India Digitization Fund: ಗೂಗಲ್ ತನ್ನ ರೂ 75,000 ಕೋಟಿ 'ಇಂಡಿಯಾ ಡಿಜಿಟೈಸೇಶನ್ ಫಂಡ್' ಮೂಲಕ ಮಹಿಳೆಯರ ನೇತೃತ್ವದ ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ತೋರಲಿದೆ. ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಇಂಟರ್ನೆಟ್‌ಗೆ ಕೈಗೆಟುಕುವ ಪ್ರವೇಶವನ್ನು ಒದಗಿಸಲು, ಕಂಪನಿಯು $ 10 ಶತಕೋಟಿ (ಸುಮಾರು ರೂ 75,000 ಕೋಟಿ) 'ಇಂಡಿಯಾ ಡಿಜಿಟೈಸೇಶನ್ ಫಂಡ್ (IDF)' ಅನ್ನು ಪ್ರಾರಂಭಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ


4.5 ಬಿಲಿಯನ್ ಡಾಲರ್‌ಗೆ ಜಿಯೋದಲ್ಲಿ  ಪಾಲು ಖರೀದಿಸಿದ ಗೂಗಲ್
ಗೂಗಲ್ ಐಡಿಎಫ್ ಮೂಲಕ, ಕಂಪನಿಯು ಜಿಯೋದಲ್ಲಿ ಶೇ. 7.73 ರಷ್ಟು ಪಾಲನ್ನು $ 4.5 ಶತಕೋಟಿಗೆ ಮತ್ತು ಭಾರ್ತಿ ಏರ್‌ಟೆಲ್‌ನಲ್ಲಿ ಶೇ.1.2 ಶೇಕಡಾ ಪಾಲನ್ನು $ 700 ಮಿಲಿಯನ್‌ಗೆ ಖರೀದಿಸಿದೆ ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿರುವ ಅಧಿಕಾರಿ,  ನಮ್ಮ IDF ಹೂಡಿಕೆಯ ಭಾಗವಾಗಿ, ನಾವು ಆರಂಭಿಕ ಹಂತದ ಕಂಪನಿಗಳನ್ನು ಬೆಂಬಲಿಸಲಿದ್ದೇವೆ, ಇವುಗಳಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳ ಮೇಲೆ ವಿಶೇಷ ಗಮನ ಹರಿಸುತ್ತೇವೆ ಎಂದು 'Google ಫಾರ್ ಇಂಡಿಯಾ' ಈವೆಂಟ್‌ನಲ್ಲಿ Google ಇಂಡಿಯಾದ ಕಂಟ್ರಿ ಮ್ಯಾನೇಜರ್ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ ಹೇಳಿದ್ದಾರೆ. 


ಇದನ್ನೂ ಓದಿ-Google Search Trends: ವರ್ಷ 2022ರಲ್ಲಿ ಗೂಗಲ್ನಲ್ಲಿ 'ಲೈಂಗಿಕತೆ'ಯ ಕುರಿತು ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಯಾವುದು ಗೊತ್ತಾ?


ಕಂಪನಿಯು ಸ್ಪೀಚ್ ತಂತ್ರಜ್ಞಾನ, ಧ್ವನಿ ಮತ್ತು ವೀಡಿಯೊ ಹುಡುಕಾಟದಂತಹ ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಹಲವಾರು ಯೋಜನೆಗಳನ್ನು ಘೋಷಿಸಿದೆ. 'ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಬರೆದ ವಿಷಯವನ್ನು ತಕ್ಷಣವೇ ವೀಡಿಯೊವಾಗಿ ಪರಿವರ್ತಿಸಬಹುದು, ಇಂಗ್ಲಿಷ್‌ನಿಂದ ಯಾವುದೇ ಭಾಷೆಗೆ ಅನುವಾದವೂ ಸಾಧ್ಯವಾಗುತ್ತದೆ' ಎಂದು ಗುಪ್ತಾ ಹೇಳಿದ್ದಾರೆ. ಕಂಪನಿಯು ಭಾರತದ 773 ಜಿಲ್ಲೆಗಳಿಂದ ಸ್ಪೀಚ್ ಡೇಟಾವನ್ನು ಸಂಗ್ರಹಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಯೋಗವನ್ನು ಕೋರಿದೆ. ಈ ಡೇಟಾದ ಸಹಾಯದಿಂದ, ಕಂಪನಿಯು ತನ್ನ ಭಾಷಾ ಅನುವಾದ ಮತ್ತು ಹುಡುಕಾಟ ತಂತ್ರಜ್ಞಾನವನ್ನು ಸುಧಾರಿಸಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.