Google: ಮೊಬೈಲ್ Video Calling ಗಾಗಿ Noise Cancellation ವೈಶಿಷ್ಟ್ಯ ಆರಂಭ
ಇದೀಗ ಮೊಬೈಲ್ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್ಟಾಪ್ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.
ನವದೆಹಲಿ: ವರ್ಕ್ ಫ್ರಮ್ ಹೋಮ್ ನಡುವೆ ವೀಡಿಯೊ ಕರೆ ಮಾಡುವುದು ಯಾವಾಗಲೂ ಜನರಿಗೆ ಸವಾಲಿನ ಸಂಗತಿಯಾಗಿದೆ. ಕಚೇರಿಯ ತಂಡದ ಸದಸ್ಯರೊಂದಿಗೆ ಚರ್ಚೆಯ ನಡುವೆ ಗಂಟೆಗಳು, ಮಕ್ಕಳು ಮತ್ತು ಸಾಕುಪ್ರಾಣಿಗಳ ಶಬ್ದಗಳು ಹಲವು ಬಾರಿ ಅಡ್ಡಿಪಡಿಸುತ್ತವೆ. ಏತನ್ಮಧ್ಯೆ, ಗೂಗಲ್ ತನ್ನ ವೀಡಿಯೊ ಕರೆ ವೈಶಿಷ್ಟ್ಯವಾದ ಗೂಗಲ್ ಮೀಟ್ (Google Meet) ನ ಮೊಬೈಲ್ ಆವ್ರುತ್ತಿಗೂ ಕೂಡ ಶಬ್ದ ರದ್ದತಿ ವೈಶಿಷ್ಟ್ಯ ಆರಂಭಿಸಿದೆ.
ಇದನ್ನು ಓದಿ- Google Pay ಇನ್ಮುಂದೆ Tap To Pay ವೈಶಿಷ್ಟ್ಯವನ್ನು ಸಪೋರ್ಟ್ ಮಾಡಲಿದೆ... ಏನಿದು?
ತನ್ನ ಅಧಿಕೃತ ಬ್ಲಾಗ್ ನಲ್ಲಿ ಈ ಕುರಿತು ಹೇಳಿಕೊಂಡಿರುವ ಗೂಗಲ್, ಮೀಟ್ ವಿಡಿಯೋ ಕಾಲಿಂಗ್ ಮೊಬೈಲ್ ಆಪ್ ನಲ್ಲಿಯೂ ಕೂಡ Noise Cancellation ವೈಶಿಷ್ಟ್ಯ ಆರಂಭಿಸಿರುವುದಾಗಿ ಮಾಹಿತಿ ನೀಡಿದೆ. ಹೀಗಾಗಿ ಇನ್ಮುಂದೆ ಮೊಬೈಲ್ ಮೂಲಕ ನಡೆಸಲಾಗುವ ವಿಡಿಯೋ ಕಾಲಿಂಗ್ ವೇಳೆಯೂ ಕೂಡ ನಿಮಗೆ ನಿಮ್ಮ ಅಕ್ಕಪಕ್ಕದಲ್ಲಿನ ಗದ್ದಲ ಕೇಳಿಬರುವುದಿಲ್ಲ. ಡೆಸ್ಕ್ ಟಾಪ್ ಮೂಲಕ ಬಳಸಲಾಗುವ ಗೂಗಲ್ ಮೀಟ್ ನಲ್ಲಿ ಈಗಾಗಲೇ ಈ ವೈಶಿಷ್ಟ್ಯ ಲಭ್ಯವಿದೆ.
ಇದನ್ನು ಓದಿ-ವಾವ್! Google ಸರ್ಚ್ನಲ್ಲಿ ನಿಮ್ಮ ಹೆಸರೂ ಇದೆಯೇ, ಇಲ್ಲಿದೆ ಗೂಗಲ್‌ನ ಹೊಸ ವೈಶಿಷ್ಟ್ಯ
ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಡಿಫಾಲ್ಟ್ ಸೆಟಿಂಗ್ ನಲ್ಲಿ ನಾಯಿಸ್ ಕ್ಯಾನ್ಸಲೆಶನ್ ಆಪ್ಶನ್ ಬಂದ್ ಇರುತ್ತದೆ. ಮೊಬೈಲ್ ಮೇಲೆ ಯ ಆವುದೇ ಓರ್ವ ಬಳಕೆದಾರ ಗೂಗಲ್ ಮೀಟ್ ಮೂಲಕ ವಿಡಿಯೋ ಕಾಲಿಂಗ್ ಮಾಡಿದರೆ, ಈ ವೈಶಿಷ್ಟ್ಯವನ್ನು ಸಕ್ರೀಯಗೋಳಿಸಬೇಕಾಗಲಿದೆ. ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ ನೀವು ಈ ವೈಶಿಷ್ಟ್ಯ ಆನ್ ಮಾಡಬೇಕು.
ಇದನ್ನು ಓದಿ- ಮೊಬೈಲ್ ಫೋನ್ ಮೂಲಕವೇ ನೌಕರಿಯನ್ನು ನೀಡಲಿದೆ Google, ಬಿಡುಗಡೆಗೊಳಿಸಿದೆ ಈ ಆಪ್
ಕೆಲ ದಿನಗಳ ಹಿಂದೆಯಷ್ಟೇ ಗೂಗಲ್ ಮೀಟ್ ನಲ್ಲಿ ನಾಯಿಸ್ ಕ್ಯಾನ್ಸಲೆಶನ್ ವೈಷ್ಟಿಷ್ಯವನ್ನು ಪರಿಚಯಿಸಲಾಗಿದೆ. ಈ ವೈಶಿಷ್ಟ್ಯವನ್ನು ನೀವು ಉಚಿತವಾಗಿ ಬಳಸಬಹುದು. ಆದರೆ, G-Suit ಚಂದಾದಾರಿಕೆ ಹೊಂದಿರುವ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯದ ಬಳಕೆಯನ್ನು ಸೀಮಿತಗೋಳಿಸಲಾಗಿದೆ.