದರ ದರ ಸ್ವಲ್ಪ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಹೊಸ ವೈಶಿಷ್ಟ್ಯವು ನಿಮಗೆ ಹೆಚ್ಚು ಉಪಯುಕ್ತವಾಗಬಹುದು ಮತ್ತು ಅಗ್ಗದ ವಿಮಾನ ಟಿಕೆಟ್‌ಗಳು ಲಭ್ಯವಿರುವಾಗ ಸರಿಯಾದ ಸಮಯದಲ್ಲಿ ನಿಮಗೆ ಅದು ಮಾಹಿತಿಯನ್ನು ನೀಡಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.