ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಈ ಸ್ಮಾರ್ಟ್ ಫೋನ್ ಗಳ ಸಹಾಯದಿಂದಲೇ ನಮ್ಮ ಬಹುತೇಕ ಕೆಲಸಗಳನ್ನು ಮಾಡಿ ಮುಗಿಸಬಹುದು. ನಮ್ಮ ಫೋನ್‌ನ ಚಾರ್ಜಿಂಗ್‌ನಲ್ಲಿ ಸಮಸ್ಯೆ ಉಂಟಾದಾಗ, ಫೋನ್ ಚಾರ್ಜ್ ಆಗುವುದಿಲ್ಲ. ಫೋನ್ ಚಾರ್ಜ್ ಆಗದೆ ಹೋದರೆ ಸ್ವಿಚ್ ಆಫ್ ಆಗಿ ಬಿಡುತ್ತದೆ. ಒಮ್ಮೆ ಫೋನ್ ಸ್ವಿಚ್ ಆಫ್ ಆದರೆ ಮತ್ತೆ ಅದನ್ನು ಬಳಸುವುದು ಬಹಳ ಕಷ್ಟವಾಗುತ್ತದೆ. ನೀವು ಕೂಡಾ ಫೋನ್ ಚಾರ್ಜ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಟ್ರಿಕ್ ಗಳನ್ನೂ ಬಳಸಿ ನೋಡಿ ಹೀಗೆ ಮಾಡುವ ಮೂಲಕ ಮನೆಯಲ್ಲಿ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
1.ಚಾರ್ಜರ್ ಮತ್ತು ಕೇಬಲ್ ಪರಿಶೀಲಿಸಿ :
ಮೊದಲಿಗೆ, ನಿಮ್ಮ ಚಾರ್ಜರ್ ಮತ್ತು ಕೇಬಲ್ ಸರಿಯಾಗಿದೆಯೇ ಎನ್ನುವುದನ್ನು ನೋಡಿಕೊಳ್ಳಿ. ನೀವು ಹಳೆಯ ಅಥವಾ ಹಾನಿಗೊಳಗಾದ ಚಾರ್ಜರ್ ಅಥವಾ ಕೇಬಲ್ ಹೊಂದಿದ್ದರೆ, ಫೋನ್ ಚಾರ್ಜ್ ಆಗುವುದು ಸಮಸ್ಯೆ ಉಂಟು ಮಾಡಬಹುದು.
ಇದನ್ನೂ ಓದಿ : Birth Certificateನಲ್ಲಿ ತಿದ್ದುಪಡಿ ಮಾಡಬೇಕೇ ? ಆನ್‌ಲೈನ್‌ನಲ್ಲಿಯೇ ಕರೆಕ್ಷನ್ ಮಾಡಿಕೊಳ್ಳುವ ಸರಳ ಪ್ರಕ್ರಿಯೆ ಹೀಗಿದೆ
2.ಚಾರ್ಜಿಂಗ್ ಪೋರ್ಟ್ ಅನ್ನು ಸ್ವಚ್ಛಗೊಳಿಸಿ :
ಆಗಾಗ ಧೂಳು, ಕೊಳಕು ಅಥವಾ ಇತರ ಕಾರಣಗಳಿಂದ ಚಾರ್ಜಿಂಗ್ ಪೋರ್ಟಲ್ ನಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಚಾರ್ಜಿಂಗ್ ಪೋರ್ಟ್ ಅನ್ನು ಸ್ವಚ್ಛಗೊಳಿಸಲು, ನೀವು ಕ್ಲೀನ್ ಟೂತ್ ಬ್ರಷ್ ಅಥವಾ ಹತ್ತಿಯನ್ನು ಬಳಸಬಹುದು.ಚಾರ್ಜಿಂಗ್ ಪೋರ್ಟ್‌ಗೆ ಹೆಚ್ಚಿನ ಒತ್ತಡ ಬೀಳದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ.
3.ಫೋನ್ ಅನ್ನು ರೀಸ್ಟಾರ್ಟ್ ಮಾಡಿ :
ಕೆಲವೊಮ್ಮೆ, ಫೋನ್ ಅನ್ನು ರೀಸ್ಟಾರ್ಟ್ ಮಾಡುವುದರಿಂದ ಚಾರ್ಜಿಂಗ್ ಸಮಸ್ಯೆಯನ್ನು ಪರಿಹರಿಸಬಹುದು.
4.ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ :
ಎಲ್ಲಾ ಇತರ ಪ್ರಯತ್ನಗಳು ವಿಫಲವಾದರೆ, ನೀವು ನಿಮ್ಮ ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ ಕೊಳ್ಳಿ. ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ನಿಮ್ಮ ಫೋನ್‌ನ ಎಲ್ಲಾ ಡೇಟಾ ಮತ್ತು ಸೆಟ್ಟಿಂಗ್‌ಗಳು ಡಿಲೀಟ್ ಆಗುತ್ತವೆ. ಆದ್ದರಿಂದ, ನಿಮ್ಮ ಫೋನ್‌ನ ಬ್ಯಾಕಪ್ ಇದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರಕ್ಕೆ ಫ್ರೀ ವಿಐಪಿ ಪ್ರವೇಶ ಕೊಡುಗೆ' ಇಂತಾ ನಕಲಿ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ!
ಮೇಲೆ ಹೇಳಿದ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ ನಿಮ್ಮ ಫೋನ್ ಚಾರ್ಜಿಂಗ್ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ಅದನ್ನು ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ