ಕೇವಲ 625 ರೂ.ಗೆ ಖರೀದಿಸಿ, ಮೂರು ದಿನಗಳವರೆಗೆ ಚಾರ್ಜ್ ಉಳಿಯುವ ಈ ಫೋನ್
ಇಂದು ಕೂಡಾ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಸ್ಟ್ರಾಂಗ್ ಬ್ಯಾಟರಿ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದಿದ್ದರೆ, ಇಂದಿನ ಆಫರ್ ಉಪಯುಕ್ತವಾಗಲಿದೆ.
ನವದೆಹಲಿ : ಪ್ರತಿದಿನ Amazon ನಲ್ಲಿ ಹಲವಾರು ಉತ್ಪನ್ನಗಳ ಮೇಲೆ ಆಫರ್ ಗಳು ಸಿಗುತ್ತಲೇ ಇರುತ್ತವೆ. Amazon Deal Of The Day ಆಫರ್ ಮೂಲಕ ಪ್ರತಿದಿನ ಕೆಲವು ಉತ್ಪನ್ನಗಳ ಮೇಲೆ ರಿಯಾಯಿತಿ ಲಭ್ಯವಿರುತ್ತದೆ. ಇಂದು ಕೂಡಾ, ಸ್ಮಾರ್ಟ್‌ಫೋನ್‌ಗಳು (Smartphone offer) ಮತ್ತು ಇತರ ಸಾಧನಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಸ್ಟ್ರಾಂಗ್ ಬ್ಯಾಟರಿ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದಿದ್ದರೆ, ಇಂದಿನ ಆಫರ್ ಉಪಯುಕ್ತವಾಗಲಿದೆ. Tecno ನ 7000mAh ಬ್ಯಾಟರಿ ಸ್ಮಾರ್ಟ್‌ಫೋನ್ ಅನ್ನು ಇಂದಿನ ಡೀಲ್ ನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. Tecno POVA 2 ಅನ್ನು ಕೇವಲ 625 ರೂ.ಗೆ ಖರೀದಿಸಬಹುದು.
Tecno POVA 2 ಆಫರ್ ಮತ್ತು ರಿಯಾಯಿತಿಗಳು :
Tecno POVA 2 ನ 6GB RAM, 128GB ಸ್ಟೋರೇಜ್ ರೂಪಾಂತರದ ಲಾಂಚ್ ಪ್ರೈಸ್ 15,499 ರೂ. ಆಗಿದೆ. ಆದರೆ ಈ ಫೋನ್ ಅನ್ನು ಅಮೆಜಾನ್ ನಲ್ಲಿ (Amazon) 13,499 ರೂ.ಗೆ ಖರೀದಿಸಬಹುದು. ಅಂದರೆ ಫೋನ್ ಮೇಲೆ 2 ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ. ಫೋನ್‌ನಲ್ಲಿ ಬ್ಯಾಂಕ್ ಮತ್ತು ವಿನಿಮಯ ಆಫರ್ ಗಳು ಸಹ ಇವೆ. ಇದು ಫೋನ್‌ನ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಎಚ್ಚರ! ನಕಲಿ WhatsApp, Facebook, Instagram ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿದ್ದೀರಾ? ಈಗಲೇ ಪರಿಶೀಲಿಸಿ
Tecno POVA 2 ಬ್ಯಾಂಕ್ ಆಫರ್ :
ICICI ಕ್ರೆಡಿಟ್ ಕಾರ್ಡ್ (Credit card) ಮೂಲಕ ಪಾವತಿಸಿದರೆ, ಫೋನ್ ಮೇಲೆ 674 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಇದರ ನಂತರ ಫೋನ್ ಬೆಲೆ 12,825 ರೂ. ಆಗಿರಲಿದೆ. ಅದರ ನಂತರ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ (exchange offer) ಕೂಡ ಇದೆ. ಹಾಗಾಗಿ ಫೋನ್‌ನ ಬೆಲೆ ಗಮನಾರ್ಹವಾಗಿ ಇಳಿಯುತ್ತದೆ.
Tecno POVA 2 ವಿನಿಮಯ ಕೊಡುಗೆ :
Tecno POVA 2 ಮೇಲೆ 12,200 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಸಿಗುತ್ತದೆ. ಹಳೆಯ ಸ್ಮಾರ್ಟ್‌ಫೋನ್ (smartphone) ಅನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ 12,200 ರೂ. ಸಿಗುತ್ತದೆ.
ಇದನ್ನೂ ಓದಿ : ಮೊಬೈಲ್ ರೀಚಾರ್ಜ್ ಮಾಡಿದರೆ Paytm ನೀಡುತ್ತಿದೆ 1,000 ರೂ. ವರೆಗೆ ಕ್ಯಾಶ್‌ಬ್ಯಾಕ್
Tecno POVA 2 ವಿಶೇಷಣಗಳು :
Tecno POVA 2 6.95-ಇಂಚಿನ ಡಿಸ್ಪ್ಲೇ ಹೊಂದಿದೆ. ಇದಲ್ಲದೆ, ಫೋನ್ 7000mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಕ್ಯಾಮರಾ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಇದೆ. ಎರಡು 2-2MP ಕ್ಯಾಮೆರಾಗಳೊಂದಿಗೆ 48MP ಪ್ರಾಥಮಿಕ ಕ್ಯಾಮೆರಾ ಮತ್ತು AI ಲೆನ್ಸ್ ಅನ್ನು ಒಳಗೊಂಡಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.