Google: ನಾವು ಹಲವು ಬಾರಿ ಜನರ ಜಿಮೇಲ್ ಅನಗತ್ಯ ಇಮೇಲ್‌ಗಳಿಂದ ತುಂಬಿರುವುದನ್ನು ಕಾಣುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಇಮೇಲ್ ನಿರ್ವಹಣೆ ಕಷ್ಟಸಾಧ್ಯ ಎಂದೆನಿಸುವುದು ಸರ್ವೇ ಸಾಮಾನ್ಯ. ಆದರೀಗ ಅನಗತ್ಯ ಇಮೇಲ್‌ಗಳಿಂದ ಉಂಟಾಗುವ ತಲೆನೋವನ್ನು ತಪ್ಪಿಸಲು ಗೂಗಲ್ ತನ್ನ ಇಮೇಲ್ ಸೇವೆ ಜಿಮೇಲ್‌ನಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಘೋಷಿಸಿದೆ. ಈ ಬದಲಾವಣೆಗಳು ವೆಬ್ ಮತ್ತು ಮೊಬೈಲ್ ಆವೃತ್ತಿ ಎರಡರಲ್ಲೂ ಲಭ್ಯವಿರುತ್ತದೆ ಎಂಬುದು ಇನ್ನೂ ವಿಶೇಷವಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಜಿಮೇಲ್‌ನ ಮೊಬೈಲ್ ಮತ್ತು ವೆಬ್ ಆವೃತ್ತಿಗಳೆರಡರಲ್ಲೂ ಇಮೇಲ್‌ಗಳನ್ನು ಅನ್‌ಸಬ್‌ಸ್ಕ್ರೈಬ್ ಮಾಡುವುದನ್ನು ಗೂಗಲ್ ಇನ್ನೂ ಸುಲಭಗೊಳಿಸಿದೆ. ಇದೀಗ "ಸ್ಪ್ಯಾಮ್ ವರದಿ ಮಾಡಿ" ಎಂಬ ಆಯ್ಕೆಯಲ್ಲಿ ಬದಲಾವಣೆ ಮಾಡಲಾಗಿದ್ದು ಇದನ್ನು "ಸ್ಪ್ಯಾಮ್ ವರದಿ ಮಾಡಿ" ಮತ್ತು "ಅನ್‌ಸಬ್‌ಸ್ಕ್ರೈಬ್" ಎಂಬ ಎರಡು ಆಯ್ಕೆಗಳೊಂದಿಗೆ ಪ್ರತ್ಯೇಕಿಸಲಾಗುತ್ತಿದೆ.


ಇದನ್ನೂ ಓದಿ- WhatsApp ಚಾನೆಲ್‌ನಲ್ಲಿ ಹೊಸ ವೈಶಿಷ್ಟ್ಯಗಳ ಸೇರ್ಪಡೆ


ಈ ಕುರಿತಂತೆ ಗೂಗಲ್ ವರ್ಕ್ ಸ್ಪೇಸ್ ಅಪ್‌ಡೇಟ್ ಮೂಲಕ ವಿವರಣೆ ನೀಡಿರುವ ಕಂಪನಿಯು, "ಅನಗತ್ಯ ಇಮೇಲ್‌ಗಳನ್ನು ನಿರ್ವಹಿಸುವುದು ಅನೇಕ ಬಳಕೆದಾರರಿಗೆ ಹತಾಶೆಯ ಮೂಲವಾಗಿದೆ ಎಂದು ನಮಗೆ ತಿಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಲ್ಕ್ ಮೆಸೇಜ್ ಕಳುಹಿಸುವವರಿಗೆ ನಾವು ಈ ಹಿಂದೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದ್ದೇವೆ." ಇದೀಗ ನಾವು ಬಳಕೆದಾರರ ಸುರಕ್ಷತೆ ಹಾಗೂ ಬಳಕೆದಾರರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ವೆಬ್ ಮತ್ತು ಮೊಬೈಲ್‌ನಲ್ಲಿ ಅನಗತ್ಯ ಇಮೇಲ್‌ಗಳ ಹಾವಳಿಯನ್ನು ತಪ್ಪಿಸಲು ಅನ್‌ಸಬ್‌ಸ್ಕ್ರೈಬ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸಲು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದ್ದೇವೆ" ಎಂದು ತಿಳಿಸಿದೆ. 


ಇದನ್ನೂ ಓದಿ- ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನೋಡಲು ಕೆಟ್ಟದಾಗಿದೆಯೇ ? ನಿಮಗೆ ಬೇಕಾದ ಫೋಟೋವನ್ನು ಹೀಗೆ ಬದಲಿಸಿಕೊಳ್ಳಿ !


ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಕ್ಲಿಕ್ ಮಾಡಿದ ನಂತರ, ಮೇಲಿಂಗ್ ವಿಳಾಸದಿಂದ ಬಳಕೆದಾರರ ವಿಳಾಸವನ್ನು ತೆಗೆದುಹಾಕಲು ಜಿಮೇಲ್ ಕಳುಹಿಸುವವರಿಗೆ http ವಿನಂತಿ ಅಥವಾ ಇಮೇಲ್ ಅನ್ನು ಕಳುಹಿಸುತ್ತದೆ. ಬಳಕೆದಾರರ Android ಮತ್ತು iOS ಸಾಧನಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಪ್ರದರ್ಶಿಸಲು ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಮೂರು-ಡಾಟ್ ಮೆನುಗೆ ಸರಿಸಲಾಗುತ್ತಿದೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.