ಮೊಬೈಲ್ ರೀಚಾರ್ಜ್‌ ಮಾಡಿದರೆ Paytm ನೀಡುತ್ತಿದೆ 1,000 ರೂ. ವರೆಗೆ ಕ್ಯಾಶ್‌ಬ್ಯಾಕ್

 Paytm ಮೂಲಕ ರೀಚಾರ್ಜ್ ಮಾಡಿದರೆ  ಪ್ರಚಂಡ ಕ್ಯಾಶ್ಬ್ಯಾಕ್ ಸಿಗಲಿದೆ. Paytm ತನ್ನ ಬಳಕೆದಾರರಿಗೆ ಉತ್ತಮ ಆಫರ್ ಕೂಡಾ ನೀಡುತ್ತಿದೆ

Written by - Ranjitha R K | Last Updated : Dec 28, 2021, 04:28 PM IST
  • Paytm ಮೂಲಕ ರೀಚಾರ್ಜ್ ಮಾಡಿದರೆ ಪ್ರಚಂಡ ಕ್ಯಾಶ್ಬ್ಯಾಕ್
  • ಗೆಲ್ಲಬಹುದು 1,000 ವರೆಗೆ ಕ್ಯಾಶ್‌ಬ್ಯಾಕ್
  • ಈ ಬಳಕೆದಾರರಿಗೆ ಸಿಗಲಿದೆ ಪ್ರಯೋಜನ
ಮೊಬೈಲ್ ರೀಚಾರ್ಜ್‌ ಮಾಡಿದರೆ Paytm ನೀಡುತ್ತಿದೆ 1,000 ರೂ. ವರೆಗೆ ಕ್ಯಾಶ್‌ಬ್ಯಾಕ್  title=
ಈ ಬಳಕೆದಾರರಿಗೆ ಸಿಗಲಿದೆ ಪ್ರಯೋಜನ (file photo)

ನವದೆಹಲಿ : Paytm Cashback : ಇತ್ತೀಚೆಗೆ, Jio, Airtel ಮತ್ತು Vodafone Idea ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಈ ಕಾರಣದಿಂದಾಗಿ ಈಗ ಮೊಬೈಲ್ ರಿಚಾರ್ಜ್ ಮಾಡಬೇಕಾದರೆ ಗ್ರಾಹಕರು  ಮೊದಲಿಗಿಂತ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲ್ ವಾಲೆಟ್ ಆಪ್ ಪೇಟಿಎಂ ಮೊಬೈಲ್ ರೀಚಾರ್ಜ್ ಬಳಕೆದಾರರಿಗೆ ಸಮಾಧಾನ ತಂದಿದೆ. Paytm ಮೂಲಕ ರೀಚಾರ್ಜ್ ಮಾಡಿದರೆ  ಪ್ರಚಂಡ ಕ್ಯಾಶ್ಬ್ಯಾಕ್ ಸಿಗಲಿದೆ. Paytm ತನ್ನ ಬಳಕೆದಾರರಿಗೆ ಉತ್ತಮ ಆಫರ್ ಕೂಡಾ ನೀಡುತ್ತಿದೆ. ಈ ಕೊಡುಗೆಯ ಅಡಿಯಲ್ಲಿ ಗ್ರಾಹಕರು ರೀಚಾರ್ಜ್‌ ಮಾಡಿದರೆ  1,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. 

paytm ನ ಕ್ಯಾಶ್‌ಬ್ಯಾಕ್ ಆಫರ್ : 
 ಮೊಬೈಲ್ ಸಂಖ್ಯೆಯನ್ನು Paytm ಮೂಲಕ ರೀಚಾರ್ಜ್ ಮಾಡಿದರೆ,  ಉತ್ತಮ ಕ್ಯಾಶ್‌ಬ್ಯಾಕ್‌ನ ಪ್ರಯೋಜನವನ್ನು ಪಡೆಯಬಹುದು. ಮೊದಲ ಬಾರಿಗೆ Paytm ಮೂಲಕ ನಿಮ್ಮ ರೀಚಾರ್ಜ್ (Recharge plan) ಮಾಡುತ್ತಿದ್ದರೆ FLAT15 ಪ್ರೊಮೊಕೋಡ್ ಬಳಸಬೇಕಾಗುತ್ತದೆ. ಈ ಪ್ರೋಮೋಕೋಡ್ ಅನ್ನು ಪಡೆದುಕೊಳ್ಳುವ ಮೂಲಕ 15 ರೂ . ಫ್ಲಾಟ್ ರಿಯಾಯಿತಿಯನ್ನು ಸಿಗಲಿದೆ. ಇಷ್ಟೇ ಅಲ್ಲ,  WIN1000 ಪ್ರೋಮೋಕೋಡ್ ಅನ್ನು ಬಳಸಿದರೆ, 1,000 ವರೆಗೆ ಕ್ಯಾಶ್‌ಬ್ಯಾಕ್ ಗೆಲ್ಲಬಹುದು. 

ಇದನ್ನೂ ಓದಿ  : Vodafone-Ideaನ ಈ ಪ್ಲಾನ್ ನಿಂದ ಕಂಗೆಟ್ಟ Jio, ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ 42GB ಡಾಟಾ

ಈ ಬಳಕೆದಾರರಿಗೆ ಸಿಗಲಿದೆ ಪ್ರಯೋಜನ : 
Paytm ನ ಈ ಕ್ಯಾಶ್‌ಬ್ಯಾಕ್ (Cashback offer)  ಕೊಡುಗೆಯನ್ನು ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್‌ನಲ್ಲಿ ಪಡೆಯಬಹುದು. ಅಂದರೆ, ಜಿಯೋ, BSNL, Airtel ಮತ್ತು Vodafone Idea ದ ಎಲ್ಲಾ ಬಳಕೆದಾರರಿಗೆ ಈ ಕೊಡುಗೆ ಲಭ್ಯವಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಪ್ರೋಸೆಸ್ಸಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 

ಇದನ್ನೂ ಓದಿ  : 5G Service: ಇಂಟರ್ನೆಟ್ ಬಳಕೆದಾರರಿಗೆ ಸಿಹಿ ಸುದ್ದಿ! ಹೊಸ ವರ್ಷದಲ್ಲಿ ಈ ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News