ನವದೆಹಲಿ: Vivo ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ Vivo X80 ಸರಣಿಯ 2 ಫೋನುಗಳನ್ನು ಪರಿಚಯಿಸಿದೆ. ಕಂಪನಿಯು Vivo X80 ಮತ್ತು X80 Pro ಫೋನ್ಗಳನ್ನು ಅನಾವರಣಗೊಳಿಸಿದೆ. ಈಗಾಗಲೇ ಈ ಸಾಧನಗಳನ್ನು ಚೀನಾ ಮತ್ತು ಇತರ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರೀಮಿಯಂ ಬೆಲೆಯಲ್ಲಿ ಉತ್ತಮ ಫೋಟೋ ಮತ್ತು ವಿಡಿಯೋ ಶೂಟಿಂಗ್ ಅನುಭವ ಒದಗಿಸುವ ಗುರಿಯೊಂದಿಗೆ ಇದೀಗ Vivo X80 ಸರಣಿಯ ಪೋನುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಫೋನುಗಳ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಿರಿ.
ಭಾರತದಲ್ಲಿ Vivo X80, Vivo X80 Pro ಬೆಲೆ
Vivo X80 Proನ 12GB+256GB ಸ್ಟೋರೇಜ್ ರೂಪಾಂತರವು 79,999 ರೂ. ಬೆಲೆ ಇದೆ. ಅದೇ ರೀತಿ X80 ಎರಡು ಮಾದರಿಯಲ್ಲಿ ಬಂದಿದೆ. 12GB+256GB ರೂಪಾಂತರದ ಫೋನಿಗೆ ರೂ 59,999 ರೂ. ಇದ್ದರೆ, 8GB+128GB ರೂಪಾಂತರದ ಫೋನಿಗೆ 54,999 ರೂ. ಇದೆ. X80 ಫೋನ್ Cosmic Black ಮತ್ತು Urban Blue ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದ್ದು, X80 Pro ಫೋನ್ Cosmic Black ಒಂದೇ ಕಲರ್ನಲ್ಲಿ ಮಾತ್ರ ಲಭ್ಯವಿದೆ. ಈ ಶ್ರೇಣಿಯಲ್ಲಿ Realme GT 2 Pro, OnePlus 10 Pro ಮತ್ತು iPhone 13 ನಂತಹ ಫೋನ್ಗಳಿವೆ. Vivoದ ಈ ಸಾಧನಗಳು ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ.
Vivo X80 ವೈಶಿಷ್ಟ್ಯಗಳು
Vivo X80 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.78-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಕೇಂದ್ರೀಕೃತ ಪಂಚ್-ಹೋಲ್ ಡಿಸ್ಪ್ಲೇ ಮತ್ತು ಅನನ್ಯ ಬ್ಯಾಕ್ ಪ್ಯಾನೆಲ್ ವಿನ್ಯಾಸವನ್ನು ಸಹ ಒಳಗೊಂಡಿದೆ. ಇದು MediaTek Dimension 9000 ಚಿಪ್ಸೆಟ್ನಿಂದ ಚಾಲಿತವಾಗಿದೆ. ಬಾಕ್ಸ್ ಹೊರಗೆ Android 12ನಲ್ಲಿ ಹ್ಯಾಂಡ್ಸೆಟ್ ರನ್ ಆಗುತ್ತದೆ. ಹ್ಯಾಂಡ್ಸೆಟ್ ಸ್ಟಿರಿಯೊ ಸ್ಪೀಕರ್ಗಳು, ವಿಸಿ ಕೂಲಿಂಗ್ ಸಿಸ್ಟಮ್, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಇದನ್ನೂ ಓದಿ: ಶೀಘ್ರದಲ್ಲೇ ಸ್ಮಾರ್ಟ್ಫೋನ್ಗಳ ಬೆಲೆ ಏರಿಕೆ! ನೀವು ಹೊಸ ಮೊಬೈಲ್ ಖರೀದಿಸಲು ಬಯಸಿದರೆ ಈಗಲೇ ಖರೀದಿಸಿ
Vivo X80 ಕ್ಯಾಮೆರಾ
Vivo X80 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ f/1.75 apertureನೊಂದಿಗೆ 50MP Sony IMX866 RGBW sensorರನ್ನು ಒಳಗೊಂಡಿದೆ. ಇದು 12MP ಅಲ್ಟ್ರಾ-ವೈಡ್ sensor ಮತ್ತು 12MP ಪೋಟ್ರೇಟ್ sensorದೊಂದಿಗೆ ಜೋಡಿಯಾಗಿದ್ದು, f/2.45 apertureನೊಂದಿಗೆ ಮುಂಭಾಗದಲ್ಲಿ 32MP ಕ್ಯಾಮೆರಾವನ್ನು ಹೊಂದಿದೆ. 80W ವೈರ್ಡ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿ ಇರುತ್ತದೆ.
Vivo X80 Pro ವೈಶಿಷ್ಟ್ಯಗಳು
Vivo X80 Pro ಫೋನ್ Qualcomm Snapdragon 8 Gen 1 ಚಿಪ್ಸೆಟ್ನೊಂದಿಗೆ ಬರುತ್ತದೆ. ಈ ಸಾಧನವು IP68 ಜಲ-ನಿರೋಧಕ ವಿಶೇಷತೆಯನ್ನು ಹೊಂದಿದ್ದು, ಪ್ರಮಾಣಿತ ಮಾದರಿಗೆ ಒಂದೇ ರೀತಿಯ ವಿನ್ಯಾಸದಲ್ಲಿ ಲಭ್ಯವಿರುತ್ತದೆ. ಪ್ರೊ ಆವೃತ್ತಿಯು 6.78-ಇಂಚಿನ LTPO ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1,500nits ಗರಿಷ್ಠ brightness ಹೊಂದಿದೆ.
Vivo X80 Pro ಕ್ಯಾಮೆರಾ
Vivo X80 Proನ ಜಾಗತಿಕ ರೂಪಾಂತರವು 50MP ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆವೃತ್ತಿಯು ಫೋಟೋಗ್ರಫಿಗಾಗಿ Sony sensorಅನ್ನು ಬಳಸುತ್ತಿರುವಾಗ, Pro Samsung ISOCELL GNV ಪ್ರಾಥಮಿಕ sensorದೊಂದಿಗೆ ಬರುತ್ತದೆ. ಉತ್ತಮ ಅಲ್ಟ್ರಾ-ವೈಡ್ ಆಂಗಲ್ ಶಾಟ್ಗಳಿಗಾಗಿ ಇದು 48-ಮೆಗಾಪಿಕ್ಸೆಲ್ ಸೋನಿ IMX598 ನೊಂದಿಗೆ ಜೋಡಿಯಾಗಿದೆ. ಪೋರ್ಟ್ರೇಟ್ ಶಾಟ್ಗಳನ್ನು ಸೆರೆಹಿಡಿಯಲು ಸೆಟಪ್ 12-ಮೆಗಾಪಿಕ್ಸೆಲ್ ಸೋನಿ IMX663 sensorಅನ್ನು ಸಹ ಒಳಗೊಂಡಿದೆ. 5x ಆಪ್ಟಿಕಲ್ ಜೂಮ್ ಮತ್ತು 60x ಡಿಜಿಟಲ್ ಜೂಮ್ ಜೊತೆಗೆ 8MP ಪೆರಿಸ್ಕೋಪ್ ಕ್ಯಾಮೆರಾ ಕೂಡ ಇದೆ. ಸಾಧನವು ಹೊಸ Vivo V1 ಪ್ಲಸ್ ಇಮೇಜಿಂಗ್ ಚಿಪ್ ಅನ್ನು ಸಹ ಹೊಂದಿದೆ. ಇದು Night and Low-light Shotsಗಳನ್ನು ನೀಡುತ್ತದೆ.
ಇದನ್ನೂ ಓದಿ: OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ತ್ವರೆ ಮಾಡಿ ಲಾಭ ನಿಮ್ಮದಾಗಿಸಿಕೊಳ್ಳಿ
Vivo X80 Pro ಬ್ಯಾಟರಿ
Vivo X80 Pro ಫೋನ್ 4,700mAh ಬ್ಯಾಟರಿಯನ್ನು ಹೊಂದಿದೆ. ಇದು ಪ್ರಮುಖ ಫೋನ್ ಆಗಿರುವುದರಿಂದ Vivo 50W ವೈರ್ಲೆಸ್ ಚಾರ್ಜಿಂಗ್ಗೆ ಬೆಂಬಲವನ್ನು ಒದಗಿಸಿದೆ. ಸಾಧನವು 80W ವೈರ್ಡ್ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿದೆ. ಇದು ಸ್ಟಿರಿಯೊ ಸ್ಪೀಕರ್ಗಳು, ಎಕ್ಸ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್ ಮತ್ತು ವಿಸಿ ಚೇಂಬರ್ ಕೂಲಿಂಗ್ ಸಿಸ್ಟಮ್ಗೆ ಬೆಂಬಲಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.