Smartphone: 15 ಸಾವಿರ ರೂ.ಗಿಂತ ಕಡಿಮೆ ಬೆಲೆಯ Vivo ಸ್ಮಾರ್ಟ್‌ಫೋನ್ ಬಿಡುಗಡೆ

Vivo ಹೊಚ್ಚ ಹೊಸ Vivo Y52t 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್ ಆಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

Written by - Puttaraj K Alur | Last Updated : Sep 18, 2022, 12:36 PM IST
  • 15 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ವಿವೋ ಸ್ಮಾರ್ಟ್‍ಫೋನ್‍ ಬಿಡುಗಡೆ
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜೆಟ್ ಸ್ಮಾರ್ಟ್‍ಫೋನ್
  • ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ Vivo Y52t 5G
Smartphone: 15 ಸಾವಿರ ರೂ.ಗಿಂತ ಕಡಿಮೆ ಬೆಲೆಯ Vivo ಸ್ಮಾರ್ಟ್‌ಫೋನ್ ಬಿಡುಗಡೆ   title=
Vivo Y52t 5G ಸ್ಮಾರ್ಟ್‍ಫೋನ್‍ ಬಿಡುಗಡೆ

ನವದೆಹಲಿ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳಿವೆ. ಈ ಬ್ರ್ಯಾಂಡ್‌ಗಳು ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿವೆ. ಭಾರತೀಯ ಮಾರುಕಟ್ಟೆಯಲ್ಲಿ ಚೈನೀಸ್ ಸ್ಮಾರ್ಟ್‌ಫೋನ್ ತಯಾರಕ ವಿವೋ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೋಟ್ಯಂತರ ಜನರು ಈ ಸ್ಮಾರ್ಟ್‍ಫೋನ್‍ಗಳನ್ನು ಇಷ್ಟಪಡುತ್ತಾರೆ. Vivo ಇತ್ತೀಚೆಗೆ Vivo Y52t 5G ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಸ್ಮಾರ್ಟ್‌ಫೋನ್‌ನ ಬೆಲೆ 15 ಸಾವಿರ ರೂ.ಗಿಂತ ಕಡಿಮೆಯಿದ್ದು, ಈ ಬಜೆಟ್ ಫೋನ್‌ನಲ್ಲಿ ನಿಮಗೆ ಹಲವಾರು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಫೋನ್‌ನ ವಿಶೇಷತೆಗಳು ಯಾವುವು ಮತ್ತು ಅದರ ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.    

ಇದನ್ನೂ ಓದಿ: iPhone 14 ಸಿರೀಸ್ ಮೊಬೈಲ್ ಖರೀದಿಗೆ Flipkart-Amazon ಅಲ್ಲದೆ ಈ ಆಪ್ ಸೂಕ್ತ: ನಿಮಿಷಗಳಲ್ಲಿ ಡೆಲಿವರಿಯಾಗುತ್ತೆ!

Vivo Y52t 5G ಬಿಡುಗಡೆ

Vivo ಹೊಚ್ಚ ಹೊಸ Vivo Y52t 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ Vivo Y52 ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್‍ Version ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇದನ್ನು ಚೀನಾದಲ್ಲಿ ಮಾತ್ರ ಪರಿಚಯಿಸಲಾಗಿದೆ. ಶೀಘ್ರವೇ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Vivo Y52t 5G ಬೆಲೆ

ಈ ಸ್ಮಾರ್ಟ್‌ಫೋನ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದರ ಬೆಲೆ. Vivo Y52t 5Gಯನ್ನು ಚೀನಾದಲ್ಲಿ 1,299 ಯುವಾನ್ (ಸುಮಾರು 14,900 ರೂ.) ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಬೆಲೆಗೆ 128GB ಸ್ಟೋರೇಜ್ ಹೊಂದಿರುವ ಫೋನ್ ನಿಮಗೆ ಸಿಗಲಿದೆ. Vivo Y52t 5Gನ 256GB ಮಾದರಿಗೆ 1,499 ಯುವಾನ್ (ಸುಮಾರು 17 ಸಾವಿರ ರೂ) ಬೆಲೆ ನಿಗದಿಪಡಿಸಲಾಗಿದೆ. 

ಇದನ್ನೂ ಓದಿ: Fast Charging: ಗರಿಷ್ಠ ವೇಗದಲ್ಲಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಬಿಡುಗಡೆಯಾಗಿದೆ UBON CH-161 ಚಾರ್ಜರ್

Vivo Y52t 5G ವಿಶೇಷಣಗಳು

ಡ್ಯುಯಲ್ ಸಿಮ್ ಹೊಂದಿರುವ Vivo Y52t 5Gನಲ್ಲಿ ನಿಮಗೆ 1600 x 720 ಪಿಕ್ಸೆಲ್‌ಗಳೊಂದಿಗೆ 6.56-ಇಂಚಿನ HD + IPS LCD ಡಿಸ್ಪ್ಲೇ ನೀಡಲಾಗುತ್ತದೆ. ಈ ಫೋನ್‌ನಲ್ಲಿ 60Hz ರಿಫ್ರೆಶ್ ರೇಟ್‍ನೊಂದಿಗೆ 600nitsವರೆಗಿನ ಗರಿಷ್ಠ ಹೊಳಪು ಸಹ ಲಭ್ಯವಿದೆ. Mediatek ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 5G ಸ್ಮಾರ್ಟ್‌ಫೋನ್ 8GB RAM ಮತ್ತು 256GBವರೆಗೆ ಸ್ಟೋರೇಜ್ ಹೊಂದಿರುತ್ತದೆ. ಈ ಫೋನ್‌ನ SD ಕಾರ್ಡ್ ಸ್ಲಾಟ್‌ನೊಂದಿಗೆ ನೀವು 1TBವರೆಗೆ ಸ್ಟೋರೇಜ್ ಕೆಪ್ಯಾಸಿಟಿ ವಿಸ್ತರಿಸಬಹುದು. 13MP ಪ್ರಾಥಮಿಕ ಸೆನ್ಸಾರ್ ಮತ್ತು 2MP 2ನೇ ಸೆನ್ಸಾರ್ ಒಳಗೊಂಡಿರುವ ಈ ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 8MP ಮುಂಭಾಗದ ಕ್ಯಾಮೆರಾದೊಂದಿಗೆ ಫೋನ್ ಬಿಡುಗಡೆ ಮಾಡಲಾಗಿದೆ. 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ನಲ್ಲಿ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News