ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ

ವಾಟ್ಸ್‌ಆ್ಯಪ್‌ನ  ಅನೇಕ Tips & Tricks ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂತಹ ಒಂದು ಹೊಸ ಟ್ರಿಕ್ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ. ಇದು ವಾಟ್ಸ್‌ಆ್ಯಪ್‌ನ  ಪ್ರೊಫೈಲ್ ಫೋಟೋಗೆ ಸಂಬಂಧಿಸಿದೆ. 

Written by - Ranjitha R K | Last Updated : Jul 25, 2021, 02:38 PM IST
  • ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರು ರಹಸ್ಯವಾಗಿ ನೋಡುತ್ತಿದ್ದಾರೆ ತಿಳಿಯಬೇಕೇ?
    ಈ ಸುಲಭವಾದ ಟ್ರಿಕ್ ಅನ್ನು ಬಳಸಿ ಇದನ್ನು ಕಂಡು ಹಿಡಿಯಬಹುದು
    24 ಗಂಟೆಗಳ ಒಳಗೆ ಪ್ರೊಫೈಲ್ ಫೋಟೋ ವೀಕ್ಷಿಸಿದವರ ಮಾಹಿತಿ ಸಿಗುತ್ತದೆ
ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ  title=
ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರು ರಹಸ್ಯವಾಗಿ ನೋಡುತ್ತಿದ್ದಾರೆ ತಿಳಿಯಬೇಕೇ? (file photo)

ನವದೆಹಲಿ :  ವಾಟ್ಸ್‌ಆ್ಯಪ್‌ನ  ಅನೇಕ Tips & Tricks ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂತಹ ಒಂದು ಹೊಸ ಟ್ರಿಕ್ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ. ಇದು ವಾಟ್ಸ್‌ಆ್ಯಪ್‌ನ  ಪ್ರೊಫೈಲ್ ಫೋಟೋಗೆ (Whatsapp profile photo) ಸಂಬಂಧಿಸಿದೆ. ಈ ಟ್ರಿಕ್ ಮೂಲಕ, ಯಾರು ಕದ್ದು ಮುಚ್ಚಿ ನಿಮ್ಮ ವಾಟ್ಸಾಪ್ ಫೋಟೋಗಳನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. 

ವಾಟ್ಸಾಪ್‌ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಿದ್ದಾರೆಂದು ಕಂಡುಹಿಡಿಯುವುದು ಹೇಗೆ ?
-ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಯಾರು ಟ್ರ್ಯಾಕ್ ಮಾಡುತ್ತಿದ್ದಾರೆಂದು ಕಂಡುಹಿಡಿಯಲು, ನೀವು ಒಂದು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.
-ಇದಕ್ಕಾಗಿ, ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ WhatsApp-Who Viewed Me ಅಥವಾ  Whats Tracker ಹೆಸರಿನ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
-ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದರ ಜೊತೆಗೆ, ನೀವು 1mobile market ಅನ್ನು ಕೂಡಾ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈ ಆ್ಯಪ್ ಇಲ್ಲದೆ WhatsApp- Who Viewed Me ಯನ್ನು  ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. 1mobile market  ಅದರ ಪಾಡಿಗೆ ಡೌನ್ ಲೋಡ್ ಆಗುತ್ತದೆ. 
- ಒಮ್ಮೆ WhatsApp-Who Viewed Me ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ನಂತರ, ನಿಮಗೆ ಗೊತ್ತಿಲ್ಲದಂತೆ ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. 

ಇದನ್ನೂ ಓದಿ : Free WiFi: ಆಗಸ್ಟ್ 15 ರಿಂದ ಈ ರಾಜ್ಯದ ನಗರಗಳಲ್ಲಿನ ನಾಗರಿಕರಿಗೆ ಸಿಗಲಿದೆ ಉಚಿತ ವೈ-ಫೈ ಸೌಲಭ್ಯ

24 ಗಂಟೆಗಳ ಒಳಗೆ ಪ್ರೊಫೈಲ್ ಫೋಟೋ ನೋಡಿರುವವರ ಮಾಹಿತಿ ಸಿಗುತ್ತದೆ :
ಕಳೆದ 24 ಗಂಟೆಗಳಲ್ಲಿ ನಿಮ್ಮ ಡಿಪಿಯನ್ನು (DP) ಯಾರೆಲ್ಲಾ ವೀಕ್ಷಿಸಿದ್ದಾರೆ ಎನ್ನುವ ಲಿಸ್ಟ್ ಅನ್ನು ಈ ಆ್ಯಪ್‌ ಒದಗಿಸುತ್ತದೆ. ಈ ಆ್ಯಪ್‌ ನಿಮ್ಮ ಫೋಟೋವನ್ನು ವೀಕ್ಷಿಸಿದವರ  Contact ಕ್ಯಾಟಗರಿಯನ್ನೇ ನೀಡುತ್ತದೆ. ಈ ಮೂಲಕ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಪ್ರೊಫೈಲ್ ನೋಡಿದವರ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು. 

ಸ್ವಂತ ರಿಸ್ಕ್ ಮೇಲೆ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು : 
ಸ್ಮಾರ್ಟ್ಫೋನ್‌ನಲ್ಲಿ (Smartphone) ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ. ಈ ಅಪ್ಲಿಕೇಶನ್  ಸುರಕ್ಷಿತವಾಗಿದೆಯೇ  ಇಲ್ಲವೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ನಿಮ್ಮ ಸ್ವಂತ ರಿಸ್ಕ್ ಮೇಲೆ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ (download) ಮಾಡಿ ಮತ್ತು ಈ ಟ್ರಿಕ್ ಅನ್ನು ಪ್ರಯತ್ನಿಸಬಹುದು. 

ಇದನ್ನೂ ಓದಿ : 2008 GO20 Asteroid: ನಾಳೆ ಭೂಮಿಯ ತುಂಬಾ ಸನೀಹದಿಂದ ಹಾದುಹೋಗಲಿದೆ ಈ ಕ್ಷುದ್ರಗ್ರಹ, ಭೂಮಿಯ ಮೇಲೆ ಏನು ಪ್ರಭಾವ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News