ಬೆಂಗಳೂರು : ಭಾರತದಲ್ಲಿ ಈ ದಿನಗಳಲ್ಲಿ ಇಂಟರ್ನೆಟ್ ಅನ್ನು ಸಾಕಷ್ಟು ಬಳಸಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ವರ್ಕ್ ಫ್ರಮ್ ಹೋಮ್‌ನಿಂದಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕದ ಬೇಡಿಕೆ ಹೆಚ್ಚಾಗಿದೆ. ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಈ ಅವಕಾಶವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಯೋಜನೆಯನ್ನು ತಂದಿದೆ. ಈಗ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ಉಚಿತ ವೈ-ಫೈ ರೂಟರ್ (Free Wi-Fi Router) ಅನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

ಪ್ರತಿ ಸಂಪರ್ಕಕ್ಕಾಗಿ ಪ್ರತಿ ಯೋಜನೆಯೊಂದಿಗೆ ಉಚಿತ ರೂಟರ್ :
ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ, ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಹೊಸ ಗ್ರಾಹಕರನ್ನು ಸೆಳೆಯುವ ಯೋಜನೆಯನ್ನು ಹೊಂದಿದೆ. ಮಾಹಿತಿಯ ಪ್ರಕಾರ, ಟಾಟಾ ಸ್ಕೈ ತನ್ನ ಹೊಸ ಗ್ರಾಹಕರಿಗೆ ಉಚಿತ ವೈ-ಫೈ (Free Wi-Fi) ರೂಟರ್ ನೀಡುತ್ತಿದೆ. ಈ ಯೋಜನೆ ಎಲ್ಲಾ ಯೋಜನೆಗಳೊಂದಿಗೆ ಮಾನ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ.


ಗ್ರಾಹಕರಿಗೆ 300Mbps ಸೂಪರ್‌ಫಾಸ್ಟ್ ವೇಗ ಸಿಗಲಿದೆ :
ವರ್ಕ್ ಫ್ರಮ್ ಹೋಮ್‌ ನಡುವೆ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು ವೇಗವಾಗಿ ಇಂಟರ್ನೆಟ್ (Internet) ವೇಗವನ್ನು ನೀಡುತ್ತಿದ್ದಾರೆ. ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಕೂಡ ಈ ಓಟಕ್ಕೆ ಸೇರಿಕೊಂಡಿದೆ. ಕಂಪನಿಯು ತನ್ನ ಗ್ರಾಹಕರಿಗೆ 300Mbps ವೇಗವನ್ನು ನೀಡುತ್ತಿದೆ.


ಇದನ್ನೂ ಓದಿ - BSNL Special OTT Plans: ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ವಿಶೇಷ ಕೊಡುಗೆ


ಗ್ರಾಹಕರಿಗೆ ಉಚಿತ ಎಕ್ಸ್ಪರ್ಟ್ ಇನ್ಸ್ಟಾಲೇಶನ್ :
ಕಂಪನಿಯು ತನ್ನ ಎಲ್ಲಾ ಹೊಸ ಬ್ರಾಡ್‌ಬ್ಯಾಂಡ್ (Broadband) ಸಂಪರ್ಕಗಳಿಗೆ ಉಚಿತ ಎಕ್ಸ್ಪರ್ಟ್ ಇನ್ಸ್ಟಾಲೇಶನ್ ಸಹ ನೀಡುತ್ತಿದೆ.


ಈ ದಿನಗಳಲ್ಲಿ ದೇಶದಲ್ಲಿ ಇಂಟರ್ನೆಟ್ ಬೇಡಿಕೆ ಹೆಚ್ಚಾಗಿದೆ. ಕರೋನಾವೈರಸ್ ಸೋಂಕಿನ ಹಿನ್ನಲೆಯಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತಿವೆ. ಇದಲ್ಲದೆ ಕರೋನಾವೈರಸ್ ಲಸಿಕೆ ಇನ್ನೂ ಸಾಮಾನ್ಯ ಜನರಿಗೆ ಲಭ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮುಂದಿನ ಕೆಲವು ತಿಂಗಳುಗಳವರೆಗೆ ವರ್ಕ್ ಫ್ರಮ್ ಹೋಮ್‌ (Work From Home) ಮುಂದುವರೆಯುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಟೆಲಿಕಾಂ ಕಂಪನಿಗಳು ಒಂದಕ್ಕಿಂತ ಹೆಚ್ಚು ಬ್ರಾಡ್‌ಬ್ಯಾಂಡ್ ಕೊಡುಗೆಗಳನ್ನು ತರುತ್ತಿವೆ.


ಇದನ್ನೂ ಓದಿ - Samsung Galaxy M02 Features 7000ಕ್ಕೂ ಕಡಿಮೆ ಬೆಲೆಗೆ ಲಾಂಚ್ ಆಗಿದೆ Smsungನ 'Mera M'


ಈ ಮೊದಲು ಬಿಎಸ್ಎನ್ಎಲ್ (BSNL), ರಿಲಯನ್ಸ್ ಜಿಯೋ (Reliance Jio) ಮತ್ತು ಏರ್ಟೆಲ್ (Airtel) ಸಹ ತಮ್ಮ ಬ್ರಾಡ್ಬ್ಯಾಂಡ್ ಯೋಜನೆಗಳಲ್ಲಿ ಅನೇಕ ಕೊಡುಗೆಗಳನ್ನು ತಂದಿವೆ. ಮಾರುಕಟ್ಟೆಯಲ್ಲಿ ಇಂಟರ್ನೆಟ್ ಸಂಪರ್ಕದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ವಿ (Vi) ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.