how far mobile should be kept while sleeping: ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಇದ್ದೇ ಇದೆ.  ಹೋದಲ್ಲಿ ಬಂದಲ್ಲಿ, ವಿಧವಿಧವಾದ ಮೊಬೈಲ್‌ ಫೋನ್ʼಗಳನ್ನು ಕಾಣಬಹುದು. ಇನ್ನು ಸಾಮಾನ್ಯವಾಗಿ ರಾತ್ರಿ ಮಲಗುವಾಗ ಸ್ಮಾರ್ಟ್‌ ಫೋನ್‌ ಅನ್ನು ದಿಂಬಿನ ಪಕ್ಕದಲ್ಲಿ ಇಟ್ಟು ಮಲಗುತ್ತೇವೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬುದು ತಜ್ಞರ ವಾದ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಈʼ ಖ್ಯಾತ ನಟಿಯಿಂದ ಶಾರುಖ್-ಗೌರಿ ಫಸ್ಟ್‌ ನೈಟ್ ಹಾಳಾಗಿತ್ತಂತೆ!! ಬೇಸರಗೊಂಡ ಕಿಂಗ್ ಖಾನ್ ಪತ್ನಿ ಮಾಡಿದ್ದೇನು ಗೊತ್ತಾ?   


ಹೀಗಿರುವಾಗ ಕೆಲ ಸಮಸ್ಯೆಗಳಿಂದ ದೂರವಿರಬೇಕಾದರೆ, ಮೊಬೈಲ್‌ ಅನ್ನು ಸಹ ತಲೆ ಬಳಿಯಿಂದ ದೂರವಿಡಬೇಕು.  ಅಂದರೆ 3 ರಿಂದ 4 ಅಡಿ ದೂರದಲ್ಲಿ ಫೋನ್ ಇಟ್ಟುಕೊಳ್ಳಬೇಕು.


ನಿದ್ರಾ ಭಂಗ: ಸ್ಮಾರ್ಟ್‌ ಫೋನ್‌ʼಗಳ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಈ ಮೂಲಕ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಫೋನ್ ನೋಟಿಫಿಕೇಶನ್ ಮತ್ತು ಅಲರ್ಟ್‌ʼಗಳು ನಿದ್ರೆಗೆ ಭಂಗ ತರಬಹುದು.


ಸ್ಫೋಟಗೊಳ್ಳುವ ಅಪಾಯ: ಸ್ಮಾರ್ಟ್‌ಫೋನ್ ಅನ್ನು ದಿಂಬಿನ ಕೆಳಗೆ ಇಡುವುದರಿಂದ ಶಾಖದ ಶೇಖರಣೆಗೆ ಕಾರಣವಾಗಬಹುದು. ಇದು ಫೋನ್ ಹೆಚ್ಚು ಬಿಸಿಯಾಗಲು ಮತ್ತು ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.


ಮಾನಸಿಕ ಒತ್ತಡ: ಸ್ಮಾರ್ಟ್‌ಫೋನ್‌ನ ನಿರಂತರ ಬಳಕೆಯು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ರಾತ್ರಿ ವೇಳೆ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ದೊರೆಯುವುದಿಲ್ಲ. ದಿನವಿಡೀ ಒತ್ತಡವನ್ನು ಅನುಭವಿಸಲು ಪ್ರಾರಂಭಿಸಬಹುದು.


ಇದನ್ನೂ ಓದಿ: ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ವಿರಾಟ್‌ ಕೊಹ್ಲಿ!? ಪ್ರೊಟೆಸ್ಟ್‌ʼನಲ್ಲಿ ಭಾಗಿಯಾದ ವಿಡಿಯೋ


ಆರೋಗ್ಯ ಸಮಸ್ಯೆಗಳು: ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್‌ ಹತ್ತಿರ ಇರುವುದು ಕಣ್ಣಿನ ಕಿರಿಕಿರಿ, ತಲೆನೋವು ಮತ್ತು ಕಿವಿ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ರಾತ್ರಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ದೂರವಿಡುವುದು ನಿದ್ರೆಯನ್ನು ಸುಧಾರಿಸುವುದಲ್ಲದೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.