Google Pay: ಪ್ರಸ್ತುತ ಆನ್‌ಲೈನ್ ವಹಿವಾಟುಗಳಿಗಾಗಿ ಜನಪ್ರಿಯ ಮಾಧ್ಯಮಗಳಲ್ಲಿ ಒಂದಾಗಿರುವ ಗೂಗಲ್ ಪೇ ಅಪ್ಲಿಕೇಶನ್ ಭಾರತ, ಸಿಂಗಾಪುರ ಮತ್ತು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಹೆಚ್ಚಾಗಿ ವ್ಯಾಪಿಸಿದೆ. ಆದರೀಗ ಗೂಗಲ್ ಪೇ ಸಂಬಂಧಿಸಿದಂತೆ ಗೂಗಲ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು  ಈ ಆ್ಯಪ್ ಶೀಘ್ರದಲ್ಲೇ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. 


COMMERCIAL BREAK
SCROLL TO CONTINUE READING

ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿರುವ ಗೂಗಲ್: 
ಈ ಕುರಿತಂತೆ ಗೂಗಲ್ ತನ್ನ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, GPay ಜೂನ್ 4, 2024 ರಿಂದ ಅಮೇರಿಕಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದಾಗ್ಯೂ, ಭಾರತ ಮತ್ತು ಸಿಂಗಾಪುರದಲ್ಲಿರುವ GPay ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ಈ ರಾಷ್ಟ್ರಗಳಲ್ಲಿ ಗೂಗಲ್ ಪೇ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ. 


ವಾಸ್ತವವಾಗಿ, ಗೂಗಲ್ ಈಗ ಹಳೆಯ ಗೂಗಲ್ ಆಪ್ ಅನ್ನು ಮುಚ್ಚಲು ಹೊರಟಿದೆ.  Android ಹೋಮ್‌ಸ್ಕ್ರೀನ್‌ನಲ್ಲಿ ಗೋಚರಿಸುವ 'GPay' ಅಪ್ಲಿಕೇಶನ್ ಪಾವತಿಗಳು ಮತ್ತು ಹಣಕಾಸುಗಾಗಿ ಬಳಸಲಾಗುವ ಹಳೆಯ ಆವೃತ್ತಿಯಾಗಿದೆ. ಆದರೆ, ಅಮೆರಿಕಕ್ಕಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.


ಇದನ್ನೂ ಓದಿ- WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ


ಗೂಗಲ್ ಪೇ ಆ್ಯಪ್‌ನ ಅನುಭವವನ್ನು ಸರಳಗೊಳಿಸಲು, ಸ್ಟ್ಯಾಂಡ್‌ಲೋನ್ ಗೂಗಲ್ ಪೇ ಆಪ್‌ನ ಅಮೇರಿಕನ್ ಆವೃತ್ತಿಯನ್ನು ಜೂನ್ 4 ರಿಂದ ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ಬ್ಲಾಗ್ ಮೂಲಕ ಈ ಮಾಹಿತಿಯನ್ನು ನೀಡಿದೆ.  


ಪೀರ್-ಟು-ಪೀರ್ ಪಾವತಿಯೂ ಕಾರ್ಯನಿರ್ವಹಿಸುವುದಿಲ್ಲ: 
ಲಭ್ಯವಿರುವ ಮಾಹಿತಿಯ ಪ್ರಕಾರ,  ಅಮೆರಿಕದಲ್ಲಿ ಗೂಗಲ್ ಪೇ ಆ್ಯಪ್‌ ಅನ್ನು ಸ್ಥಗಿತಗೊಳಿಸಿದ ಬಳಿಕ ಇಲ್ಲಿ ಗೂಗಲ್ ಪೀರ್-ಟು-ಪೀರ್ ಪಾವತಿಗಳ ಕಾರ್ಯಾಚರಣೆಯೂ ಕೂಡ ಸ್ಥಗಿತಗೊಳ್ಳಲಿದೆ. ಅರ್ಥಾತ್, ಅಮೆರಿಕದ ಜನರು ಇನ್ನು ಮುಂದೆ ಹಳೆಯ ಗೂಗಲ್ ಪೇ ಆ್ಯಪ್ ಮೂಲಕ ಹಣವನ್ನು ಬೇರೆಯವರಿಗೆ ಕಳುಹಿಸುವುದಾಗಲಿ, ಇಲ್ಲವೇ, ಇತರರಿಂದ ಹಣ ಸ್ವೀಕರಿಸುವುದಾಗಲಿ ಮಾಡಲು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ- Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ


Google Wallet ಅಪ್ಲಿಕೇಶನ್‌ಗೆ ಬದಲಾಗಲು ಸಲಹೆ: 
ಗಮನಾರ್ಹವಾಗಿ, ಅಮೆರಿಕದಲ್ಲಿ ಗೂಗಲ್ ಪೇ ಸ್ಥಗಿತಗೊಳಿಸಲು ಮುಂದಾಗಿರುವ ಕಂಪನಿಯು ಅಮೆರಿಕದಲ್ಲಿರುವ ಗೂಗಲ್ ಪೇ ಬಳಕೆದಾರರಿಗೆ Google Wallet ಅಪ್ಲಿಕೇಶನ್‌ಗೆ ಬದಲಾಗುವಂತೆ ಸಲಹೆ ನೀಡಿದೆ. ಇದರೊಂದಿಗೆ ಗೂಗಲ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ಹೊಸ ನವೀಕರಣಗಳನ್ನು ನೀಡುವುದನ್ನು ಮುಂದುವರೆಸುವುದಾಗಿ ಭರವಸೆಯನ್ನು ಸಹ ನೀಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.