Good News: ಏಪ್ರಿಲ್ ನಿಂದ ಭಾರತದಲ್ಲಿಯೇ ತಯಾರಾಗಲಿದೆ ಸರ್ವೈಕಲ್ ಕ್ಯಾನ್ಸರ್ ವಿರೋಧಿ ಈ ಲಸಿಕೆ

CERVAVAC vaccine: ಗರ್ಭಕಂಠದ ಕ್ಯಾನ್ಸರ್ ಭಾರತೀಯ ಮಹಿಳೆಯರ ಸಾವಿನ ಎರಡನೇ ಪ್ರಮುಖ ಕಾರಣವಾಗಿದೆ. ಈ ಕ್ಯಾನ್ಸರ್ ನಿಂದಾಗಿ ವಿಶ್ವಾದ್ಯಂತದ ಶೇ.25ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತಿವೆ.  

Written by - Nitin Tabib | Last Updated : Dec 13, 2022, 10:42 PM IST
  • ಭಾರತದಲ್ಲಿ ಎರಡು ಅಥವಾ ಮೂರು ಕಂಪನಿಗಳು ಗರ್ಭಕಂಠದ ಕ್ಯಾನ್ಸರ್
  • ವಿರುದ್ಧ ಲಸಿಕೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿವೆ ಎಂದು ಡಾ. ಅರೋರಾ ಹೇಳಿದ್ದಾರೆ,
  • ಆದರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅವುಗಳಲ್ಲಿ ಮುಂಚೂಣಿಯಲ್ಲಿದೆ.
Good News: ಏಪ್ರಿಲ್ ನಿಂದ ಭಾರತದಲ್ಲಿಯೇ ತಯಾರಾಗಲಿದೆ ಸರ್ವೈಕಲ್ ಕ್ಯಾನ್ಸರ್ ವಿರೋಧಿ ಈ ಲಸಿಕೆ title=
HPV Vaccine

CERVAVAC vaccine: ಭಾರತೀಯ ಮಹಿಳೆಯರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಭಾರತೀಯ ಮಹಿಳೆಯರ ಪ್ರಾಣ ತೆಗೆಯುವ ಕಾಯಿಲೆಗಳ  ಪೈಕಿ ಎರಡನೇ ಸ್ಥಾನದಲ್ಲಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಮುಂದಿನ ವರ್ಷದಿಂದ ಭಾರತದಲ್ಲಿ ತಯಾರಾಗಲಿದೆ. ಹ್ಯೂಮನ್ ಪ್ಯಾಪಿಲೋಮವೈರಸ್ CERVAVAC ಲಸಿಕೆಯನ್ನು ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಿನಿಂದ ಭಾರತದಲ್ಲಿ ತಯಾರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಕೋವಿಡ್ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ. ಎನ್‌ಕೆ ಅರೋರಾ ಮಂಗಳವಾರ ಹೇಳಿದ್ದಾರೆ. ಈ HPV ಲಸಿಕೆ ವೆಚ್ಚವು ದೇಶದಲ್ಲಿರುವ ಅಂತರರಾಷ್ಟ್ರೀಯ ವೈದ್ಯಕೀಯ ಬ್ರಾಂಡ್‌ಗಳ ಲಸಿಕೆಗಿಂತ 1/10 ಪಟ್ಟು ಕಡಿಮೆ ಇರಲಿದೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಬಡವರೂ ಕೂಡ ಈ ಲಸಿಕೆಯ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ. ಕೋವಿಡ್ ಲಸಿಕೆ ಗುಂಪು ಕೇಂದ್ರ ಸರ್ಕಾರದ ಪ್ರತಿರಕ್ಷಣೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಇಮ್ಯುನೈಸೇಶನ್ ಅಥವಾ NTAGI ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು) ಎಂಬುದು ಇಲ್ಲಿ ಗಮನಾರ್ಹ.

ಸೀರಂ ಇನ್‌ಸ್ಟಿಟ್ಯೂಟ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ
ಭಾರತದಲ್ಲಿ ಎರಡು ಅಥವಾ ಮೂರು ಕಂಪನಿಗಳು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿವೆ ಎಂದು ಡಾ. ಅರೋರಾ ಹೇಳಿದ್ದಾರೆ, ಆದರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅವುಗಳಲ್ಲಿ ಮುಂಚೂಣಿಯಲ್ಲಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆಯು ನಿಯಂತ್ರಕ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ ಮತ್ತು ಈ ಲಸಿಕೆಯು 2023 ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಮ್ಮ ರೋಗಿಗಳಿಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-White Hair Problem: ನೈಸರ್ಗಿಕವಾಗಿ ಕೂದಲು ಕಪ್ಪಾಗಿಸಲು ಈ ವಿಧಾನಗಳನ್ನು ಎಂದಿಗೂ ಅನುಸರಿಸಬೇಡಿ

ಗರ್ಭಕಂಠದ ಕ್ಯಾನ್ಸರ್‌ನಿಂದ ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮರಣಗಳು
ಡಾ. ಅರೋರಾ ಪ್ರಕಾರ, ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸುತ್ತವೆ ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ ನಮ್ಮ ದೇಶದಲ್ಲಿ 95 ರಿಂದ 100 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 80,000 ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ.

ಇದನ್ನೂ ಓದಿ-Treatment For Cancer: ಸಿಕ್ಕೆ ಬಿಟ್ತು ಬ್ಲಡ್ ಕ್ಯಾನ್ಸರ್ ಗೆ ಸೂಕ್ತ ಚಿಕಿತ್ಸೆ, ಬ್ರಿಟನ್ ನಲ್ಲಿ 13 ವರ್ಷದ ಬಾಲಕಿಯ ಪ್ರಾಣ ಉಳಿಸಿದ ವೈದ್ಯರು

ಜಾಗತಿಕ ಅಧ್ಯಯನದ ಪ್ರಕಾರ, ವಿಶ್ವದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 25 ರಷ್ಟು ಮಹಿಳೆಯರಾಗಿದ್ದಾರೆ. ಪ್ರತಿ ವರ್ಷ 100,000 ಮಹಿಳೆಯರಲ್ಲಿ 22 ಮಹಿಳೆಯರು ಈ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಇದು ಭಾರತೀಯ ಮಹಿಳೆಯರ ಸಾವಿನ ಎರಡನೇ ಪ್ರಮುಖ ಕಾರಣವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News