Google Location History - ಈ ಸಂಗತಿಗಳು Googleಗೆ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಒದಗಿಸುತ್ತವೆ. ಈ ರೀತಿ ಬ್ಲಾಕ್ ಮಾಡಿ
Location History ಗೂಗಲ್ ಅಕೌಂಟ್ ನ ಒಂದು ಸೆಟ್ಟಿಂಗ್ ಆಗಿದೆ. ಇದು Googleಗೆ ನೀವು ಮೊಬೈಲ್ ನೊಂದಿಗೆ ಭೇಟಿ ನೀಡಿದ ಪ್ರತಿಯೊಂದು ಸ್ಥಳದ ಮಾಹಿತಿ ನೀಡುತ್ತದೆ.
ನವದೆಹಲಿ: Locatin History - ಇಂದಿನ ತಂತ್ರಜ್ಞಾನದ ಯುಗದಲ್ಲಿ ಇಂಟರ್ನೆಟ್ (Internet) ಒಂದೆಡೆ ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದರೆ, ಇನ್ನೊಂದೆಡೆ ಜನರ ಕೆಲ ತೊಂದರೆಗಳಿಗೂ ಕೂಡ ಕಾರಣವಾಗುತ್ತಿದೆ. ಹಲವು ಬಾರಿ ನೀವು ಯಾವುದಾದರೊಂದು ಸ್ಥಳಕ್ಕೆ ಭೇಟಿ ನೀಡಿದಾಗ, ಗೂಗಲ್ ನಿಮಗೆ ಆ ಸ್ಥಳಕ್ಕೆ ಸಂಬಂಧಿಸಿದ ಆವಶ್ಯಕ ಮಾಹಿತಿಯನ್ನು (Google Location History) ನೀಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ನಿಮಗೆ ಆಯ್ಕೆಗಳನ್ನು ಸಹ ಒದಗಿಸುತ್ತದೆ. ಗೂಗಲ್ ಲೋಕೇಶನ್ ಆಧಾರದ ಮೇಲೆ ನಿಮ್ಮನ್ನು ಟ್ರ್ಯಾಕ್ ಮಾಡುವ ಕಾರಣ ಇದು ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಗೂಗಲ್ ನ ಈ ಸೇವೆ ಅನಾವಶ್ಯಕ ಎನಿಸಿದರೆ ನೀವು ಅದನ್ನು ಸ್ಥಗಿತಗೊಳಿಸಬಹುದು ಮತ್ತು ಅದನ್ನು ಸ್ಥಗಿತಗೊಳಿಸುವ ಆಯ್ಕೆ ನಿಮ್ಮ ಬಳಿ ಇದೆ. ಈ ಆಯ್ಕೆಯನ್ನು ಬಳಸಿದರೆ ಗೂಗಲ್ ಯಾಕೆ ಬೇರೆ ಯಾರೂ ಕೂಡ ನಿಮ್ಮನ್ನು ಟ್ರ್ಯಾಕ್ ಮಾಡುವುದಿಲ್ಲ.
Google ಖಾತೆ
Location History ಗೂಗಲ್ ಖಾತೆಯ ಒಂದು ಸೆಟ್ಟಿಂಗ್ ಆಗಿದೆ. ಇದು Googleಗೆ ನೀವು ಮೊಬೈಲ್ ನೊಂದಿಗೆ ಭೇಟಿ ನೀಡಿದ ಪ್ರತಿಯೊಂದು ಸ್ಥಳದ ಮಾಹಿತಿ ನೀಡುತ್ತದೆ ಮತ್ತು ಗೂಗಲ್ ಅದನ್ನು ಸಂಗ್ರಹಿಸುತ್ತದೆ. ಒಂದು ವೇಳೆ ಈ ಸೆಟ್ಟಿಂಗ್ ಅನ್ನು ನೀವು ನಿಮ್ಮ ಖಾತೆಯಲ್ಲಿ ಸಕ್ರೀಯಗೊಳಿಸಿದ್ದರೆ, ನಿಮ್ಮ ಮಾಹಿತಿಯನ್ನು ಕೂಡ ಗೂಗಲ್ ಬಳಿ ಸಂಗ್ರಹವಾಗುತ್ತವೆ.
Location History ಸಕ್ರೀಯಗೊಳಿಸುವುದು ಹೇಗೆ? (How To Enable Location History Setting)
ನೀವು ಬಯಸಿದಾಗಳೆಲ್ಲಾ ನಿಮ್ಮ ಮೊಬೈಲ್ ಲೋಕೇಶನ್ ಹಿಸ್ಟರಿ ಅನ್ನು ಸಕ್ರೀಯಗೊಳಿಸಬಹುದು ಹಾಗೂ ನಿಷ್ಕ್ರೀಯಗೊಳಿಸಬಹುದು. ಒಂದು ವೇಳೆ ನೀವು ಕೆಲಸ ಮಾಡುವ ಸ್ಥಳ ಅಥವಾ ಶಾಲೆಯ ಖಾತೆಯನ್ನು ಬಳಸುತ್ತಿದ್ದರೆ, ನಿಮ್ಮ ಅಡ್ಮಿನ್ ನಿಮಗೆ ಈ ಸೇವೆಯನ್ನು ಒದಗಿಸಲೇಬೇಕು. ಒಂದು ವೇಳೆ ನೀವು ಇದನ್ನು ಮಾಡಿದರೆ, ಇತರ ಬಳಕೆದಾರರ ರೀತಿಯೇ ಲೋಕೇಶನ್ ಹಿಸ್ಟರಿ ಬಳಸಬಹುದು.
Location History ನಿಷ್ಕ್ರೀಯಗೊಳಿಸುವುದು ಹೇಗೆ? (How To Disable Location History Setting)
>> ಇದಕ್ಕಾಗಿ ನೀವು ಮೊದಲು ನಿಮ್ಮ ಗೂಗಲ್ ಖಾತೆಯ 'ಲೋಕೇಶನ್ ಹಿಸ್ಟರಿ'ಗೆ ಭೇಟಿ ನೀಡಬೇಕು.
>> ನಿಮ್ಮ ಖಾತೆಯ ಮೂಲಕ ಅಥವಾ ಡಿವೈಸ್ ಮೂಲಕ Googleಗೆ ಲೋಕೇಶನ್ ಹಿಸ್ಟರಿ ವರದಿ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಿ.
>> ಈಗ ನಿಮ್ಮ ಸ್ಕ್ರೀನ್ ಮೇಲ್ಭಾಗದಲ್ಲಿ ಲೋಕೇಶನ್ ಹಿಸ್ಟರಿ ಆನ್ ಅಥವಾ ಆಫ್ ಮಾಡಿ.
ಇದನ್ನೂ ಓದಿ-Whatsapp- ವಾಟ್ಸಾಪ್‌ನಲ್ಲಿನ ಒಂದೇ ಒಂದು ಸಣ್ಣ ತಪ್ಪು ನಿಮ್ಮನ್ನು ಜೈಲು ಶಿಕ್ಷೆಗೆ ಗುರಿಯಾಗಿಸಬಹುದು, ಎಚ್ಚರ!
ಲೋಕೇಶನ್ ಹಿಸ್ಟರಿ ಸ್ಥಗಿತಗೊಂಡರೆ ಏನಾಗುತ್ತದೆ?
>> ನಿಮ್ಮ ಡಿವೈಸ್ ಇರುವ ಜಾಗದ ಮಾಹಿತಿ ಅಥವಾ ಲೋಕೇಶನ್ ಹಿಸ್ಟರಿ ಮಾಹಿತಿ ಗೂಗಲ್ ನಲ್ಲಿ ಸಂಗ್ರಹವಾಗುವುದಿಲ್ಲ.
>> ಲೋಕೇಶನ್ ಹಿಸ್ಟರಿ ಅನ್ನು ನೀವು ಖುದ್ದಾಗಿ ಅಳಿಸಿ ಹಾಕಬಹುದು.
>>ಆದರೆ ನಿಮ್ಮ ಡಿವೈಸ್ ಗೆ ಒದಗಿಸಲಾಗುವ ಲೋಕೇಶನ್ ರಿಪೋರ್ಟಿಂಗ್ ಹಾಗೂ Find My Device ಗಳಂತಹ ಮಾಹಿತಿ ಒದಗಿಸುವ ಸೌಲಭ್ಯಗಳ ಸೆಟ್ಟಿಂಗ್ ಬದಲಾಗುವುದಿಲ್ಲ.
ಇದನ್ನೂ ಓದಿ-OMG ! ಕೋಳಿಗಳಿಂದ ತಯಾರಾಗಲಿದೆ Biodiesel!, ಡಿಸೇಲ್ ಗಿಂತಲೂ ಅಗ್ಗ, ಎವರೇಜ್ ಎಷ್ಟು?
ಈ ರೀತಿ Block ಮಾಡಿ
>> ಇದಕ್ಕಾಗಿ ಗೂಗಲ್ ಖಾತೆಯ ಲೋಕೇಶನ್ ಹಿಸ್ಟರಿ ವೈಶಿಷ್ಟ್ಯವನ್ನು ಟರ್ನ್ ಆಫ್ ಮಾಡಬೇಕು. ಇದರಿಂದ ಲೋಕೇಶನ್ ಟ್ರ್ಯಾಕಿಂಗ್ ಕೂಡ ಟರ್ನ್ ಆಫ್ ಆಗುತ್ತದೆ.
>>ಎಲ್ಲಾ ಗೂಗಲ್ ಆಪ್ ಹಾಗೂ ಸೇವೆಗಳನ್ನು ಏಕಕಾಲಕ್ಕೆ ಸ್ಥಗಿತಗೊಳಿಸಬಹುದು.
>> ಇದಕ್ಕಾಗಿ ಮೊದಲು ಗೂಗಲ್ ಖಾತೆಗೆ ಭೇಟಿ ನೀಡಿ ಮತ್ತು ಅದರಲ್ಲಿ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ಕಿಸಿ.
>> ಸೆಟ್ಟಿಂಗ್ ನಲ್ಲಿ ಮ್ಯಾನೆಜ್ ಯುವರ್ ಗೂಗಲ್ ಅಕೌಂಟ್ ಆಯ್ಕೆಯನ್ನು ಕ್ಲಿಕ್ಕಿಸಿ.
>> ನಂತರ ಪ್ರೈವೆಸಿ ಹಾಗೂ ಪರ್ಸನಲೈಸೆಶನ್ ಮೇಲೆ ಕ್ಲಿಕ್ಕಿಸಿ
>> ಇದಾದ ಬಳಿಕ ಆಕ್ಟಿವಿಟಿ ಕಂಟ್ರೋಲ್ ಸೆಕ್ಷನ್ ನಲ್ಲಿ ಲೋಕೇಶನ್ ಹಿಸ್ಟರಿ ಮೇಲೆ ಟ್ಯಾಪ್ ಮಾಡಿ.
>> ಅಲ್ಲಿ ಸಕ್ರೀಯವಾಗಿರುವ ಲೋಕೇಶನ್ ಹಿಸ್ಟರಿ ಸೇವೆಯನ್ನು ಎಡಭಾಗಕ್ಕೆ ಸ್ವೈಪ್ ಮಾಡುವ ಮೂಲಕ ಸೇವೆಯನ್ನು ನಿಷ್ಕ್ರೀಯಗೊಳಿಸಿ.
ಇದನ್ನೂ ಓದಿ-ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.