ನವದೆಹಲಿ: 2021ನೇ ಸಾಲಿನ ಇಂಡಿಯನ್ ಬೈಕ್ ವೀಕ್ ಪ್ರಯುಕ್ತ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಅನಾವರಣಗೊಳಿಸಿದೆ. ವಿಶೇಷವಾಗಿ ಹೈನೆಸ್ CB350 ಮಾದರಿಯ ಆ್ಯನಿವರ್ಸರಿ ಆವೃತ್ತಿಯ ಬೈಕ್(Honda H'ness CB350 Anniversary Edition Bike)ಅನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಹೈನೆಸ್ CB350(Honda H’Ness CB350) ಮಾದರಿಯು ಯಶಸ್ವಿಯಾಗಿ 1 ವರ್ಷ ಪೂರೈಸಿದೆ. ಇದೀಗ ಮೊದಲ ವರ್ಷದ ಸಂಭ್ರಮಕ್ಕಾಗಿ ಕಂಪನಿಯು ಹೆಚ್ಚುವರಿ ಫೀಚರ್ಸ್ ಹೊಂದಿರುವ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ರಿಲೀಸ್ ಮಾಡಿದೆ. ಗುರುಗ್ರಾಮ್‌ನಲ್ಲಿ ನೂತನ ಬೈಕ್ ಮಾದರಿಯ ಎಕ್ಸ್‌ ಶೋ ರೂಂ ಬೆಲೆ 2.03 ಲಕ್ಷ ರೂ. ಇದೆ.


ಇದನ್ನೂ ಓದಿ: Jio ಬಳಕೆದಾರರಿಗೆ Good News! ಈ ಪ್ರೀಪೇಡ್ ಪ್ಲಾನ್ ಗಳ ಮೇಲೆ ಸಿಗುತ್ತಿದೆ ಶೇ.20 ರಷ್ಟು ರಿಯಾಯಿತಿ


ಕಂಪನಿಯು 1 ವರ್ಷದಲ್ಲಿ ಹೈನೆಸ್ CB350 ಬೈಕ್ ನ 35,000 ಯುನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಿದೆ. ಕಂಪನಿಯ ಪ್ರೀಮಿಯಂ ಬೈಕ್ ಡೀಲರ್‌ಶಿಪ್ ಬಿಗ್‌ವಿಂಗ್‌ನಲ್ಲಿ ದೇಶಾದ್ಯಂತ ವಿಶೇಷ ಆವೃತ್ತಿಯ ಮೋಟಾರ್‌ಸೈಕಲ್‌ಗಾಗಿ ಅಧಿಕೃತ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲಾಗಿದೆ. ಹೈನೆಸ್ CB350 ಆ್ಯನಿವರ್ಸರಿ ಮಾದರಿಯು ಪರ್ಲ್ ಇಗ್ನಿಯಸ್ ಬ್ಲಾಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್(Green Metallic) ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಹೊಸ ಬಣ್ಣ ಮತ್ತು ಆ್ಯನಿವರ್ಸರಿ ಬ್ಯಾಡ್ಜ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.


[[{"fid":"223787","view_mode":"default","fields":{"format":"default","field_file_image_alt_text[und][0][value]":"Honda-2.jpg","field_file_image_title_text[und][0][value]":"Honda-2.jpg"},"type":"media","field_deltas":{"1":{"format":"default","field_file_image_alt_text[und][0][value]":"Honda-2.jpg","field_file_image_title_text[und][0][value]":"Honda-2.jpg"}},"link_text":false,"attributes":{"alt":"Honda-2.jpg","title":"Honda-2.jpg","class":"media-element file-default","data-delta":"1"}}]]


ವಿಶೇಷ ಆವೃತ್ತಿಯನ್ನು ವಿಶೇಷವಾಗಿ ಕಾಣುವಂತೆ ಮಾಡಲು ಕಂಪನಿಯು ಅನೇಕ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದೆ. ಸ್ಟ್ಯಾಂಡರ್ಡ್ ಹೈನೆಸ್ CB350 ಮಾದರಿಗಿಂತಲೂ ಆ್ಯನಿವರ್ಸರಿ ಎಡಿಷನ್(Honda CB350) ಬೆಲೆ 4 ಸಾವಿರ ರೂ.ನಷ್ಟು ಹೆಚ್ಚಿದೆ. ವಿವಿಧ ಬಣ್ಣದ ಆಯ್ಕೆಗಳೊಂದಿಗೆ ಸಿಂಕ್ರೊನೈಸ್ ಮಾಡಲಾದ ಕ್ರೋಮ್ ಹ್ಯಾಂಡಲ್ ಹೊಸ ಬೈಕ್ ಆಕರ್ಷಣೆಗೆ ಕಾರಣವಾಗಿದೆ.


ಇದನ್ನೂ ಓದಿ: ಕಾರು ಖರೀದಿದಾರರಿಗೆ ಸಿಹಿಸುದ್ದಿ!: ಸರ್ಕಾರ 3 ಲಕ್ಷದವರೆಗೆ ಸಹಾಯಧನ ನೀಡುತ್ತಿದೆ, ವಿವರಗಳನ್ನು ನೋಡಿ


ಹೊಸ ಹೈನೆಸ್ CB350 ಆನಿವರ್ಸರಿ ಆವೃತ್ತಿಯು 349 cc ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 20.8 bhp ಪವರ್ ಮತ್ತು 30 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ ಗೆ ಜೋಡಿಸಲಾಗಿದೆ. ಇದು ಸ್ಲಿಪ್ಪರ್ ಕ್ಲಚ್ ಮತ್ತು ಅಸಿಸ್ಟ್ ಫಂಕ್ಷನ್‌ನೊಂದಿಗೆ ಬರುತ್ತದೆ. ಹೊಸ ಬೈಕ್ ಮಾದರಿಯು ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.


ಹೈನೆಸ್ CB350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ CB ಬೈಕ್ ಸರಣಿಯನ್ನು ನೆನಪಿಸುತ್ತದೆ. ರೌಂಡ್ LED ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್‌ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದ್ದು, 15 ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಣೆಯೊಂದಿಗೆ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ. ಎಂಜಿನ್ ಕವರ್, ಎಕ್ಸಾಸ್ಟ್ ಸೇರಿ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದೆ. ಹೊಸ ಬೈಕ್‌ಗೆ ಸಂಪೂರ್ಣ ಡಿಜಿಟಲ್ ಉಪಕರಣ ಫಲಕವನ್ನು ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.