ಬೆಂಗಳೂರು : Hero MotoCorp ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ನೀಡುವ ಬೈಕ್‌ಗಳನ್ನು ತಯಾರಿಸುವಲ್ಲಿ ಜನಪ್ರಿಯವಾಗಿದೆ. ಈ ಕಂಪನಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ ಗೆ ಟಕ್ಕರ್ ನೀಡುವಂಥಹ ಆಫ್ ರೋಡಿಂಗ್ ಬೈಕ್‌ಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸಿದೆ. ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ತನ್ನ ಹೀರೋ ಎಕ್ಸ್‌ಪಲ್ಸ್ ಸರಣಿಯ ಮೂಲಕ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ. ಈ ಸೀರೀಸ್ ಅಡಿಯಲ್ಲಿ Xpulse 200 2V, 200 4V ಎಂಬ ಎರಡು ವೆರಿಯೇಂಟ್ ಗಳು  ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಇದೀಗ ಈ ಪೈಕಿ ಒಂದರ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ. 


COMMERCIAL BREAK
SCROLL TO CONTINUE READING

 ಸ್ಥಗಿತದ ಹಿಂದಿರುವ ಕಾರಣ : 
Xpulse 200 2V ಬೈಕ್ ಈಗ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸುತ್ತಿಲ್ಲ.  Xpulse 200 4Vಯನ್ನು ಮಾರುಕಟ್ಟೆಗೆ ಪರಿಚಯಿಸಿದ ನಂತರ   2V ಮಾದರಿ ಸ್ಥಗಿತವಾಗಲಿದೆ ಎಂದೇ ಹೇಳಲಾಗಿತ್ತು. ಆದರೆ ಹಾಗಾಗಿರಲಿಲ್ಲ. 200 4Vಗೆ ಹೋಲಿಸಿದರೆ   Xpulse 200 2V ಬೆಲೆ 10,000 ರೂಪಾಯಿಗಳಷ್ಟು ಅಗ್ಗ. Xpulse 200 2Vಯ ಬೆಲೆ  1.27 ಲಕ್ಷ ರೂ.  ಆಗಿದ್ದರೆ  200 4V ಬೆಲೆ ರೂ. 1.37 ಲಕ್ಷ .


ಇದನ್ನೂ ಓದಿ : Happy New Year 2023: ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು


Hero Xpulse 200 199.6cc, ಸಿಂಗಲ್-ಸಿಲಿಂಡರ್, ಏರ್/ಆಯಿಲ್-ಕೂಲ್ಡ್, ಎರಡು-ವಾಲ್ವ್ ಎಂಜಿನ್ ನೊಂದಿಗೆ ಬರುತ್ತಿತ್ತು.  ಈ ಎಂಜಿನ್ 17.8bhp ಪವರ್ ಮತ್ತು 16.45Nm ಟಾರ್ಕ್ ಅನ್ನು  ಜನರೇಟ್ ಮಾಡುತ್ತದೆ. ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿತ್ತು. 


ಇದು 21-ಇಂಚಿನ ಫ್ರಂಟ್ ಮತ್ತು 18-ಇಂಚಿನ  ರಿಯರ್ ವ್ಹೀಲ್  ಅನ್ನು ಹೊಂದಿದೆ. ಇದನ್ನು ಆಫ್-ರೋಡಿಂಗ್ ಗೆ ಸರಿ ಹೊಂದುವಂತೆ ಮಾಡಲು,  ಹೆಚ್ಚಿನ ಹ್ಯಾಂಡಲ್‌ಬಾರ್, ಸಿಂಗಲ್ ಪೀಸ್ ಸೀಟ್, ಎಕ್ಸಾಸ್ಟ್ ಮತ್ತು 14-ಲೀಟರ್ ಇಂಧನ ಟ್ಯಾಂಕ್ ಅನ್ನು ನೀಡಲಾಗಿದೆ. ಬೈಕ್ ‌ನ ಸೀಟ್ ಎತ್ತರ 823 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಆಗಿದೆ.  ಎರಡೂ  ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಅನ್ನು  ನೀಡಲಾಗಿದೆ. 


ಇದನ್ನೂ ಓದಿ : Good News: ಏಪ್ರಿಲ್ ನಿಂದ ಭಾರತದಲ್ಲಿಯೇ ತಯಾರಾಗಲಿದೆ ಸರ್ವೈಕಲ್ ಕ್ಯಾನ್ಸರ್ ವಿರೋಧಿ ಈ ಲಸಿಕೆ


ಇದರ ಡಿಜಿಟಲ್ ಡಿಸ್ಪ್ಲೇ ಕಾಲ್ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಇಕೋ ಮೋಡ್ ಮತ್ತು ಡ್ಯುಯಲ್ ಟ್ರಿಪ್ ಮೀಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿತ್ತು. ಮೋಟಾರ್‌ಸೈಕಲ್ ನ್ಯಾವಿಗೇಷನ್ ಮತ್ತು ಕಾಲ್ ಅಲರ್ಟ್ ಗೆ ಬ್ಲೂಟೂತ್ ಸಂಪರ್ಕ, ಪೂರ್ಣ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.  ಈ ಬೈಕ್ ನ ಬೈಕ್‌ನ ತೂಕ 157ಕೆ.ಜಿ ಯಷ್ಟಿತ್ತು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.