ನಿಮ್ಮ ಫೋನಿಗೂ ಪದೇ ಪದೇ ಬರುತ್ತಿದೆಯೇ Emergency Alert!ಇದರ ಹಿಂದಿನ ಕಾರಣ ತಿಳಿದುಕೊಳ್ಳಿ

Emergency Alert Message:ಎಮರ್ಜೆನ್ಸಿ ಅಲರ್ಟ್  ಹೆಸರಿನಲ್ಲಿ ಜನರಿಗೆ ಸಂದೇಶ ಕಳುಹಿಸಲಾಗಿದೆ. ಸಂದೇಶ ಬಂದ ಸಮಯದಲ್ಲಿ, ಫೋನ್‌ನಲ್ಲಿ ಬಹಳ ಜೋರಾಗಿ ಧ್ವನಿ ಕೇಳಿ ಬಂದಿದೆ.

Written by - Ranjitha R K | Last Updated : Aug 18, 2023, 12:30 PM IST
  • ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಎಷ್ಟು ಹೊತ್ತಿಗೆ ಬಂತು?
  • ಏನಿದರ ಹಿಂದಿನ ಉದ್ದೇಶ
  • ಮೆಸೇಜ್ ಬಂದರೆ ಏನು ಮಾಡುವುದು ?
ನಿಮ್ಮ ಫೋನಿಗೂ ಪದೇ ಪದೇ ಬರುತ್ತಿದೆಯೇ Emergency Alert!ಇದರ ಹಿಂದಿನ ಕಾರಣ ತಿಳಿದುಕೊಳ್ಳಿ  title=

Emergency Alert Message : ಭಾರತ ಸರ್ಕಾರವು ತುರ್ತು ಎಚ್ಚರಿಕೆ ವ್ಯವಸ್ಥೆಯ  ( Emergency Alert System)ಟೆಸ್ಟಿಂಗ್ ನಡೆಸುತ್ತಿದೆ. ಈ ಟೆಸ್ಟ್ ನಡೆಸುತ್ತಿರುವಾಗ ಅನೇಕ ಬಳಕೆದಾರರ ಫೋನ್‌ ಗೆ ಸಂದೇಶ ಬಂದಿದೆ. ಎಮರ್ಜೆನ್ಸಿ ಅಲರ್ಟ್  ಹೆಸರಿನಲ್ಲಿ ಜನರಿಗೆ ಸಂದೇಶ ಕಳುಹಿಸಲಾಗಿದೆ. ಸಂದೇಶ ಬಂದ ಸಮಯದಲ್ಲಿ, ಫೋನ್‌ನಲ್ಲಿ ಬಹಳ ಜೋರಾಗಿ ಧ್ವನಿ ಕೇಳಿ ಬಂದಿದೆ.  ಹೀಗೆ ಬಂದಿರುವ ಮೆಸೇಜ್ Emergency Alertನದ್ದಾಗಿತ್ತು. ಈ ಮೆಸೇಜ್   Severe ಫ್ಲ್ಯಾಷ್‌ನೊಂದಿಗೆ ಬಂದಿದೆ. ಇದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಿದ್ಧಪಡಿಸುತ್ತಿದೆ. ತುರ್ತು ಸಮಯದಲ್ಲಿ ಎಚ್ಚರಿಕೆಗಳನ್ನು ಕಳುಹಿಸಲು ಈ ಸಂದೇಶಗಳನ್ನು ಬಳಸಲಾಗುತ್ತದೆ. 

ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಎಷ್ಟು ಹೊತ್ತಿಗೆ ಬಂತು? : 
ಸಿಸ್ಟಂ ಅನ್ನು ಟೆಸ್ಟ್ ಮಾಡಲು ಸರ್ಕಾರವು ಜಿಯೋ ಮತ್ತು ಬಿಎಸ್ಎನ್ಎಲ್ ಬಳಕೆದಾರರಿಗೆ ನಿನ್ನೆ ಮಧ್ಯಾಹ್ನ 1.30 ಕ್ಕೆ ಸಂದೇಶವನ್ನು ಕಳುಹಿಸಿದೆ. ಈ ಸಂದೇಶವನ್ನು ಸಿ-ಡಾಟ್ ಮೂಲಕ ಕಳುಹಿಸಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಮತ್ತೊಂದು ಸಂದೇಶವನ್ನು ಕಳುಹಿಸಲಾಗಿದ್ದು, ಇದು ಕೇವಲ ಟೆಸ್ಟಿಂಗ್ ಮೆಸ್ಸೇಜ್ ಎಂದು ಜನರಿಗೆ ತಿಳಿಸಲಾಗಿದೆ. ಸಿ-ಡಾಟ್ ಪ್ರಕಾರ, ವಿವಿಧ ಸ್ಥಳಗಳಲ್ಲಿ ಇದೇ ರೀತಿಯ ಪರೀಕ್ಷೆಯನ್ನು ಮಾಡಲಾಗುತ್ತದೆ. 

ಇದನ್ನೂ ಓದಿ : Sim Card New Rules: ಈಗ ಒಂದು ಐಡಿಯಲ್ಲಿ ಇಷ್ಟು ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು

ಎಮೆರ್ಜೆನ್ಸಿ ಅಲರ್ಟ್ ಸಿಸ್ಟಮ್ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ನ ಸಾಮರ್ಥ್ಯಗಳು ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ಉದ್ದೇಶವಾಗಿದೆ. ಸಿ-ಡಾಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಜ್‌ಕುಮಾರ್ ಉಪಾಧ್ಯಾಯ ಮಾತನಾಡಿ, ಪ್ರಸ್ತುತ ಈ ತಂತ್ರಜ್ಞಾನವನ್ನು ವಿದೇಶಿ ಮಾರಾಟಗಾರರು ಒದಗಿಸುತ್ತಿದ್ದಾರೆ. ಆದ್ದರಿಂದ ಸಿ-ಡಾಟ್ ಈ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದ್ದಾರೆ.  

ರಾಜ್‌ಕುಮಾರ್ ಉಪಾಧ್ಯಾಯ ಅವರು 'ಸೆಲ್ ಬ್ರಾಡ್‌ಕಾಸ್ಟಿಂಗ್ ಟೆಕ್ನಾಲಜಿ'ಯ ಕೆಲಸವು ಪ್ರಸ್ತುತ ನಡೆಯುತ್ತಿದೆ. ಇದನ್ನು 'ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ' (ಎನ್‌ಡಿಎಂಎ) ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು. ಈ ತಂತ್ರಜ್ಞಾನವನ್ನು ಪ್ರಸ್ತುತ Jio ಮತ್ತು BSNL ನಲ್ಲಿ ಪರೀಕ್ಷಿಸಲಾಗುತ್ತಿದೆ. 

ಈ ಸಂದೇಶದ ಹಲವು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಂದಿರುವ ಸಂದೇಶದಲ್ಲಿ, 'ಇದು ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದನ್ನು ಭಾರತ ಸರ್ಕಾರ ಕಳುಹಿಸಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಕೇವಲ ಟೆಸ್ಟಿಂಗ್ ಉದ್ದೇಶದಿಂದ ಮಾತ್ರ ಇದನ್ನೂ ಕಳುಹಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

ಇದನ್ನೂ ಓದಿ : ನಿಮ್ಮ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕಿದ್ದೀರಾ ? ಹಾಗಿದ್ದರೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News