ನವದೆಹಲಿ:  Google TV - ಗೂಗಲ್ ಒಂದು ವೇದಿಕೆಯ ರೂಪದಲ್ಲಿ ಯಾರಿಗೂ ತಿಳಿದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹೆಂದೆ ಗೂಗಲ್ ತನ್ನ ಅಂಡ್ರಾಯಿಡ್ ಟಿವಿ ವೇದಿಕೆ Google TV ಆರಂಭಿಸಿತ್ತು ಮತ್ತು ಅದು Cromecast ಹಾಗೂ SmartTV ಜೊತೆ ಸೇರಿ ಕಾರ್ಯನಿರ್ವಹಿಸುತ್ತದೆ. ಆದರೆ, ಇತ್ತೀಚಿಗೆ ಪ್ರಕಟವಾದ ಒಂದು ವರದಿಯ ಪ್ರಕಾರ Google TV ಮೂಲಕ ಗೂಗಲ್ ತನ್ನ ಉಚಿತ ಚಾನೆಲ್ ಗಳನ್ನು ಆರಂಭಿಸಲಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಶೀಘ್ರದಲ್ಲಿ ಗೂಗಲ್ ತನ್ನ ಉಚಿತ ಚಾನೆಲ್ ಗಳನ್ನು ಬಿಡುಗಡೆ ಮಾಡಲಿದೆ
Protocol ನಲ್ಲಿ ಪ್ರಕಟಗೊಂಡ  ವರದಿಯ ಪ್ರಕಾರ, ಶೀಘ್ರದಲ್ಲೇ ಬಳಕೆದಾರರು  ಗೂಗಲ್ ಟಿವಿಯಲ್ಲಿ Google ನ ಚಾನೆಲ್ ಗಳನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ ಮತ್ತು ಈ ಚಾನೆಲ್ ಗಳನ್ನು ಉಚಿತವಾಗಿ ವಿಕ್ಷೀಸಬಹುದಾಗಿದೆ. ಇದಕ್ಕಾಗಿ, ಗೂಗಲ್ ಟಿವಿಯ ಬಳಕೆದಾರರು ವಿಶೇಷ ಲೈವ್ ಟಿವಿ ಮೆನುವನ್ನು ಪಡೆಯಲಿದ್ದಾರೆ. ಇದರಿಂದ ಅವರು ಅನೇಕ ಚಾನೆಲ್‌ಗಳಿಂದ ತಮ್ಮ ಆಯ್ಕೆಯ ಚಾನಲ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಇತರ ಹೊಂದಾಣಿಕೆಯ ಸ್ಮಾರ್ಟ್ ಟಿವಿಗಳಲ್ಲಿ, ಈ ಚಾನೆಲ್‌ಗಳು ಓವರ್ ದಿ ಏರ್ ಪ್ರೊಗ್ರಾಮಿಂಗ್ ಮೂಲಕ ಆಯ್ಕೆ ಮಾಡಬಹುದಾಗಿದ್ದು, ಇಲ್ಲಿ ಕೇವಲ ಒಂದು ಆಂಟಿನಾ ಮೂಲಕ ಮಾತ್ರ ಆಯ್ಕೆ ಮಾಡಬಹುದಾಗಿದೆ.


ಈ ಚಾನೆಲ್ ಗಳು ಯಾವಾಗ ಬರಲಿವೆ?
ಪ್ರೋಟೋಕಾಲ್ ವರದಿಯ ಪ್ರಕಾರ, ಮುಂಬರುವ ವಾರ ಅಥವಾ ತಿಂಗಳಿನಲ್ಲಿ ಗೂಗಲ್ ತನ್ನ ಈ ಯೋಜನೆಯ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಬಳಕೆದಾರರು ಈ ಚಾನೆಲ್ ಗಳನ್ನು ಮುಂದಿನ ವರ್ಷವೇ ನೋಡಲು ಸಾಧ್ಯವಿದೆ ಎಂಬ ಅನುಮಾನಗಳೂ ಕೂಡ ವ್ಯಕ್ತವಾಗುತ್ತಿದ್ದು, ಅಲ್ಲಿಯವರೆಗೆ ಕಂಪನಿ ತನ್ನೆಲ್ಲಾ ಸ್ಮಾರ್ಟ್ ಟಿವಿ ಪಾರ್ಟ್ನರ್ ಗಳ ಜೊತೆಗೆ ಮಾತುಕತೆ ಪೂರ್ಣಗೊಳಿಸಲಿದೆ ಎನ್ನಲಾಗಿದೆ.


ಇದನ್ನೂ ಓದಿ-ಅದ್ಬುತ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ಈ ಸ್ಮಾರ್ಟ್ ಪೋನ್, ಇತರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ


ಈ ರೀತಿ ಸಂಭವಿಸುತ್ತಿರುವುದು ಇದೆ ಮೊದಲಲ್ಲ
ಉಚಿತ ಸ್ಟ್ರೀಮಿಂಗ್ ಟಿವಿ ಚಾನೆಲ್‌ಗಳನ್ನು ತರುವ ಮೊದಲ ವೇದಿಕೆ ಗೂಗಲ್ (Google) ಅಲ್ಲ ಎಂಬುದು ಇಲ್ಲಿ ಗಮನಾರ್ಹ. ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್ RokuTV ಅಂತಹ ಒಂದು ಪ್ಲಾಟ್‌ಫಾರ್ಮ್ ಆಗಿದ್ದು, ಅದು ಈಗಾಗಲೇ ಬಳಕೆದಾರರಿಗೆ 200 ಕ್ಕೂ ಹೆಚ್ಚು ಉಚಿತ ಚಾನೆಲ್‌ಗಳು ಮತ್ತು 10 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ನೀಡುತ್ತಿದೆ.


ಇದನ್ನೂ ಓದಿ-Xiaomi ನೀಡುತ್ತಿದೆ ಬಂಪರ್ ಅವಕಾಶ, ಈ ಅದ್ಭುತ 5G ಫೋನ್ ಅನ್ನು 499ರೂ.ಗೆ ಖರೀದಿಸಬಹುದು


ಗೂಗಲ್ ನ ಈ ಹೊಸ ಹೆಜ್ಜೆಗಾಗಿ ಗ್ರಾಹಕರು ತುಂಬಾ ಕಾತರರಾಗಿದ್ದಾರೆ. ಗೂಗಲ್ ನ ಈ ಹೊಸ ವೇದಿಕೆಯಿಂದ ತಮಗೆ ಉತ್ತಮ ಕಂಟೆಂಟ್ ನೋಡಲು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.


ಇದನ್ನೂ ಓದಿ-BSNL ಗ್ರಾಹಕರಿಗೆ ಸಿಹಿ ಸುದ್ದಿ : ಈ ಪ್ಲಾನ್ ನಿಂದ ಸಿಗಲಿದೆ 1 ವರ್ಷದವರೆಗೆ ಪ್ರತಿದಿನ 2GB ಡೇಟಾ ಮತ್ತೆ ಅನಿಯಮಿತ ಕರೆ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.