Call Recording Feature: ಕಾಲ್ ರೆಕಾರ್ಡಿಂಗ್ ಎಂಬ ಪದವನ್ನು ನೀವು ಕೇಳಿರಬಹುದು. ಬೇರೆ ಬೇರೆ ಕಾರಣಗಳಿಗಾಗಿ ಫೋನ್ ಸಂಭಾಷಣೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಅದರ ದುಷ್ಪರಿಣಾಮಗಳು ಕೂಡಾ ಇವೆ. ಜನರ ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ, ಗೂಗಲ್ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಕಾಲ್  ರೆಕಾರ್ಡಿಂಗ್ ಅನ್ನು ನಿಷೇಧಿಸಿದೆ. ಡೀಫಾಲ್ಟ್ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಹೊಂದಿರುವ ಆಂಡ್ರಾಯ್ಡ್ ಫೋನ್‌ಗಳು ಇನ್ನೂ ಕೂಡಾ ಕರೆಗಳನ್ನು ರೆಕಾರ್ಡ್ ಮಾಡಬಹುದು. ಆದರೆ ನಮ್ಮ ಫೋನ್ ನಲ್ಲಿ ನಾವೇ ಕಾಲ್ ರೆಕಾರ್ಡ್ ಮಾಡಿಕೊಳ್ಳುವುದು ಬೇರೆ.  ಬೇರೆಯವರು ನಮ್ಮ ಫೋನ್ ಕರೆಗಳನ್ನು ರೆಕಾರ್ಡ್ ಮಾಡುತ್ತಿದ್ದರೆ ಆಗ ಅಪಾಯ ಎದುರಾಗಲೂಬಹುದು. ಹಾಗಿದ್ದರೆ ನಮ್ಮ ಕಾಲ್ ಗಳನ್ನೂ ಬೇರೆಯವರು ರೆಕಾರ್ಡ್ ಮಾಡುತ್ತಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ? 


COMMERCIAL BREAK
SCROLL TO CONTINUE READING

ಈ ಚಿಹ್ನೆಗಳತ್ತ  ಗಮನ ಕೊಡಿ :
ಕರೆ ರೆಕಾರ್ಡಿಂಗ್‌ಗಳನ್ನು ಪತ್ತೆ ಹಚ್ಚುವಾಗ ಸ್ವಲ್ಪ ಎಚ್ಚರದಿಂದಿರಬೇಕು. ನಿಮಗೆ ಕರೆ ಬಂದಾಗ ಅಥವಾ ನೀವು ಯಾರಿಗಾದರೂ ಕರೆ ಮಾಡಿದಾಗ, ಕೆಲವು ವಿಷಯಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ನೀವು ಫೋನ್ ನಲ್ಲಿ ಮಾತನಾಡುವಾಗ ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. 


ಇದನ್ನೂ ಓದಿ : WhatsApp Trick: ಈಗ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ ಅನ್ನು ವಾಟ್ಸಾಪ್ ಮೂಲಕವೂ ತಿಳಿಯಬಹುದು


1. ಆಂಡ್ರಾಯ್ಡ್ ಫೋನ್ ಗಳಲ್ಲಿ  ಡೀಫಾಲ್ಟ್ ಫೀಚರ್ ಬಳಸಿ ಕಾಲ್ ರೆಕಾರ್ಡಿಂಗ್ ಮಾಡುವ ವೇಳೆ ಪದೇ ಪದೇ ಬೀಪ್ ಸೌಂಡ್ ಕೇಳಿ ಬರುತ್ತದೆ. ಕರೆ ಸಮಯದಲ್ಲಿ ಬೀಪ್ ಶಬ್ದವು ಪದೇ ಪದೇ ಕೇಳಿ ಬಂದರೆ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. 
2. ಅನೇಕ ದೇಶಗಳಲ್ಲಿ ಕರೆ ರೆಕಾರ್ಡಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಮೊಬೈಲ್ ತಯಾರಕರು ಬೀಪ್ ಆಪ್ಶನ್ ಹಾಕುವುದರಿಂದ ರೆಕಾರ್ಡಿಂಗ್ ಆಗುತ್ತಿದೆ ಎನ್ನುವುದನ್ನು ತಿಳಿಯಬಹುದು. 
ಪ್ರತಿ ಫೋನ್ ನಲ್ಲಿ ಈ ವೈಶಿಷ್ಟ್ಯ ಇಲ್ಲದಿದ್ದರೂ, ಕರೆಯೊಂದಿಗೆ ಬೀಪ್ ಧ್ವನಿ ಬಂದರೆ, ಅದು ಕರೆ ರೆಕಾರ್ಡಿಂಗ್‌ನ ಸೂಚನೆಯಾಗಿದೆ. 


ಇದನ್ನೂ ಓದಿ : iPhone 13ಗೆ ಸೆಡ್ಡು ಹೊಡೆಯಲು ಬಂದಿವೆ Vivoನ ಪ್ರಬಲ ಸ್ಮಾರ್ಟ್‌ಫೋನ್‌ಗಳು!


3. ನಿಮ್ಮ ಫೋನ್ ಸ್ಕ್ರೀನ್ ಬಗ್ಗೆಯೂ ಕಾಳಜಿ ವಹಿಸಿ. ನೀವು ಕಮಾಂಡ್ ನೀಡದೆಯೇ, ನೋಟಿಫಿಕೇಶನ್ ಬಾರ್‌ನಲ್ಲಿ ಮೈಕ್ ಐಕಾನ್ ಕಾಣುತ್ತಿದ್ದರೆ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎಂದರ್ಥ.  
4. ಅನೇಕ ಫೋನ್‌ಗಳು ಡೀಫಾಲ್ಟ್ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿಲ್ಲ. ಹೀಗಿರುವಾಗ ಕೆಲವರು ಫೋನ್ ಅನ್ನು ಸ್ಪೀಕರ್‌ನಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ. ಹೀಗೆ ಮಾಡುವಾಗ ಇನ್ನೊಂದು ಫೋನ್‌ನಲ್ಲಿ ರೆಕಾರ್ಡರ್ ಅನ್ನು ಆನ್ ಮಾಡಿ ರೆಕಾರ್ಡ್ ಮಾಡುತ್ತಾರೆ.  ಈ ಸಮಯದಲ್ಲಿ ಎದುರಿಗಿರುವ ವ್ಯಕ್ತಿ  ಸ್ಪೀಕರ್ ಆನ್ ಮಾಡುವ ಮೂಲಕ ಮಾತನಾಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಸ್ಪೀಕರ್ ಜೊತೆ ಮಾತನಾಡುವಾಗ ಧ್ವನಿ ಪ್ರತಿಧ್ವನಿಸುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.