Google Banned Apps: ಫೋನ್‌ನ ಬ್ಯಾಟರಿಗೆ ಮಾರಕವಾಗಿದ್ದ 43 ಅಪ್ಲಿಕೇಶನ್‌ಗಳನ್ನು ಗೂಗಲ್ ನಿಷೇಧಿಸಿದೆ.  ಮ್ಯಾಕ್‌ಅಫೀಯ ಭದ್ರತಾ ತಂಡ ಇದನ್ನು ಪತ್ತೆ ಮಾಡಿದ್ದು, ನಿಷೇಧಿತ ಅಪ್ಲಿಕೇಶನ್‌ಗಳು ಫೋನ್‌ನ ಬ್ಯಾಟರಿಯನ್ನು ತ್ವರಿತವಾಗಿ ಹೀರಿಕೊಳ್ಳುತ್ತಿದ್ದವು. ಮಾತ್ರವಲ್ಲದೆ, ಸ್ಕ್ರೀನ್ ಆಫ್ ಆದ ನಂತರ ಡೇಟಾ ಬಳಸುತ್ತಿದ್ದವು ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಗೂಗಲ್ ಬ್ಯಾನ್ ಮಾಡಿರುವ 43 ಅಪ್ಲಿಕೇಶನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಟಿವಿ ಪ್ಲೇಯರ್, ಸಂಗೀತ ಡೌನ್‌ಲೋಡರ್, ಸುದ್ದಿ ಮತ್ತು ಕ್ಯಾಲೆಂಡರ್ ಅಪ್ಲಿಕೇಶನ್‌ಗಳಾಗಿವೆ. ಮೂಲಗಳ ಪ್ರಕಾರ, ಸುಮಾರು 2.5 ಮಿಲಿಯನ್ ಬಳಕೆದಾರರು ಈ ನಿಷೇಧಿತ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದ್ದಾರೆ. 


ಇದನ್ನೂ ಓದಿ- Sim Card New Rules: ಈಗ ಒಂದು ಐಡಿಯಲ್ಲಿ ಇಷ್ಟು ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು


ಹೌದು, ಗೂಗಲ್ ಇದ್ದಕ್ಕಿದ್ದಂತೆ 43 ಅಪ್ಲಿಕೇಶನ್‌ಗಳನ್ನು  ನಿಷೇಧಿಸಿದೆ. ಈ ಅಪ್ಲಿಕೇಶನ್‌ಗಳು ಫೋನ್ ಹಿಂಬದಿಯಿಂದ ಜಾಹೀರಾತುಗಳನ್ನು ಪರದರ್ಶಿಸುತ್ತಿದ್ದವು ಎಂದು ಮ್ಯಾಕ್‌ಅಫೀಯ ಭದ್ರತಾ ತಂಡ ಗುರುತಿಸಿದೆ. ಇದಲ್ಲದೆ, ಗೂಗಲ್ ನಿಷೇಧಿತ ಅಪ್ಲಿಕೇಶನ್‌ಗಳು ನಿಮ್ಮ ಸಾಧನದಲ್ಲೂ ಇದ್ದರೆ ಅವುಗಳನ್ನು ತಕ್ಷಣವೇ ಅನ್ ಇನ್ಸ್ಟಾಲ್ ಮಾಡುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. 
ಇದಲ್ಲದೆ, ಫೋನ್‌ನಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಅಪ್ಲಿಕೇಶನ್‌ಗಳು ಕಂಡು ಬಂದಲ್ಲಿ ಅವುಗಳನ್ನು ಕೂಡ ತಕ್ಷಣವೇ ಅನ್ ಇನ್ಸ್ಟಾಲ್ ಮಾಡುವಂತೆ ಸೂಚಿಸಲಾಗಿದೆ. 


ಇದನ್ನೂ ಓದಿ- ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಏಕೆ ಕಾಣಿಸಿಕೊಳ್ಳುತ್ತೇ ಈ 'ಲಾಕ್' ಐಕಾನ್!


ಲಭ್ಯವಿರುವ ಮಾಹಿತಿಗಳ ಪ್ರಕಾರ, ಗೂಗಲ್ ಪ್ಲೇ ಡೆವಲಪರ್ ನೀತಿಗೆ ವಿರುದ್ಧವಾಗಿ, ಗೂಗಲ್ ನಿಯಮಗಳನ್ನು ಉಲ್ಲಂಘಿಸಿದ್ದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ಈ ಅಪ್ಲಿಕೇಶನ್‌ಗಳಲ್ಲಿ  ನಿಷೇಧದ ನಂತರವೂ, ಕೆಲವು ಡೆವಲಪರ್‌ಗಳು ಬಳಕೆದಾರರ ಒಪ್ಪಿಗೆಯಿಲ್ಲದೆ ಜಾಹೀರಾತು ಕ್ಲಿಕ್‌ಗಳನ್ನು ರಚಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.