Google Paid Rs 2 Crore To Hacker : ಕ್ಷಣ ಮಾತ್ರದಲ್ಲಿ ವ್ಯಕ್ತಿಯನ್ನು ಗೂಗಲ್ ಕೋಟ್ಯಾಧಿಪತಿಯನ್ನಾಗಿ ಮಾಡಿದೆ.  ಈ ಮಾತು ವಿಚಿತ್ರ ಎನಿಸಿದರೂ ಸತ್ಯ. ಗೂಗಲ್ ಅಕಸ್ಮಾತ್ತಾಗಿ 2 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತವನ್ನು ಹ್ಯಾಕರ್‌ ಒಬ್ಬರಿಗೆ ಪಾವತಿಸಿದೆ. ಮಾತ್ರವಲ್ಲ ಈ ಮೊತ್ತವನ್ನು ವಾಪಸ್ ಪಡೆಯಲು ಕೂಡಾ ಗೂಗಲ್ ಮರೆತು ಬಿಟ್ಟಿದೆ. ಈ ಮಾಹಿತಿಯನ್ನು ಸ್ವತಃ ಹ್ಯಾಕರ್ ಹಂಚಿಕೊಂಡಿದ್ದಾರೆ. ಸ್ಯಾಮ್ ಕರ್ರಿ ಎಂಬ ಹ್ಯಾಕರ್ ಈ ವಿಷಯದ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, Google ಅನ್ನು ಸಂಪರ್ಕಿಸಲು ಯಾವುದಾದರೂ ಮಾರ್ಗವಿದೆಯೇ ಎಂದು ಪ್ರಶ್ನಿಸಿದ್ದಾರೆ. ಒಂದು ಮಾರ್ಗವಿದೆಯೇ ಎಂದು ಕೇಳಿದರು. 


COMMERCIAL BREAK
SCROLL TO CONTINUE READING

ಗೂಗಲ್ ಹ್ಯಾಕರ್‌ ಖಾತೆಗೆ 2 ಕೋಟಿ ರೂ. ಪಾವತಿ : 
ಅವರು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ಆಗಸ್ಟ್ ತಿಂಗಳಿನಲ್ಲಿ ಗೂಗಲ್‌ ಸ್ಯಾಮ್ ಕರ್ರಿ  ಅವರಿಗೆ  250,000 ಡಾಲರ್ ಅಂದರೆ ಸುಮಾರು 2 ಕೋಟಿ ರುಪಾಯಿಯನ್ನು ಪಾವತಿಸಿದೆ. ಆದರೆ ಟೆಕ್ ದೈತ್ಯ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾವ ಉದ್ದೇಶದಿಂದ ಸ್ಯಾಮ್ ಕರ್ರಿ ಅವ್ರಿಗೆ ಪಾವತಿಸಿದೆ ಎನ್ನುವುದು ಮಾತ್ರ ಅವರಿಗೆ ತಿಳಿದಿಲ್ಲ. ಅಲ್ಲದೆ ಹಣ ಪಾವತಿಸಿ ಮೂರೂ ವಾರಗಳಾಗಿದ್ದರೂ, ಇನ್ನು ಕೂಡಾ ಆ ಹಣವನ್ನು ಮರಳಿ ಪಡೆಯುವ ಯತ್ನ ಕೂಡಾ ಆಗಿಲ್ಲ ಎಂದು ಹೇಳಿದ್ದಾರೆ.  


ಇದನ್ನೂ ಓದಿ : ಈ ವೆಬ್‌ಸೈಟ್‌ ನಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಗಿಂತಲೂ ಅಗ್ಗದ ದರದಲ್ಲಿ ಐಫೋನ್ ಮತ್ತು ಸ್ಪ್ಲಿಟ್ ಎಸಿ ಮಾರಾಟ .!


ಯಾರು ಈ ಸ್ಯಾಮ್ ಕರ್ರಿ : 
ಸ್ಯಾಮ್ ಕರ್ರಿ ಅವರು ಟ್ವಿಟ್ಟರ್ ಬಯೋದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಅವರೊಬ್ಬ ಸ್ವಯಂ ಘೋಷಿತ ಹ್ಯಾಕರ್. ವೆಬ್ ಅಪ್ಲಿಕೇಶನ್ ಸುರಕ್ಷತೆಯನ್ನು ವಿವರಿಸುವ ಬ್ಲಾಗ್ ಅನ್ನು ನಡೆಸುತ್ತಿದ್ದಾರೆ. ಯುಗ್ ಲ್ಯಾಬ್ಸ್‌ನಲ್ಲಿ ಸಿಬ್ಬಂದಿ ಭದ್ರತಾ ಎಂಜಿನಿಯರ್ ಆಗಿದ್ದಾರೆ. 'ಹ್ಯಾಕರ್, ಬಗ್ ಬೌಂಟಿ ಹಂಟರ್, ವೆಬ್ ಅಪ್ಲಿಕೇಶನ್ ಸುರಕ್ಷತೆಯನ್ನು ಉತ್ತಮವಾಗಿ ವಿವರಿಸಲು ಬ್ಲಾಗ್ ಅನ್ನು ನಡೆಸುತ್ತಾರೆ. 


ಈ ಘಟನೆಯ ಬಗ್ಗೆ ಗೂಗಲ್ ಹೇಳಿರುವುದೇನು ? 
ಎನ್‌ಪಿಆರ್‌ನ ವರದಿಯ ಪ್ರಕಾರ, ತಪ್ಪಾಗಿ ಈ ಹಣವನ್ನು ಸ್ಯಾಮ್ ಕರ್ರಿ ಅವರಿಗೆ ಪಾವತಿ ಮಾಡಲಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. 'ನಮ್ಮ ತಂಡದ ತಪ್ಪಿನಿಂದಾಗಿ, ಈ ಅಚಾತ್ಯ್ರ್ಯ ನಡೆದಿದೆ.  ಹಣ ಪಡೆದಿರುವ ವ್ಯಕ್ತಿ ತಾವಾಗಿಯೇ ಈ ಘಟನೆಯ ಬಗ್ಗೆ ತಮ್ಮ ಗಮನಕ್ಕೆ ತಂದಿರುವುದಕ್ಕಾಗಿ ಅವ್ರಿಗೆ ಧನ್ಯವಾದ ತಿಳಿಸಿದೆ. ಅಲ್ಲದೆ ಆಗಿರುವ ತಪ್ಪನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದೆ.  


ಇದನ್ನೂ ಓದಿ : ಎಲೆಕ್ಟ್ರಿಕ್ ಮೀಟರ್‌ನ ಹಿಂದೆ ಈ ಸಾಧನವನ್ನು ಫಿಟ್ ಮಾಡಿದರೆ ಅರ್ಧದಷ್ಟು ಕಡಿಮೆಯಾಗುತ್ತೆ ವಿದ್ಯುತ್ ಬಿಲ್!


 




ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.