ಅದ್ಬುತ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ಈ ಸ್ಮಾರ್ಟ್ ಪೋನ್, ಇತರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

IQOO Z5, 5,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯ ಪ್ರಕಾರ, ಒಮ್ಮೆ ಚಾರ್ಜ್ ಮಾಡಿದ ಫೋನ್ ನಲ್ಲಿ ಬಳಕೆದಾರರು 96 ಗಂಟೆಗಳ ಕಾಲ ಹಾಡುಗಳನ್ನು ಆಲಿಸಬಹುದು.

Written by - Ranjitha R K | Last Updated : Sep 17, 2021, 06:56 PM IST
  • ಮಾರುಕಟ್ಟೆಗೆ ಬರುತ್ತಿದೆ iQOO Z5 ಸ್ಮಾರ್ಟ್ ಪೋನ್
  • 5,000mAh ನ ಅದ್ಬುತ ಬ್ಯಾಟರಿಯನ್ನು ಒಳಗೊಂಡಿದೆ
  • ಶೀಘ್ರವೇ ಫೋನಿನ ಬೆಲೆ ಬಹಿರಂಗವಾಗಲಿದೆ
ಅದ್ಬುತ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ಈ ಸ್ಮಾರ್ಟ್ ಪೋನ್, ಇತರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

ನವದೆಹಲಿ : ಸ್ಮಾರ್ಟ್‌ಫೋನ್‌ಗಳನ್ನು (Smartphone) ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳಲ್ಲಿ ಫೋನ್‌ನ ಬ್ಯಾಟರಿ ಕೂಡಾ ಒಂದು. iQOO ತನ್ನ ಮುಂಬರುವ ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು (Smartphone features) ಇತ್ತೀಚೆಗೆ ಬಹಿರಂಗಪಡಿಸಿದೆ. iQOO ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್ ಫೋನ್, iQOO Z5 ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಫೋನ್ ಅದ್ಭುತ ಬ್ಯಾಟರಿಯನ್ನು ಹೊಂದಿದೆ. ಅದರ ಎಲ್ಲಾ ವೈಶಿಷ್ಟ್ಯಗಳೇನು ನೋಡೋಣ. 

ಬ್ಯಾಟರಿ : 
IQOO Z5, 5,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯ ಪ್ರಕಾರ, ಒಮ್ಮೆ ಚಾರ್ಜ್ ಮಾಡಿದ ಫೋನ್ ನಲ್ಲಿ ಬಳಕೆದಾರರು 96 ಗಂಟೆಗಳ ಕಾಲ ಹಾಡುಗಳನ್ನು ಆಲಿಸಬಹುದು. 18.3 ಗಂಟೆಗಳ ಕಾಲ ವೀಡಿಯೊಗಳನ್ನು ಪ್ಲೇ (video play) ಮಾಡಬಹುದು ಮತ್ತು 10.4 ಗಂಟೆಗಳ ಕಾಲ ಈ ಸ್ಮಾರ್ಟ್‌ಫೋನ್‌ನ ಒಂದೇ ಚಾರ್ಜ್‌ನಲ್ಲಿ ಗೇಮಿಂಗ್ ಮಾಡಬಹುದು. ಇದು ಮಾತ್ರವಲ್ಲ, ಈ ಸ್ಮಾರ್ಟ್‌ಫೋನ್‌ನ 3C ಪ್ರಮಾಣೀಕರಣವು 5,000mAh ಬ್ಯಾಟರಿಯೊಂದಿಗೆ 44W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. 

ಇದನ್ನೂ ಓದಿ : Xiaomi ನೀಡುತ್ತಿದೆ ಬಂಪರ್ ಅವಕಾಶ, ಈ ಅದ್ಭುತ 5G ಫೋನ್ ಅನ್ನು 499ರೂ.ಗೆ ಖರೀದಿಸಬಹುದು

ಡಿಸ್ಪೇ :
IQOO Z5 ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶರೇಟ್ ನೊಂದಿಗೆ, ಟಚ್-ಸ್ಯಾಂಪ್ಲಿಂಗ್ ರೇಟ್ 240Hz, DCI-P3 ಕಲರ್ ಗೈಮೆಟ್ ಮತ್ತು HDR10 ಅನ್ನು ಒಳಗೊಂಡಿದೆ.  ಮೂಲಗಳ ಪ್ರಕಾರ, ಈ ಸ್ಮಾರ್ಟ್‌ಫೋನ್ (Smartphone) ಎಲ್‌ಸಿಡಿ ಪ್ಯಾನಲ್ ಅನ್ನು ಹೊಂದಿರುವ ಸಾಧ್ಯತೆ ಇದೆ.  

ಕ್ಯಾಮೆರಾ ಮತ್ತು ಸ್ಪೀಕರ್ :
ಆಂಡ್ರಾಯ್ಡ್ 11 OS ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫೋನ್ ಟ್ರಿಪಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಇದರ ಮುಖ್ಯ ಸೆನ್ಸಾರ್ 64MP ಆಗಿದ್ದು, 16MPಯ ಫ್ರಂಟ್  ಕ್ಯಾಮರಾ  ಇರಲಿದೆ. IQOO Z5 ನ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು ಹೈ-ರೆಸ್ ಆಡಿಯೋ ಮತ್ತು ಹೈ-ರೆಸ್ ಆಡಿಯೋ ವೈರ್‌ಲೆಸ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB/256GB  ಸ್ಟೋರೇಜ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ. 

ಇದನ್ನೂ ಓದಿ : BSNL ಗ್ರಾಹಕರಿಗೆ ಸಿಹಿ ಸುದ್ದಿ : ಈ ಪ್ಲಾನ್ ನಿಂದ ಸಿಗಲಿದೆ 1 ವರ್ಷದವರೆಗೆ ಪ್ರತಿದಿನ 2GB ಡೇಟಾ ಮತ್ತೆ ಅನಿಯಮಿತ ಕರೆ

ಇಲ್ಲಿಯವರೆಗೆ, ಈ ಪೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ,  ಆದರೆ ಶೀಘ್ರದಲ್ಲೇ ಈ ಸ್ಮಾರ್ಟ್‌ಫೋನ್  ಸೆಪ್ಟೆಂಬರ್‌ 24ರಂದು, ಬಿಡಗಡೆಯಾಗಲಿದೆ.  ಬೆಲೆಯು ಕೂಡಾ ಶೀಘ್ರವೇ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News