ಆಪಲ್‌ನ ಐಫೋನ್ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿದೆ.  ಕಳೆದ ವರ್ಷ ಬಿಡುಗಡೆಯಾದ ಐಫೋನ್ 13 ರಾಕ್ ಮಾಡುತ್ತಿದೆ.  ಇವೆಲ್ಲದರ ನಡುವೆ ಐಫೋನ್ ಅನ್ನು ಫುಲ್ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬುದು ಸಾಮಾನ್ಯವಾಗಿ  ಜನರ ಮನಸ್ಸಿನಲ್ಲಿ  ಮೂಡುವ ಪ್ರಶ್ನೆ ಆಗಿದೆ.  ಫೋನ್ ಅನ್ನು ಚಾರ್ಜ್ ಮಾಡಲು ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂದು ಸಂಶೋಧನೆಯೊಂದು ಕಂಡು ಹಿಡಿದಿದೆ.


COMMERCIAL BREAK
SCROLL TO CONTINUE READING

ಈ ಕುರಿತು ನಡೆಸಲಾಗಿರುವ ಸಂಶೋಧನೆಯ ಸಮಯದಲ್ಲಿ, ಐಫೋನ್ ಅನ್ನು ಚಾರ್ಜ್ ಮಾಡಲು ಎಷ್ಟು ವೆಚ್ಚವಾಗುತ್ತದೆ? ಅಲ್ಲದೆ ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಬೇಕೋ ಬೇಡವೋ ಎಂಬಿತ್ಯಾದಿ ಮಾಹಿತಿಯ ಲಭ್ಯವಾಗಿದೆ. ಈ ಬಗ್ಗೆ ವರದಿಯಲ್ಲಿ ಏನು ಹೇಳಲಾಗಿದೆ ಎಂದು ತಿಳಿಯೋಣ...


ಇದನ್ನೂ ಓದಿ- ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !


ಐಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಪವರ್ ಬೇಕಾಗುತ್ತದೆ?
ಐಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ವಿದ್ಯುತ್ ಹೆಚ್ಚು ಬಳಕೆಯಾಗುವುದಿಲ್ಲ ಎಂದು ತಿಳಿದುಬಂದಿದೆ.


ಐಫೋನ್ ಅನ್ನು ಚಾರ್ಜ್ ಮಾಡಲು ಎಷ್ಟು ವೆಚ್ಚವಾಗುತ್ತದೆ?
Uswitch ನ ಸಂಶೋಧನೆಯ ಪ್ರಕಾರ, ದಿನಕ್ಕೆ ಒಮ್ಮೆ ಐಫೋನ್ ಅನ್ನು ಫುಲ್ ಚಾರ್ಜ್ ಮಾಡುವುದರಿಂದ ವರ್ಷದಲ್ಲಿ ಸರಾಸರಿ 5 ಪೌಂಡ್‌ಗಳಿಗಿಂತ ಕಡಿಮೆ (Rs 513) ವೆಚ್ಚವಾಗುತ್ತದೆ ಎಂದು ತಿಳಿದುಬಂದಿದೆ. iPhone 12 Pro Max ಅನ್ನು ಚಾರ್ಜ್ ಮಾಡುವುದರಿಂದ ವರ್ಷಕ್ಕೆ £3.14 (Rs 322) ವೆಚ್ಚವಾಗುತ್ತದೆ. ಇದು ದಿನಕ್ಕೆ £1p (Rs 1) ಕ್ಕಿಂತ ಕಡಿಮೆ ಮತ್ತು ತಿಂಗಳಿಗೆ £26p (Rs 26) ಮಾತ್ರ. ಫೋನ್ 20W ಚಾರ್ಜರ್ ಅನ್ನು ಬಳಸುತ್ತದೆ ಮತ್ತು ಪೂರ್ಣ ಬ್ಯಾಟರಿಯನ್ನು ಚಾರ್ಜ್ ಮಾಡಲು ಎರಡು ಗಂಟೆ 27 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. Uswitch ಮೊತ್ತವನ್ನು ಲೆಕ್ಕಾಚಾರ ಮಾಡಲು ಪ್ರತಿ ಕಿಲೋವ್ಯಾಟ್ ಗಂಟೆಗೆ 17.2p ದರವನ್ನು ಬಳಸಿದೆ.


ಇದನ್ನೂ ಓದಿ- Whatsapp Loan: ಯಾವುದೇ ದಾಖಲೆಯಿಲ್ಲದೆ ಕೇವಲ 30 ಸೆಕೆಂಡುಗಳಲ್ಲಿ ಸಾಲ ನೀಡುತ್ತೆ ವಾಟ್ಸಾಪ್ 


ಐಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡಬೇಕೇ?
ಬೆಂಕಿಯ ಅಪಾಯದ ಕಾಳಜಿಯಿಂದಾಗಿ ಕೆಲವರು ರಾತ್ರಿಯಿಡೀ ತಮ್ಮ ಐಫೋನ್ ಅನ್ನು ಚಾರ್ಜ್ ಮಾಡುವ ಬಗ್ಗೆ ಜಾಗರೂಕರಾಗಿರುತ್ತಾರೆ. ಆದರೆ ನೀವು ಸರಿಯಾದ ಚಾರ್ಜರ್ ಅನ್ನು ಬಳಸುವಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಮತ್ತು ಅದನ್ನು ಎಂದಿಗೂ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳದಿದ್ದರೆ, ಫೋನ್ ಸುರಕ್ಷಿತವಾಗಿರುತ್ತದೆ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಫೋನ್ ಬ್ಯಾಟರಿ ಸುರಕ್ಷಿತವಾಗಿರುವುದಿಲ್ಲ. ಇದು ನಿಮ್ಮ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ ಮತ್ತು ತ್ವರಿತವಾಗಿ ಬದಲಾಯಿಸಬೇಕಾಗುತ್ತದೆ. ಮುಖ್ಯವಾದ ವಿಷಯವೆಂದರೆ ಫೋನ್ ಬ್ಯಾಟರಿಯ ಜೀವಿತಾವಧಿ ದೃಷ್ಟಿಯಿಂದ ಯಾವುದೇ ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.