Google Search Trends: ವರ್ಷ 2022ರಲ್ಲಿ ಗೂಗಲ್ನಲ್ಲಿ 'ಲೈಂಗಿಕತೆ'ಯ ಕುರಿತು ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಯಾವುದು ಗೊತ್ತಾ?

Google Search Trends 2022: ವರದಿಯೊಂದರ ಪ್ರಕಾರ, ಶ್ರೀಲಂಕಾದಂತಹ ಸಣ್ಣ ದೇಶವು ಗೂಗಲ್‌ನಲ್ಲಿ ಲೈಂಗಿಕತೆ ಹುಡುಕಾಟದಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳನ್ನು ಹಿಂದಿಕ್ಕಿದೆ.  

Written by - Nitin Tabib | Last Updated : Dec 17, 2022, 06:51 PM IST
  • 2019 ಮತ್ತು 2020 ವರ್ಷಗಳಲ್ಲಿ, ಇಥಿಯೋಪಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
  • ಇದೀಗ ಶ್ರೀಲಂಕಾ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಆಗ್ರ ಸ್ಥಾನಕ್ಕೇರಿದೆ.
  • ಕೇವಲ 2.21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ಭಾರತ ಮತ್ತು ಚೀನಾದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳನ್ನು ಹಿಂದಿಕ್ಕಿದೆ.
Google Search Trends: ವರ್ಷ 2022ರಲ್ಲಿ ಗೂಗಲ್ನಲ್ಲಿ 'ಲೈಂಗಿಕತೆ'ಯ ಕುರಿತು ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಯಾವುದು ಗೊತ್ತಾ? title=
Google Search Trends 2022

Year Ender 2022: 2022 ನೇ ವರ್ಷ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ವರ್ಷ ಮುಗಿಯುತ್ತಿದ್ದಂತೆ ಇಡೀ ವರ್ಷದ ಲೆಕ್ಕಾಚಾರವೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಹೀದಿರುವಾಗ ಈ ಡಿಜಿಟಲ್ ಪ್ರಪಂಚದಲ್ಲಿ, ವಿಶ್ವಾದ್ಯಂತ ಕಳೆದ ವರ್ಷದಲ್ಲಿ  ಜನರು ಗೂಗಲ್‌ನಲ್ಲಿ ಏನನ್ನು ಹೆಚ್ಚು ಹುಡುಕಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗುತ್ತದೆ. ಇದರಲ್ಲಿ 'ಸೆಕ್ಸ್' ಎಂಬ ಪದವನ್ನು ವಿಶ್ವದ ಅತಿದೊಡ್ಡ ಗಮನ ಸೆಳೆಯುವ ಪದ ಎಂದು ಕರೆದರೆ ಅದು ತಪ್ಪಾಗಲಾರದು. ವಿಶ್ವಾದ್ಯಂತ ವರ್ಷದ 12 ತಿಂಗಳುಗಳ ಕಾಲ ಈ ಪದವನ್ನು ತೀವ್ರವಾಗಿ ಹುಡುಕಾಟಕ್ಕೆ ಒಳಗಾಗಿದೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಈ ಕುರಿತು ವರದಿಯೊಂದು ಬಹಿರಂಗಗೊಂಡಿದ್ದು, 2022 ರಲ್ಲಿ ಯಾವ ದೇಶದ ಜನರು ಸೆಕ್ಸ್ ಎಂಬ ಪದವನ್ನು ಹೆಚ್ಚು ಹುಡುಕಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ-Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?

ಡೈಲಿ ಮಿರರ್‌ನ ವರದಿಯ ಪ್ರಕಾರ, ಶ್ರೀಲಂಕಾದ ಜನರು ಸೆಕ್ಸ್ ಎಂಬ ಪದವನ್ನು ಅತಿ ಹೆಚ್ಚು ಹುಡುಕಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 2019 ಮತ್ತು 2020 ವರ್ಷಗಳಲ್ಲಿ, ಇಥಿಯೋಪಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಇದೀಗ ಶ್ರೀಲಂಕಾ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಆಗ್ರ ಸ್ಥಾನಕ್ಕೇರಿದೆ. ಕೇವಲ 2.21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ಭಾರತ ಮತ್ತು ಚೀನಾದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳನ್ನು ಹಿಂದಿಕ್ಕಿದೆ. ಶ್ರೀಲಂಕಾದ ತಮಿಳು ಪ್ರಾಂತ್ಯವು ಲೈಂಗಿಕ ಹುಡುಕಾಟದಲ್ಲಿ ಮುಂಚೂಣಿಯಲ್ಲಿದೆ.

ಇದನ್ನೂ ಓದಿ-ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧ : ವಿಡಿಯೋ ವೈರಲ್‌..!

ಸಣ್ಣ ದೇಶಗಳಲ್ಲಿ ಲೈಂಗಿಕತೆಯ ಕುರಿತು ಸಾಕಷ್ಟು ಹುಡುಕಾಟ ನಡೆದಿದೆ
ಶ್ರೀಲಂಕಾ ನಂತರ ಎರಡನೇ ಸ್ಥಾನದಲಿ ವಿಯೆಟ್ನಾಂ ಇದ್ದರೆ, ಬಾಂಗ್ಲಾದೇಶ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡೈಲಿ ಮಿರರ್ ವರದಿಯ ಪ್ರಕಾರ, 2022 ರಲ್ಲಿ, ಸಣ್ಣ ದೇಶಗಳಲ್ಲಿ ಸೆಕ್ಸ್ ಹಬ್‌ಗಳನ್ನು ಹೆಚ್ಚು ಹುಡುಕಲಾಗಿದೆ. ಈ ವರದಿಯ ಪ್ರಕಾರ, ಸೆಕ್ಸ್ ಪದವನ್ನು ಹುಡುಕುವ ದೇಶಗಳ ಶ್ರೇಯಾಂಕದಲ್ಲಿ ಭಾರತಕ್ಕೆ ಯಾವುದೇ ಸ್ಥಾನವಿಲ್ಲ. ಇದು ಆಶ್ಚರ್ಯಕರವಾಗಿದೆ ಏಕೆಂದರೆ ಭಾರತದ ಜನಸಂಖ್ಯೆಯು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 60-70 ಕೋಟಿಗೂ ಹೆಚ್ಚಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News